ವಿ.ವಿ.ಪುರಂ ಪೊಲೀಸ್ ಠಾಣೆಯ (VV Puram Station) ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ 27/09/2025 ರಂದು ಖಚಿತ ಮಾಹಿತಿ ದೊರೆತಿರುತ್ತದೆ. ಠಾಣಾ ಸರಹದ್ದಿನ ಕೆ.ಆರ್.ರಸ್ತೆಯಲ್ಲಿ (K.R.Road) ಓರ್ವ ವ್ಯಕ್ತಿಯು ನಿಷೇಧಿತ ಮಾದಕ ವಸ್ತುವಾದ ಗಾಂಜಾ (Ganja) ವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುವುದು, ಆ ಮಾಹಿತಿಯನ್ನಾಧರಿಸಿ, ನಂತರ ಠಾಣೆಯಲ್ಲಿ ಎನ್.ಡಿ.ಪಿ.ಎಸ್ (NDPS Act) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸ್ಥಳಕ್ಕೆ ಧಾವಿಸಿ, ದಾಳಿಮಾಡಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಆತನು ಮೂಲತಃ ನೇಪಾಳ ದೇಶದವನಾಗಿದ್ದು, ಹೆಚ್ಚಿನ ಹಣ ಗಳಿಸುವ ಉದ್ಧೇಶದಿಂದ ಅಪರಿಚಿತನೋರ್ವನಿಂದ ನಿಷೇಧಿತ ಮಾದಕವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಆತನ ವಶದಲ್ಲಿದ್ದ 330 ಗ್ರಾಂ ನಿಷೇಧಿತ ಮಾದಕವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ ರೂ. 45,000/-
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ್‌ಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಕಾರ್ಯಾಚರಣೆಯನ್ನು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಭರಮಪ್ಪ ಜಗಲಾಸರ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮೀದ್ ಬಾಷಾ ರವರ ಉಸ್ತುವಾರಿಯಲ್ಲಿ, ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಧಮೇಂದ್ರ.ಟಿ.ಎ0 ರವರ ನೇತೃತ್ವದಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.





















