ಮುಂಬೈ, ಜುಲೈ 21:
ಕೊಚ್ಚಿಯಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ಎಐ 2744 ವಿಮಾನ ಇಂದು ಮುಂಜಾನೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ರನ್‌ವೇಯಿಂದ ಜಾರಿದ ಘಟನೆ ನಡೆದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ರನ್‌ವೇ ಒದ್ದೆಯಾಗಿದ್ದ ಕಾರಣ, ಎ320 ಮಾದರಿಯ ವಿಮಾನ ನಿಯಂತ್ರಣ ತಪ್ಪಿ ಪಕ್ಕದ ಮಣ್ಣಿನ ಪ್ರದೇಶಕ್ಕೆ ಜಾರಿತು.
ವಿಮಾನ ಚಾಲಕರ ಸಮಯಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ತಪ್ಪಿದ್ದು, ವಿಮಾನ ಟ್ಯಾಕ್ಸಿವೇಗೆ ಸರಿಯಾಗಿ ತಲುಪಿದೆ. ವಿಮಾನದಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದ ಪ್ರಮುಖ ರನ್‌ವೇ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಈ ಘಟನೆಯ ನಿಖರ ಕಾರಣ ತಿಳಿಯಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಗೆ ಆದೇಶಿಸಿದೆ. ಏರ್ ಇಂಡಿಯಾ ಸಂಬಂಧಿಸಿದ ಹಳೆಯ ದುರಂತಗಳು ಇನ್ನೂ ಜನರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿದ್ದು, ಇದೀಗ ಮತ್ತೆಕಡೆ ಈ ರೀತಿಯ ಘಟನೆಗಳು ಆತಂಕ ಮೂಡಿಸುತ್ತಿವೆ.