Live Stream

[ytplayer id=’22727′]

| Latest Version 8.0.1 |

Bengaluru UrbanCultural

AVL​​GI ಗಿರಿನಗರ ವಿಂಗ್‌ನಿಂದ ಅದ್ಹಾರ್ ಶಾಲೆಗೆ ದಾನ

AVL​​GI ಗಿರಿನಗರ ವಿಂಗ್‌ನಿಂದ ಅದ್ಹಾರ್ ಶಾಲೆಗೆ ದಾನ

AVL​​GI (Arya Vysya Ladies Group International) ಎಂಬುದು ಶ್ರೀಮತಿ ಎರಗಂ ವಿ. ಕವಿತಾ ಅವರಿಂದ ಸ್ಥಾಪಿತವಾದ, ಆರ್ಯ ವೈಶ್ಯ ಮಹಿಳೆಯರಿಗಾಗಿ ನಿರ್ಮಿತ ಅಂತರಾಷ್ಟ್ರೀಯ ಮಹಿಳಾ ವೇದಿಕೆ (International Ladies Plaftorm) ಯಾಗಿದೆ. ಈ ಗುಂಪು ದಿನನಿತ್ಯ ಮಹಿಳೆಯರ ಶ್ರೇಯಸ್ಸು, ಜ್ಞಾನ ಹಂಚಿಕೆ, ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ (Cultural)  ಚಟುವಟಿಕೆಗಳ ಮೂಲಕ ಮಹಿಳಾ ಸಬಲೀಕರಣದತ್ತ ಕೆಲಸ ಮಾಡುತ್ತಿದೆ.

AVL​​GI ಯಲ್ಲಿ ಪ್ರತಿದಿನ ವಿಭಿನ್ನ ವಿಷಯಾಧಾರಿತ ಸಂವಾದಗಳು ಹಾಗೂ ಕಾರ್ಯಕ್ರಮಗಳು ನಡೆಯುತ್ತವೆ —
ಸೋಮವಾರ: ಆರೋಗ್ಯ
ಮಂಗಳವಾರ: ಶಿಕ್ಷಣ
ಬುಧವಾರ: ಮನೋರಂಜನೆ
ಗುರುವಾರ: ಮಾರುಕಟ್ಟೆ ದಿನ
ಶುಕ್ರವಾರ: ಸಂಪ್ರದಾಯಗಳು
ಶನಿವಾರ: ಅಡುಗೆ
ಭಾನುವಾರ: ಸೌಂದರ್ಯ ವಿಷಯಗಳು
ಪ್ರತಿ ತಿಂಗಳು ಒಮ್ಮೆ ಜ್ಯೋತಿಷ್ಯ ದಿನ (Horoscope Day) ಹಾಗೂ ವಿವಿಧ ಹಬ್ಬಗಳಲ್ಲಿ ವಿಶೇಷ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ತಜ್ಞರಿಂದ ನೇರ LIVE ಸೆಷನ್‌ಗಳ ಮೂಲಕ ಸದಸ್ಯರಿಗೆ ನೈಜ ಜೀವನದ ಅರಿವು ಮತ್ತು ಪ್ರೇರಣೆಯನ್ನು ನೀಡಲಾಗುತ್ತದೆ.

ಇದೀಗ AVL​​GI ಗಿರಿನಗರ ವಿಂಗ್ “See Through The Heart – Support Adhaar” ಯೋಜನೆ ಮೂಡಿ ₹31,000 ಸಂಗ್ರಹಿಸಿ, ಅದ್ಹಾರ್ ವಿಶೇಷ ಶಾಲೆಗೆ ಫೋಲ್ಡಬಲ್ ಸಿಂಗಲ್ ಕಾಟ್, ಕುರ್ಚಿಗಳು, ಮೇಜುಗಳು, ಗೋದ್ರೆಜ್ ಬೀರು ಮತ್ತು ಓಪನ್ ಸ್ಟೀಲ್ racks ಸೇರಿದಂತೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡಿದೆ.

ಅದ್ಹಾರ್ ಶಾಲೆ ದೃಷ್ಟಿಹೀನ ಮಹಿಳೆ ಅಮೃತವಳ್ಳಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಶಿಕ್ಷಣ, ಪ್ರೇರಣೆ ಹಾಗೂ ಜೀವನದ ಹಾದಿ ತೋರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

AVL​​GI ಗಿರಿನಗರ ವಿಂಗ್ ಅಧ್ಯಕ್ಷೆ ಸಿತಾರಾ ಅಭಿಲಾಶ್ ಹಾಗೂ ಅವರ ತಂಡದ ಸದಸ್ಯರ ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

AVL​​GI ನ ಸ್ಥಾಪಕಿ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಕವಿತಾ ಎರಗಂ ಅವರಿಗೆ ಈ ಅರ್ಥಪೂರ್ಣ ಸೇವಾ ವೇದಿಕೆಯನ್ನು ನೀಡಿದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು.

ವೀ ಕೇ ನ್ಯೂಸ್
";