ಬೆಂಗಳೂರು, ಜುಲೈ 11, (ಕರ್ನಾಟಕ ವಾರ್ತೆ): ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರಿನ ಜಾರಿ ವಿಭಾಗದ ಅಧಿಕಾರಿಗಳು ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೋಂದಣಿ ರಹಿತ ಅಡಿಕೆ ವ್ಯಾಪಾರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಮತ್ತು ಮಂಗಳೂರುಗಳಲ್ಲಿ ಜಿಎಸ್‍ಟಿ ನೋಂದಣಿ ಪಡೆಯದೇ ಅಡಿಕೆ ವ್ಯಾಪಾರ ನಡೆಸಿ ತೆರಿಗೆ ವಂಚನೆ ಮಾಡುತ್ತಿದ್ದ ವ್ಯಾಪಾರಿಗಳ ಮಾಹಿತಿ ಸಂಗ್ರಹಿಸಿ ಅವರ ಗೋಡೌನುಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆಯ ಮಾಹಿತಿ ಸಂಗ್ರಹಿಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಾರಿ, ದಕ್ಷಿಣ ವಲಯ ವಿಭಾಗದ ಅಪರ ಆಯುಕ್ತರಾದ ಚಂದ್ರಶೇಖರ್ ನಾಯಕ್ ರವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬೆಳೆದ ಅಡಿಕೆಯನ್ನು ತೆರಿಗೆ ವಂಚನೆ ಮಾಡಿ ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ಸುಮಾರು 1.5ಕೋಟಿಯಷ್ಟು ತೆರಿಗೆ ವಂಚನೆ ಪತ್ತೆಯಾಗಿದ್ದು ಲೆಕ್ಕ ಪುಸ್ತಕಗಳ ಪರಿಶೀಲನೆ ಮುಂದುವರೆದಿದೆ ಎಂದು ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ) ಚಂದ್ರಶೇಖರ್ ನಾಯಕ ಎಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VK NEWS DIGITAL :