Live Stream

[ytplayer id=’22727′]

| Latest Version 8.0.1 |

Mysuru

ತಿ.ನರಸೀಪುರದಲ್ಲಿ ಭವ್ಯ ರೈತೋತ್ಸವ — ರೈತ ರತ್ನ ಕುರುಬೂರು ಶಾಂತಕುಮಾರ್ ಗೆ ಅದ್ದೂರಿ ಸ್ವಾಗತ!

ತಿ.ನರಸೀಪುರದಲ್ಲಿ ಭವ್ಯ ರೈತೋತ್ಸವ — ರೈತ ರತ್ನ ಕುರುಬೂರು ಶಾಂತಕುಮಾರ್ ಗೆ ಅದ್ದೂರಿ ಸ್ವಾಗತ!

ತಿ.ನರಸೀಪುರ: ಜೀವನ್ಮರಣ ಹೋರಾಟದ ನಂತರ… ಮತ್ತೆ ರೈತರ ಪರ ಹೋರಾಟಕ್ಕೆ ಸಜ್ಜಾಗಿರುವ… ರೈತ ರತ್ನ ಕುರುಬೂರು ಶಾಂತಕುಮಾರ್ (Kuruburu Shanthakumar) ರವರಿಗೆ ಗೌರವ ಸಲ್ಲಿಸಲು, ತಿ.ನರಸೀಪುರದಲ್ಲಿ ರೈತೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಅಕ್ಟೋಬರ್ 25ರಂದು ಶನಿವಾರ ಪಟ್ಟಣದ ಗುರುಭವನದಲ್ಲಿ (Gurubhavan – T. Narasipura) ನಡೆಯಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಕಿರಗಸೂರು ಶಂಕರ್ (Kiragasooru Shankar) ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಂಜಾಬ್‌ನಲ್ಲಿ ನಡೆದ ರಸ್ತೆ ಅಪಘಾತದ ಬಳಿಕ ದೀರ್ಘ ಚಿಕಿತ್ಸೆ ಪಡೆದ ಶಾಂತಕುಮಾರ್ ಈಗ ಸಂಪೂರ್ಣ ಚೇತರಿಸಿಕೊಂಡು… ಮತ್ತೆ ರೈತರ ಹೋರಾಟದ ವೇದಿಕೆಗೆ ಬಂದಿದ್ದಾರೆ. ಅವರಿಗೆ ಗೌರವ ಸಲ್ಲಿಸಲು ಈ ರೈತೋತ್ಸವ” ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಮಾಜಿ ಶಾಸಕ ಬಿಸ್ಲಳ್ಳಿ, ಮತ್ತು ಸಾಹಿತಿ ಹಾಗೂ ವಿಜಯವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕ ವೀರಭದ್ರಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಖಜಾಂಚಿ ಎಂ.ಬಿ. ಚೇತನ್ ವಹಿಸಲಿದ್ದಾರೆ. ರೈತ ಹಿತಾಸಕ್ತಿಯ ಹಲವು ಪ್ರಮುಖ ವಿಷಯಗಳು ಈ ವೇದಿಕೆಯಲ್ಲಿ ಚರ್ಚೆಯಾಗಲಿವೆ. ಅವುಗಳಲ್ಲಿ ಕೆಲವು ಬ್ಯಾಂಕುಗಳಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಸಾಲ ಮಂಜೂರಿನಲ್ಲಿ ವ್ಯತ್ಯಯ ತಡೆಯಬೇಕು. ಸಿಬಿಲ್ ಸ್ಕೋರ್ ಆಧಾರದ ಮೇಲೆ ಕೃಷಿ ಸಾಲ ನಿರಾಕರಿಸಬಾರದು. ಕೆರೆಗಳ ಹೂಳು ತೆರವು ಮಾಡಿ ರೈತರ ಜಮೀನಿಗೆ ಉಳುಮಣ್ಣಾಗಿ ಉಪಯೋಗಿಸಬೇಕು.

ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಬಾಕಿ ಲಾಭವನ್ನು ರೈತರಿಗೆ ನೀಡಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ಟನ್‌ಗೆ ರೂ.4500 ನಿಗದಿ ಮಾಡಬೇಕು. ಭತ್ತ–ರಾಗಿಗೆ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ಮತ್ತು ಮಳೆಹಾನಿ ಪರಿಹಾರದ ಎನ್‌ಡಿಆರ್‌ಎಫ್ ಮಾನದಂಡವನ್ನು ಪರಿಷ್ಕರಿಸಬೇಕು. ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸಿ… ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಈ ರೈತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕಿರಗಸೂರು ಶಂಕರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜು, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಧಾನ ಕಾರ್ಯದರ್ಶಿ   ಕಿರಗಸೂರು ಪ್ರಸಾದ್ ನಾಯಕ್, ಟೌನ್ ಅಧ್ಯಕ್ಷ ಅಪ್ಪಣ್ಣ, ಹಾಗೂ ಮುಖಂಡರು ಗೌರಿಶಂಕರ್, ಕೆ.ಜಿ. ಗುರುಸ್ವಾಮಿ, ಪ್ರದೀಪ್, ಕರೋಹಟ್ಟಿ ಉಮೇಶ್, ವೀರೇಶ್ ನಾಗರಾಜ್, ರಾಜೇಶ್ ಹಾಗೂ ಎಲ್ಐಸಿ ವೀರೇಶ್ ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";