ಹಾಸನ, : ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಆತಿಥ್ಯದಲ್ಲಿ, ಉಡುಪಿ ಬೇಕರಿ ಮತ್ತು ಖಾದ್ಯ ತಯಾರಿಕ ಸಂಘ ಹಾಗೂ ಕರ್ನಾಟಕ ಬೇಕರಿ ಅಂಡ್ ಸ್ವೀಟ್ಸ್ ಅಸೋಸಿಯೇಷನ್ ಮೊದಲ ಬಾರಿಗೆ ಒಂದಾಗಿ ಜಂಟಿ ಸಭೆಯನ್ನು ನಿನ್ನೆ 26-04-2026 ರಂದು ನಗರದ ತನ್ವಿ ತ್ರಿಷಾ ಪಾರ್ಟಿ ಹಾಲ್ನಲ್ಲಿ ನಡೆಸಿದವು.
ಸಭೆಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೇಕರಿ ಉದ್ಯಮದ ಏಳಿಗೆ, ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ, ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಸದಸ್ಯರ ನಡುವೆ ಪರಸ್ಪರ ಸಹಕಾರದ ಬಗ್ಗೆ ಫಲಪ್ರದ ಚರ್ಚೆ ನಡೆಯಿತು.
ಮೂರು ಸಂಘಗಳು ಒಂದಾಗಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಉದ್ಯಮಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಮೂರು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಭಾಗವಹಿಸಿದ್ದರು.
—





















