BENGALURU : ತಮಿಳುನಾಡು ಹೊಸೂರ್ ನ ಹೋಟೆಲ್ ಗ್ರಾಂಡ್ ಫಾಚೂರ್ನ್ (HOTEL GRAND FORTUNE) ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ (ASIA INTERNATIONAL CULTURE RESEARCH) ವಿಶ್ವವಿದ್ಯಾಲಯ ದವರು ಬೆಂಗಳೂರು ವಿಡಿಯಾ ಪೂರ್ಣಪ್ರಜ್ಞ ಪ್ರೌಢಶಾಲೆಯ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕ ರವರಿಗೆ ಎಂ ಎಸ್ ರಂಗನಾಥ ರಾವ್ (M.S.RANGANATHA RAO) ಶೈಕ್ಷಣಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.
ಶ್ರೀಯುತರು ಕಳೆದ 3 ದಶಕದಿಂದ ಶಿಕ್ಷಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ.ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಡಾ ಕೃಷ್ಣಮೂರ್ತಿ ಸ್ವಾಮೀಜಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಡಾ ಬಿ.ಎಂ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.





















