ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರೀ) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ, ವಿವಿಧ ಪಠ್ಯೇತರ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ
ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025 ರ ಭಾನುವಾರದಂದು, ಬೆಂಗಳೂರಿನ, ಎಂಜಿ ರಸ್ತೆ, ಮೆಟ್ರೋ ಸ್ಟೇಷನ್ ಆವರಣದಲ್ಲಿರುವ “ರಂಗಸ್ಥಳ” ಸಭಾಂಗಣದಲ್ಲಿ ಆಯೋಜಿಸಿದ್ದರು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂದು ಸಂಜೆ ಪತ್ರಿಕೆ ಮುಖ್ಯ ಸಂಪಾದಕಿ ಶ್ರೀಮತಿ ಜಿ ವೈ ಪದ್ಮರಾವ್, ನಟ ನಿರ್ಮಾಪಕ ಶ್ರೀ ಗಂಡಸಿ ಸದಾನಂದ ಸ್ವಾಮಿ, ಹಿರಿಯ ಪತ್ರಕರ್ತ ಶ್ರೀ ಬಿ ಕೆ ಪ್ರಸನ್ನ – ವಿಕೆ ಡಿಜಿಟಲ್ ನ್ಯೂಸ್ ಸಂಸ್ಥಾಪಕರು,ಮತ್ತು ನಾಟ್ಯ ಕುಸುಮಾಂಜಲಿ ಸಂಸ್ಥೆ ಸಂಸ್ಥಾಪಕ ಶ್ರೀನಾಥ್ ರವರುಗಳ ಉಪಸ್ಥಿತಿಯಲ್ಲಿ ಹಿರಿಯ ಯೋಗ ಶಿಕ್ಷಕ ಶ್ರೀ ಕಲಂದರ್ ಭಾಷಾ, ಹಿರಿಯ ನೃತ್ಯ ಶಿಕ್ಷಕಿ ವಿದುಷಿ ಶ್ರೀಮತಿ ಗೀತಾ ಶ್ರೀನಾಥ್, ಕಾನೂನು ಶಿಕ್ಷಣಜ್ಞ ಶ್ರೀ ಆರ್ ಎನ್ ವೇಣುಗೋಪಾಲ್, ಯೋಗ ಶಿಕ್ಷಕಿ ಶ್ರೀಮತಿ ಲಕ್ಷ್ಮಿ.ಪಿ, ಸಮಾಜ ಸೇವಕಿ ಶ್ರೀಮತಿ ಜ್ಯೋತಿ ಕನ್ನಡತಿ, ಯೋಗ ಶಿಕ್ಷಕಿ ಹಾಗೂ ಎನ್‌ಸಿಸಿ ಅಧಿಕಾರಿ ಶ್ರೀಮತಿ ಜಗದೇವಿ ಬೋಸ್ಗೆ, ಜಿಮ್ ಟ್ರೇನರ್ ಶ್ರೀ ಗೋಪಿ, ನಂಜನಗೂಡು ಗಾಂಧಾರಿ ವಿದ್ಯೆ ಶಿಕ್ಷಕಿ ಶ್ರೀಮತಿ ರೂಪಶ್ರೀ ಎನ್ ಆರ್, ಕ್ರೀಡೆ ಮತ್ತು ದೈಹಿಕ ಶಿಕ್ಷಕ ಶ್ರೀ ವಿವೇಕ್ ಕೆ. ಯು, ಮಂಗಳೂರಿನ ಗಾಂಧಾರಿ ವಿದ್ಯಾ ಶಿಕ್ಷಕಿ ಶ್ರೀಮತಿ ರೂಪ ಶ್ರೀ, qಭರತನಾಟ್ಯ ಕಲಾವಿದ ದಂಪತಿಗಳಾದ ಗುರು ಶ್ರೀ ಎಂ ಡಿ ಗಣೇಶ್ ಮತ್ತು ಗುರು ಶ್ರೀಮತಿ ಭಾವನ ಗಣೇಶ್ ರವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮತ್ತು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಟಲ್ ಎಲ್ಲಿ ಸಂಸ್ಥೆಯ ಆಡಳಿತ ವರ್ಗದ ಮುಖ್ಯಸ್ಥ ಶ್ರೀಮತಿ ಪ್ರವೀಣ, ನಿರೂಪಕಿ ಮತ್ತು ನೃತ್ಯ ಶಿಕ್ಷಕಿ ಕುಮಾರಿ ಧನುಶ್ರೀ, ಯೋಗ ಶಿಕ್ಷಕ ಶ್ರೀ ಮುಕುಂದ ಪ್ರಸಾದ್ ಗಾಂಧಿ ಎಂ, ನಿವೃತ್ತ ಶಿಕ್ಷಕಿ ಮತ್ತು ನೃತ್ಯ ಕಲಾವಿದೆ ಶ್ರೀಮತಿ ಲಕ್ಷ್ಮೀದೇವಿ ಮತ್ತು ಸಮಾಜ ಸೇವಕ ಆಕಾಶ್ ರವರುಗಳಿಗೂ ಸನ್ಮಾನಿಸಲಾಯಿತು. ವಿಶೇಷವಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಶ್ವ ದಾಖಲೆ ಮಾಡಿದ ಮಕ್ಕಳ ಯೋಗ, ಗಾಂಧಾರಿ ವಿದ್ಯೆ ಪ್ರದರ್ಶನ, ಹಿರಿಯ ಹಾಗೂ ಕಿರಿಯರ ನೃತ್ಯೋತ್ಸವ ನೋಡುಗರ ಕಣ್ಮನ ಸೆಳೆಯಿತು. ಗುರು ಹಿರಿಯರ ಮತ್ತು ಪೋಷಕರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ಸುಗಮವಾಗಿ ಜರುಗಿತ್ತು.





















