Live Stream

[ytplayer id=’22727′]

| Latest Version 8.0.1 |

ವೀ ಕೇ ನ್ಯೂಸ್

ವೀ ಕೇ ನ್ಯೂಸ್
735 posts
State News

ಎಚ್ಚರಿಕೆ…! ರಾತ್ರಿ ರಾಜ್ಯದಲ್ಲಿ ಸಾರಿಗೆ ಬಸ್‌ಗಳು ನಿಲ್ಲುವ ಸಾಧ್ಯತೆ!

ಬೆಂಗಳೂರು: ಕರ್ನಾಟಕ ಸಾರಿಗೆ ನೌಕರರ ಸಂಘಟನೆಗಳು ಇಂದು (ಆಗಸ್ಟ್ 5) ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಬಸ್ ಸೇವೆ ಸ್ಥಗಿತಗೊಳ್ಳುವ ಅಪಾಯವಿದೆ. KSRTC,...

State News

ಟಿಪ್ಪು ಸುಲ್ತಾನ್ ಕೆಆರ್‌ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದಾರೆ: ಸಚಿವ ಮಹದೇವಪ್ಪ ಹೇಳಿಕೆ ವಿವಾದಕ್ಕೆ ಕಾರಣ!

ಮಂಡ್ಯ: ಕನ್ನಂಬಾಡಿ ಅಣೆಕಟ್ಟು (ಕೆಆರ್‌ಎಸ್) ಕುರಿತು ನೀಡಿರುವ ಸಚಿವ ಮಹದೇವಪ್ಪ ಹೇಳಿಕೆ ಹೊಸ ವಿವಾದಕ್ಕೆ ಎಳೆದುಕೊಂಡಿದೆ. "ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅವರು ಅಡಿಗಲ್ಲು ಹಾಕಿದ್ದರು" ಎಂಬ...

State News

ಬೆಂಗಳೂರು ಸಂಚಾರ ನಿರ್ವಹಣೆಯಲ್ಲಿ ಎಐ ಮತ್ತು ಡ್ರೋನ್ ತಂತ್ರಜ್ಞಾನ! ಡಿಕೆಶಿ ಹೇಳಿಕೆಗೆ ನೆಟ್ಟಿಗರಿಂದ ತೀಕ್ಷ್ಣ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಗಳ ಪರಿಕರವಾಗಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಭಾನುವಾರ...

State News

ರಾಹುಲ್ ಗಾಂಧಿಯವರೇ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ನೀಡಬೇಕು: ಛಲವಾದಿ ನಾರಾಯಣಸ್ವಾಮಿ

ಮಾನ್ಯ ಶ್ರೀ ರಾಹುಲ್ ಗಾಂಧಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ "ಸೂತ್ರದಾರ"ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು "ಪಾತ್ರದಾರಿ"ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ...

Bengaluru Urban

*ಬೆಂಗಳೂರು ದಕ್ಷಿಣ ವಿಪ್ರ ಬಳಗ: ಕಾರ್ಯಕರ್ತರಿಗೆ ಕೃತಜ್ಞತಾ ಸಭೆ, ಸದಸ್ಯತ್ವ ಅಭಿಯಾನ* *ವಿಪ್ರರು ಸರಸ್ವತಿ ಪುತ್ರರು,ವಿಪ್ರರ ಸಮಾರಂಭಗಳಿಗೆ ಉತ್ತಮ ಜಾಗ ನೀಡಲಾಗುವುದು- ಶಾಸಕ ಎಂ.ಕೃಷ್ಣಪ್ಪ* *ವಿಪ್ರ ಸಮುದಾಯದ...

