ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ,ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜು, ಮಾಲೀಕರಾದ ಪ್ರಕಾಶ್ ಬಾಫ್ನಾ, ಅಕ್ಷಯ್, ಮನೀಶ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರು ನಗರದಲ್ಲಿ ಅದರಲ್ಲೂ ದಕ್ಷಿಣ ಬೆಂಗಳೂರು ಭಾಗದಲ್ಲಿ ಈ ಮಳಿಗೆ ಮೈಲಿಗಲ್ಲು ಸ್ಥಾಪಿಸಲಿದೆ. ಮದುವೆಗೆ ಬೇಕಾದ ಬಟ್ಟೆಗಳನ್ನು ಇಲ್ಲಿ ಒಂದೇ ವೇದಿಕೆಯಲ್ಲಿ ಖರೀದಿಸಬಹುದು. ದಕ್ಷಿಣ ಬೆಂಗಳೂರು ಭಾಗದಲ್ಲಿ ಇದು ಅತ್ಯುತ್ತಮ ಶಾಪಿಂಗ್ ತಾಣವಾಗಲಿದೆ. ಇಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನುರಿತ ಸಿಬ್ಬಂದಿ ಇದ್ದು, ಈ ಮಳಿಗೆ ವೃತ್ತಿಪರತೆಗೆ ಹೆಸರಾಗಿದೆ. ಇಲ್ಲಿ ದೇಶ, ವಿದೇಶಗಳ ಎಲ್ಲಾ ಬ್ರ್ಯಾಂಡ್ ಗಳು ದೊರೆಯಲಿವೆ ಎಂದು ಹೇಳಿದರು.
ಮಳಿಗೆಯ ಮಾಲೀಕ ಅಕ್ಷಯ್ ಮಾತನಾಡಿ, ಬಿ ಮೋರ್ ನಲ್ಲಿ ಪ್ರಮುಖ 30 ಬ್ರ್ಯಾಂಡ್ ಗಳು ದೊರೆಯಲಿದ್ದು, ನಮ್ಮಲ್ಲಿ 30 ಶ್ರೇಷ್ಠ ವಿನ್ಯಾಸಕಾರರಿದ್ದಾರೆ.
ಇಲ್ಲಿ ಆಯ್ಕೆಗೆ ಮಿತಿಯೇ ಇಲ್ಲ. ಇಂಡೋ ವೆಸ್ಟ್ರನ್, ಶರ್ಟ್ ಗಳು, ವಿವಿಧ ವಿನ್ಯಾಸಗಳು, ಕ್ಯಾಶುಯಲ್ ವೇರ್ ಗಳು, ಡೆನಿಮ್, ಟ್ರೌಷರ್ಸ್, ಟೀ ಶರ್ಟ್ಸ್ ಸೇರಿ ಎಲ್ಲಾ ಆಯ್ಕೆಗಳೂ ಇವೆ. ಕಾಟನ್, ವುಲ್ಸ್, ಲನನ್ಸ್, ಲಿನನ್ ಸಿಲ್ಕ್, ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಒಂದೇ ವೇದಿಕೆಗೆ ತರಲಾಗಿದೆ. ಇಟಲಿ, ಜಪಾನ್ ಸೇರಿ ವಿವಿಧ ದೇಶಗಳ ಬಟ್ಟೆಗಳ ಸಹ ಇವೆ. ಇಲ್ಲಿನ ಶಾಪಿಂಗ್ ಅನುಭವವೇ ವಿಭಿನ್ನವಾದದ್ದು. ಕೆಲವು ಬ್ರ್ಯಾಂಡ್ ಗಳನ್ನು ರಿಯಾಯಿತಿ ದರದಲ್ಲಿಸಹ ಮಾರಾಟ ಮಾಡಲಾಗುತ್ತಿದೆ ಎಂದರು. ಮಾಲೀಕರಾದ ಪ್ರಾಕಾಶ್ ಬಾಫ್ನಾ ಮಾತನಾಡಿ, ದಕ್ಷಿಣ ಬೆಂಗಳೂರಿನಲ್ಲಿ ಇದು ಅತ್ಯಂತ ವಿನೂತನ ಮಳಿಗೆಯಾಗಿದ್ದು, ಬಟ್ಟೆಗಳಿಗಾಗಿ ಬೇರೆ ಬೇರೆ ಕಡೆ ಅಲೆದಾಡುವ ಅಗತ್ಯವಿಲ್ಲ. ಇಲ್ಲಿ ಎಲ್ಲಾ ರೀತಿಯ ಬ್ರ್ಯಾಂಡ್ ಗಳು ಇಲ್ಲಿ ದೊರೆಯಲಿವೆ ಎಂದರು.





















