ಬೆಂಗಳೂರು : ಮಲ್ಲೇಶ್ವರದ (Malleswaram) 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಸಂಗೀತ ನೃತ್ಯ ಭಾರತೀಯ ಅಕಾಡೆಮಿ (Sangeetha Nrithya Academy) ವತಿಯಿಂದ ಸೆಪ್ಟೆಂಬರ್ ಐದರಂದು ಹಮ್ಮಿಕೊಂಡಿದ್ದ ನಾಲ್ಕು ಪುಟ್ಟ ಕಿಶೋರಿಗಳಾದ ಶ್ರೀನಿಥಿ ಕೆ.ಎಸ್., ವಿಭಾ ವಿಕ್ರಂ, ಸ್ತೋತ್ರಿಕಾ ಮಹಾದೇವ್ ಮತ್ತು ಸಾನ್ವಿ ರಾಜಶೇಖರ್ ಇವರುಗಳ “ಗೆಜ್ಜೆಪೂಜೆ” (GejjePooje) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಜೋಗಿಲ ಸಿದ್ದರಾಜುರವರು ಜನಪದ, ಶಾಸ್ತ್ರೀಯ ನೃತ್ಯ, ನಾಟಕ ಯಾವುದೇ ಆಗಲಿ ಒಂದು ಕಲೆಯನ್ನು ಕಲಿತರೂ ಕೂಡ ಆ ಕಲೆಯು ಆ ವ್ಯಕ್ತಿಗೆ ಮಾನವೀಯ ಮೌಲ್ಯಗಳು ಕಲಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದುಷಿ ಉಷಾ ಬಸಪ್ಪನವರು ಮುಖ್ಯವಾಗಿ ಭರತನಾಟ್ಯ ಕಲೆಯು ಕಲಾವಿದರ ಆರೋಗ್ಯ, ಆತ್ಮಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನವನ್ನು ಮಾಡುತ್ತದೆ ಎಂದು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು ಸಂಗೀತ ನೃತ್ಯ ಭಾರತೀಯ ಅಕಾಡೆಮಿಯ ಸಂಸ್ಥಾಪಕರಾದ ಪದ್ಮ ಹೇಮಂತ್, ಹೇಮಂತ್ ಮತ್ತು ಶೀತಲ್ ರವರು ನಾಲ್ಕು ಜನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಗೆಜ್ಜೆಪೂಜೆಯನ್ನು ಆಯೋಜಿಸಿದ್ದರು.
ನಾಲ್ಕು ಜನ ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ತಾವು ಕಲಿತ ಪ್ರಸ್ತುತಿಗಳನ್ನು ಪ್ರದರ್ಶನಗೊಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.