Mysuru

ಮೈಸೂರು : ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದಿರುವ SSLC ವಿದ್ಯಾರ್ಥಿಗಳಿಗೆ ಸನ್ಮಾನ

ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಮೈಸೂರಿನ ‘ನೃಪತುಂಗ ಕನ್ನಡ ಶಾಲೆ’ಯ ಸಹಯೋದಲ್ಲಿ ೦೬-೦೮-೨೦೨೫ರಂದು ಮೈಸೂರಿನ  ರಾಮಕೃಷ್ಣ ನಗರದ ರಮಾ ಗೋವಿಂದ ರಂಗ ಮಂದಿರದಲ್ಲಿ ಸಂಜೆ ೪ಕ್ಕೆ ಕನ್ನಡ ಹೋರಾಟಕ್ಕೆ ಘನತೆ-ಗಾಂಭೀರ್ಯವನ್ನು ತಂದುಕೊಟ್ಟ  ‘ಡಾ.ಎಂ. ಚಿದಾನಂದಮೂರ್ತಿ ಅವರ ನೆನಪಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕೂ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು  ಜಿಲ್ಲೆಯ ೧೨ ವಿದ್ಯಾರ್ಥಿಗಳನ್ನು ಡಾ. ಎಂ. ಚಿದಾನಂದಮೂರ್ತಿ ಅವರ ನೆನÀಪಿನಲ್ಲಿ  ‘ಬಹುಮಾನ-ಸನ್ಮಾನ’ ಕಾರ್ಯಕ್ರಮ ವ್ಯವಸ್ಥೆಯಾಗಿದೆ. ಕರ್ನಾಟಕದ ಮಾಜಿ ಶಿಕ್ಷಣ ಸಚಿವರಾದ, ಅಡಗೂರು  ಎಚ್  ವಿಶ್ವನಾಥ್ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕಿಂತ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ೧೨ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ನೀಡುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ನ್ಯಾ. ಸ.ರ ಮಾಣಿಕ್ಯ ಅವರು ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಕನ್ನಡ ಗೆಳೆಯರ ಬಳಗದ ಸಂಚಾಲಕ  ರಾ.ನಂ. ಚಂದ್ರಶೇಖರ ಆಶಯ ನುಡಿಗಳನ್ನಾಡಲಿದ್ದು, ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ಸ.ರ. ಸುದರ್ಶನ ಅವರು ವಿಶೇಷ ಉಪಸ್ಥಿತಿ ಮತ್ತು ಬೆಂಗಳೂರಿನ  ಡಾ.ಆರ್.ಶೇಷಶಾಸ್ತ್ರಿ, ಬಾ.ಹ. ಉಪೇಂದ್ರ, ಮ. ಚಂದ್ರಶೇಖರ, ಬಿ.ವಿ. ರವಿಕುಮಾರ್, ಹೊಸೂರು ನಾಗರಾಜ್  ಮತ್ತು ಸಂಜೀವರತ್ನ ಅವರುಗಳ ಉಪಸ್ಥಿತಿ ಇರುತ್ತದೆ.  ಕನ್ನಡ ಸಂಘಟನೆಗಳೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ  ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದರೆ, ಕನ್ನಡ ಮಾಧ್ಯಮದಲ್ಲಿ  ಓದಿದವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಂದೇಶ ರವಾನೆ ಆಗುತ್ತದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮತ್ತು ಅವರ  ಪೋಷಕರಿಗೆ ನಮ್ಮನ್ನು ಗುರುತಿಸುವ ಜನ ಇದ್ದಾರೆ ಎಂದು ಉತ್ಸಾಹ ಮೂಡುತ್ತದೆ ಎಂಬ ಆಶಯದಿಂದ ಬಳಗವು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. 2024-25ನೆಯ ಸಾಲಿನ ಎ ಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಜಿ.ಎನ್. (98.7%)),ಮಹೇಶ್ ಎಂ.(98.08%),  ವಿನುತಾ ಎನ್.ಎಂ.(97.92%), ಪ್ರೇಮಾಂಜಲಿ(97.76%), ನಿತ್ಯ ಸಿ.ಬಿ.(97.6%), ಕೀರ್ತನ ಜೆ. (97.44%), ರಮ್ಯಶ್ರೀ(97.28%), ಸುಪ್ರೀತಾ, (97.28%), ನಿತಿನ್ ಎಸ್ (97.12%),  ಸುನೀತಾ ಎಸ್ (96.96%), ಸಿಂಚನ ಡಿ ಎಂ. (96.96%), ಮತ್ತು ಶಿವಾನಿ ಕೆ. (96.96%),  ರೂ.1000 ನಗದು ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು. ಮಹಾ ಮಹಿಮರು ಶ್ರೀ...

