ಬೆಂಗಳೂರು: ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪು ಹೊರಬಿದ್ದ ಬೆನ್ನಲ್ಲೇ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (Divya Spandana) ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿCourt ತೀರ್ಪು ಹಂಚಿಕೊಂಡು, “ಎಲ್ಲಾ ಹೆಣ್ಣುಮಕ್ಕಳಿಗೂ ನ್ಯಾಯ ಸಿಕ್ಕಿದೆ” ಎಂದು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರಣೆಯ ತೀರ್ಪು ಶುಕ್ರವಾರ ಪ್ರಕಟವಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆಗೆ ಕಾಯ್ದಿರಿಸಲಾಗಿದೆ. ತೀರ್ಪು ಪ್ರಕಟವಾದ ಕ್ಷಣದಲ್ಲೇ ಪ್ರಜ್ವಲ್ ರೇವಣ್ಣ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಪ್ರತಿಕ್ರಿಯೆ ಹೆಚ್ಚಳ:
ಪ್ರಜ್ವಲ್ ಪ್ರಕರಣವು ರಾಜ್ಯದ ರಾಜಕೀಯ ಮತ್ತು ಸಮಾಜದ ಎಲ್ಲವರ್ಗಗಳಲ್ಲೂ ತೀವ್ರ ಪ್ರತಿಕ್ರಿಯೆ ಉಂಟುಮಾಡಿದ್ದು, ನಟಿಮಣಿಯರ ಪ್ರತಿಕ್ರಿಯೆ ಕೂಡ ದಾಖಲಾಗುತ್ತಿವೆ. ರಮ್ಯಾ ಅವರ ಈ ಪೋಸ್ಟ್ ಹೆಚ್ಚು ಶೇರ್ ಆಗುತ್ತಿರುವ ವಿಷಯಗಳಲ್ಲಿ ಒಂದಾಗಿದೆ.