Live Stream

[ytplayer id=’22727′]

| Latest Version 8.0.1 |

Bengaluru UrbanState News

*ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ*

*ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ*
ಬೆಂಗಳೂರು, ನ.3: ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು, ಬಿಸ್ಕೆಟ್‌ ವಿತರಣೆ ಮಾಡಲಾಯಿತು.
ನಗರದ ಆಶಾ ಕಿರಣ್ ಡಯಾಲಿಸಿಸ್ ಸೆಂಟರ್ ನಲ್ಲಿ ಸುದಯ ಫೌಂಡೇಶನ್ ಅಧ್ಯಕ್ಷರಾದ ಸುಶೀಲ. ಸಿ ಅವರು ರೋಗಿಗಳಿಗೆ ಹಣ್ಣು, ಬಿಸ್ಕೆಟ್ ವಿತರಿಸಿ ರೋಗಿಗಳೊಂದಿಗೆ ಕೆಲವು ಸಮಯ ಕಳೆದು ಯೋಗ ಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅರೋಗ್ಯ ಕಾಳಜಿ ತುಂಬಾ ಮುಖ್ಯ. ಅದರಲ್ಲೂ ಡಯಾಲಿಸಿಸ್ ಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಜನರಲ್ಲಿ ಕಾಯಿಲೆಯ ಬಗೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಆಶಾ ಕಿರಣ ಡಯಾಲಿಸಿಸ್‌ ಸೆಂಟರ್‌ ಸುಸಜ್ಜಿತವಾದ ವ್ಯವಸ್ಥೆಯನ್ನು ಹೊಂದಿದ್ದು, ಉತ್ತಮ ವೈದ್ಯಕೀಯ ಸೇವೆಗಳೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಸಮುದಾಯಗಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಕ್ಯಾಶ್‌ ಕೌಂಟರ್‌ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿರುವ ಹೆಗ್ಗಳಿಕೆ ಆಶಾ ಕಿರಣ ಡಯಾಲಿಸಿಸ್‌ ಸೆಂಟರ್‌ ಗೆ ಸಲ್ಲುತ್ತದೆ. ಜನರಿಗೆ ಆರೋಗ್ಯ ಸೇವೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಬದ್ಧತೆ ಈ ಸಂಸ್ಥೆಗೆ ಸಲ್ಲುತ್ತದೆ.
ಆಧುನಿಕ ಜೀವನಶೈಲಿಯನ್ನು ಹೊಂದಿರುವ ಯುವಪೀಳಿಗೆಯು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಮಕ್ಕಳಲ್ಲೂ ಸಹ ಮೂತ್ರ ಪಿಂಡ ಸಮಸ್ಯೆಗಳು ಕಂಡುಬರುತ್ತಿವೆ. ಸಣ್ಣ ವಯಸ್ಸಿನವರೂ ಸಹ ಡಯಾಲಿಸಿಸ್ ಗೆ ಒಳಗಾಗುತ್ತಿದ್ದಾರೆ. ಯಾರೂ ಕೂಡ ಧೈರ್ಯ ಕಳೆದುಕೊಳ್ಳಬೇಡಿ, ಧೈರ್ಯದಿಂದ ಎಂತಹ ಸಮಸ್ಯೆಯನ್ನೂ ಸಹ ಎದುರಿಸಬಹುದು ಎಂದು ರೋಗಿಗಳಿಗೆ ಸಲಹೆ ನೀಡಿದರು. ಬಳಿಕ ಡಯಾಲಿಸಿಸ್ ಸೆಂಟರ್ ನ ಟ್ರಸ್ಟಿಗಳೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಸಹಾಯವಾಗುಂತಹ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಡಯಾಲಿಸಿಸ್‌ ಸೆಂಟರ್‌ ನ ಅಧ್ಯಕ್ಷರಾದ ಜಗನ್ನಾಥ್‌ ಸೇರಿದಂತೆ ಇತರೆ ಟ್ರಸ್ಟಿಗಳು ಉಪಸ್ಥಿತರಿದ್ದರು.
ವೀ ಕೇ ನ್ಯೂಸ್
";