Business News

MSME ಗಳಿಗೆ ದೊಡ್ಡ ಉತ್ತೇಜನ ನೀಡಲು ಐಎಂಎಸ್ 2025 : ಬಿಇಎಲ್ ಸಿಎಂಡಿ ಮನೋಜ್ ಜೈನ್

“ಏರೋಸ್ಪೇಸ್ ಮತ್ತು ಡಿಫೆನ್ಸ್ ಎಂಜಿನಿಯರಿOಗ್ ಎಕ್ಸ್ಪೋ” ಎಂದು ಕರೆಯಲ್ಪಡುವ 7 ನೇ ಆವೃತ್ತಿಯ ಭಾರತ ಉತ್ಪಾದನಾ ಪ್ರದರ್ಶನ ಕ್ಕೆ ಮೊದಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್  ಅಧ್ಯಕ್ಷ ಮತ್ತು...

Bengaluru Urban

ದೈತ್ಯ ಸಂಸ್ಥೆಗಳಿಂದ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಗದಾ ಪ್ರಹಾರ -:-ಶಾಸಕ ಎಸ್. ಮುನಿರಾಜು

ಬೆಂಗಳೂರು,ಆ.3: ನಗರೀಕರಣದಿಂದ ಗ್ರಾಮೀಣ ಸಂತೆ ಸಂಸ್ಕೃತಿ ನಶಿಸುತ್ತಿದ್ದು, ಜನ ಸಾಮಾನ್ಯರ ಆದ್ಯತೆಗಳನ್ನು ಪೂರೈಸಲು ಇದೀಗ ಸೂಪರ್ ಮಾರ್ಕೆಟ್ ಯುಗ ಆರಂಭವಾಗಿದೆ. ಮೆಟ್ರೋದಂತಹ ದೈತ್ಯ ಸಂಸ್ಥೆಗಳು ಸಣ್ಣಪುಟ್ಟ ವ್ಯಾಪಾರಿಗಳ...

Bengaluru Urban

ಗೌರಿ ಗಣೇಶೋತ್ಸವದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಶಾಂತಿ ಸೌಹಾರ್ದತೆ ಸಭೆ

ದಿನಾಂಕ:26/08/2025 ಮತ್ತು 27/08/2025 ರಂದು ಗೌರಿ ಗಣೇಶೋತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬೆಂಗಳೂರು ನಗರದ ಪೊಲೀಸ್ ಮತ್ತು ಬಿ.ಬಿ.ಎಂ.ಪಿ ಇಲಾಖೆಯ ಜಂಟಿ ಸಹಯೋಗದಲ್ಲಿ...

Business News

ಜುಲೈನಲ್ಲಿ 4.5 ಲಕ್ಷ ಯೂನಿಟ್‌  ಮೋಟಾರ್‌  ಸೈಕಲ್‌ , ಸ್ಕೂಟರ್‌  ರವಾನೆ ಮಾಡಿದ ಹೀರೋ ಮೋಟೋಕಾರ್ಪ್

