ಬೆಂಗಳೂರು: ರಾಜ್ಯದಲ್ಲಿ ಆಯುಷ್ಮನ್ ವಯೋ ವಂದನಾ ಕಾರ್ಡ್ ಜಾರಿಯಾಗುವುದಕ್ಕೂ ಮುನ್ನವೇ 70 ವರ್ಷ ಮೇಲ್ಪಟ್ಟರಿಗೆ ಆರೋಗ್ಯೆ ಮಿಮೆಯ ಕಾರ್ಡ್ ವಿತರಿಸಲಗಿದ್ದು, ಇದೀಗ ಈ ಯೋಜನೆಯಡಿ ಚಿಕಿತ್ಸೆಗೆಂದು ಹೋದವರಿಗೆ ಚಿಕಿತ್ಸೆ ಸಿಗದ ಪರಿಣಾಕ ಜನ ಆತಂಕಕ್ಕೀಡಗಿದ್ದಾರೆ,
ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿತ್ತು, ಆದರೆ ಈ ಯೋಜನೆಯ ನಿಗದಿತ ಅನುದಾನದ ಖಚಿತತೆ ಇಲ್ಲದ ಕಾರಣ ರಾಜ್ಯ ಸರ್ಕಾರ ಇನ್ನು ಕೂಡ ಈ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ,
ಇನ್ನೊಂದಡೆ ಈ ಯೋಜನೆಯ ಕಾರ್ಡ್ ಅನ್ನು ವೃದ್ಧರಿಗೆ ವಿತರಿಸುತ್ತಿದ್ದು, ಈ ಹಿನ್ನಲೆ ಎಲ್ಲರೂ ಕೂಡ ಕಾರ್ಡ್ ಪಡೆಯುತ್ತಿದ್ದಾರೆ, ಅಲ್ಲದೇ ಸುಮಾರು 5 ಲಕ್ಷದ ವರೆಗೆ ಆರೋಗ್ಯ ಮಿಮೆ ಭರವಸೆ ಒದಗಿಸುವ ಆಯುಷ್ಮಾನ್ ವಯೋ ವಂದನಾ ಕಾರ್ಡ್ ಹಿಡಿದು ಆಸ್ಪತ್ರೆಗೆ ಹೋಗುತ್ತಿದ್ದಾರೆ,
ಈ ಯೋಜನೆ ಕೇಂದ್ರ ಸರ್ಕಾರ ಶೇ 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 40 ರಷ್ಟು ವೆಚ್ಚ ಭರಿಸಬೇಕಾಗುತ್ತದೆ, ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ 68.98 ಕೋಟಿ ಅನುದಾನ ಅಗತ್ಯವಿದೆ, ಇದರಲ್ಲಿ ಶೇ 60 ರಷ್ಟು ಅನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ, 36.58 ಕೋಟಿ ರೂ ಅನುದಾನ ಪಡೆಯಲು ರಾಜ್ಯ ಅರ್ಹವಾಗಿದೆ, ಅನುದಾನದ ಸಮಸ್ಯೆಯಿಂದ ಯೋಜನೆ ಜಾರಿಯಾಗಿಲ್ಲ ಎಂದು ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ,
Veekay News > State News > ಆಯುಷ್ಮನ್ ಕಾರ್ಡ್ ಇದ್ರೂ ವೇಸ್ಟು- ಇಲ್ಲ ಟ್ರೀಟ್‍ಮೆಂಟ್!
ಆಯುಷ್ಮನ್ ಕಾರ್ಡ್ ಇದ್ರೂ ವೇಸ್ಟು- ಇಲ್ಲ ಟ್ರೀಟ್‍ಮೆಂಟ್!
ವೀ ಕೇ ನ್ಯೂಸ್07/07/2025
posted on