- ದಾಖಲೆ ಮಾರಾಟ ಕಂಡ ವಿಡಾ- 2025ರ ಜುಲೈನಲ್ಲಿ 11,200 ಯೂನಿಟ್‌ ಗಳನ್ನು ಮಾರಾಟ ಮಾಡಿದ ಸಂಸ್ಥೆ - ಜಾಗತಿಕವಾಗಿ 37,358 ಯೂನಿಟ್‌ ಗಳನ್ನು ಮಾರಾಟ ಮಾಡಲಾಗಿದ್ದು, ಭಾರಿ ಬೆಳವಣಿಗೆ ದಾಖಲು  ವಿಶ್ವದ ಅತಿದೊಡ್ಡ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ತಯಾರಕರಾದ ಹೀರೋ ಮೋಟೋಕಾರ್ಪ್ ಸಂಸ್ಥೆಯು 2025ರ ಜುಲೈನಲ್ಲಿ ಲ್ಲಿ 449,755 ಯೂನಿಟ್‌ ಡಿಸ್ ಪ್ಯಾಚ್ ಮಾಡಿ ದಾಖಲೆ ಮಾಡಿದೆ. 2024ರ ಜುಲೈನಲ್ಲಿ 370,274 ಯೂನಿಟ್‌ ಗಳನ್ನು ಡಿಸ್ ಪ್ಯಾಚ್ ಮಾಡಲಾಗಿದ್ದು, ಅದಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.21ರಷ್ಟು ಬೆಳವಣಿಗೆ ದಾಖಲಿಸಲಾಗಿದೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ವಾಹನ್* ಪ್ರಕಾರ 2025ರ ಜುಲೈನಲ್ಲಿ 339,827ಕ್ಕಿಂತ ಹೆಚ್ಚು ರಿಟೇಲ್ ರಿಜಿಸ್ಟ್ರೇಷನ್ ಗಳನ್ನು ಗಳಿಸಿದೆ. ಈ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಮಾರುಕಟ್ಟೆ ಗಮನವನ್ನು ಸೆಳೆದಿದೆ. ಸಂಸ್ಥೆಯ ರಿಟೇಲ್ ವ್ಯಾಪಾರವು ಸ್ಥಿರವಾಗಿದೆ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಮಾರಾಟ ಪ್ರಮಾಣವು ಏರಿಕೆಯಾಗುವ ನಿರೀಕ್ಷೆಯಿದೆ. *ವಾಹನ್ ಮಾಹಿತಿ, (ತೆಲಂಗಾಣವನ್ನು ಹೊರತುಪಡಿಸಿ, ಆಗಸ್ಟ್ 1, 2025ರ ಪ್ರಕಾರ) ಕಳೆದ ಕೆಲವು ತಿಂಗಳಲ್ಲಿ ಕಂಪನಿಯು ಪ್ರಮುಖ ವಿಭಾಗಗಳಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ. ಸ್ಕೂಟರ್‌ ಗಳಲ್ಲಿ, ಡೆಸ್ಟಿನಿ 125 ಮತ್ತು ಝೂಮ್ 125 ಅತ್ಯುತ್ತಮ ಮಾರಾಟ ದಾಖಲೆ ಮಾಡಿದೆ. ಮೋಟಾರ್‌ಸೈಕಲ್ ವಿಭಾಗದಲ್ಲಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಎಚ್‌ಎಫ್ ಡೀಲಕ್ಸ್ ಪೋರ್ಟ್‌ಫೋಲಿಯೋವನ್ನು ಎಚ್‌ಎಫ್ ಡೀಲಕ್ಸ್ ಪ್ರೊ ಬಿಡುಗಡೆ ಮಾಡುವ ಮೂಲಕ ವಿಸ್ತರಿಸಿಕೊಂಡಿದೆ. ಹೊಸ ವಿನ್ಯಾಸ, ವಿಭಾಗ ಶ್ರೇಷ್ಠ ವೈಶಿಷ್ಟ್ಯಗಳು ಮತ್ತು ಉನ್ನತ ಇಂಧನ ದಕ್ಷತೆ ಹೊಂದಿರುವ ಈ ಮಾಡೆಲ್ ಎಂಟ್ರಿ-ಲೆವೆಲ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಂತೆ ಮೂಡಿಬಂದಿದೆ. ಹೀರೋ ಮೋಟೋಕಾರ್ಪ್‌ ಅಧೀನದ ವಿಡಾ ಸಂಸ್ಥೆಯು 2025ರ ಜುಲೈನಲ್ಲಿ ಒಂದು ಮಹತ್ವದ ಸಾಧನೆ ಮಾಡಿದ್ದು, ಅತ್ಯಧಿಕವಾದ 11,226 ಯೂನಿಟ್‌ ಗಳನ್ನು ಡೆಲಿವರಿ ಮಾಡಿದೆ ಮತ್ತು ವಾಹನ್ ಪ್ರಕಾರ 10,489 ನೋಂದಣಿಗಳನ್ನು ದಾಖಲಿಸಿರುವ ಸಾಧನೆ ಮಾಡಿದೆ. ಕಂಪನಿಯು ತನ್ನ ಇವಿ ವಾಹನ್ ಮಾರುಕಟ್ಟೆ ಪಾಲನ್ನು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳಿಸಿಕೊಂಡಿದ್ದು, ಶೇ.10.2ಕ್ಕೆ ತಲುಪಿದೆ. ಈ ಅಂಕಿಸಂಖ್ಯೆಯು ಹೀರೋ ಮೋಟೋಕಾರ್ಪ್‌ನ ವಿದ್ಯುತ್ ಸಾರಿಗೆ ಉತ್ಪನ್ನಗಳ ಮೇಲೆ ಗ್ರಾಹಕರು ತೋರಿರುವ ಮೆಚ್ಚುಗೆಯನ್ನು ಸಾರಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಾ ಇವೂಟರ್‌ವಿಎಕ್ಸ್2  “ಬದಲಾಗುತ್ತಿರುವ ಭಾರತದ ಸ್ಕೂಟರ್” ಎಂಬ ಹೆಗ್ಗಳಿಕೆ ಗಳಿಸಿದ್ದು, ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ದ್ವಿಚಕ್ರ ವಾಹನ ವಿಭಾಗದಲ್ಲಿ ಅತ್ಯುತ್ತಮ ಸ್ಥಾನವನ್ನು ಗಳಿಸಿದೆ. ವಿಡಾ ಇವೂಟರ್, ವಿದ್ಯುತ್ ಸ್ಕೂಟರ್ ನ ಹೊಸತನ ಮತ್ತು ವಿಶ್ವಾಸಾರ್ಹತೆಯ ಸಮ್ಮಿಲನದಂತೆ ಮೂಡಿಬಂದಿದ್ದು, ಹೊಸ ರೈಡಿಂಗ್ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ಬ್ಯಾಟರಿ-ಆಸ್-ಎ-ಸರ್ವಿಸ್ (ಬಿಎಎಎಸ್) ಮಾಡೆಲ್ ಅನ್ನು ಹೊಂದಿದ್ದು, ಈ ಮೂಲಕ ಗ್ರಾಹಕರಿಗೆ ಇವಿ ಅಳವಡಿಸುವುದನ್ನು ಸುಲಭ ಮಾಡಿದೆ. ಅಭಿವೃದ್ಧಿ ಮೇಲೆ ಗಮನ ಹರಿಸಿರುವ ಮತ್ತು ಉದ್ಯಮದ ಟ್ರೆಂಡ್ ಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್‌ ಸಂಸ್ಥೆಯು ಜಾಗತಿಕ ಮಟ್ಟದಲ್ಲಿಯೂ ಬೆಳವವಣಿಗೆ ಗಳಿಸಿದ್ದು, ಜುಲೈ 2025ರಲ್ಲಿ 37,300 ಯೂನಿಟ್‌ ಗಳಿಗೂ ಹೆಚ್ಚು ಮಾರಾಟ ಮಾಡಿದೆ. ಕಂಪನಿಯು ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಈ ಬೆಳವಣಿಗೆಯು ಜಾಗತಿಕ ಮಟ್ಟದ ಗ್ರಾಹಕರಿಗೆ ವಿಶ್ವಾಸಾರ್ಹ, ಉತ್ತಮ-ಗುಣಮಟ್ಟದ ಮತ್ತು ತಾಂತ್ರಿಕವಾಗಿ ಸುಧಾರಿತ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಅದರ ಬದ್ಧತೆಯನ್ನು ಸಾರುತ್ತಿದೆ....

1 19 20 21 74
Page 20 of 74
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";