ಬೆಳಗಾವಿ : ಬರುವ ಅಕ್ಟೋಬರ್ 12ರ ಭಾನುವಾರದಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕರ್ನಾಟಕ ಜಾಗೃತಿ ವೇದಿಕೆ
ಮತ್ತು ಪಿ ಬಿ ದುತ್ತರಗಿ ಸ್ಮಾರಕ ಟ್ರಸ್ಟ್. ಅಥಣಿ ತಾಲೂಕ್ ನ್ಯಾಯವಾದಿಗಳ ಸಂಘ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವ್.ಇವುಗಳ ಸoಯುಕ್ತ ಆಶ್ರಯದಲ್ಲಿ ಗಡಿನಾಡ ರಂಗಕರ್ಮಿ ಶ್ರೀ ಕೆ ಎಲ್ ಕುಂದರಗಿಯವರ ನಾಟಕೋತ್ಸವ ಮತ್ತು “ಗಡಿನಾಡ ರಂಗಕರ್ಮಿ ಕೆ ಎಲ್ ಕುಂದರಗಿ” ಅವರ ರಂಗ ಪಯಣದ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ
ಈ ನಾಟಕೋತ್ಸವದಲ್ಲಿ ಕೆ ಎಲ್ ಕುಂದರಗಿಯವರ ವಿರಚಿತ ಗಾಂಧಿ ಮರಳಿ ಬಂದಾಗ ಕ್ರಾಂತಿಕಾರಿ ವೀರ ಸಾವರ್ಕರ್ ಕರುನಾಡ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಎಂಬ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ರಂಗಗೀತೆ ನೃತ್ಯ ರೂಪಕ ನಾಟಕ ರಂಗ ಸಂವಾದ ನಾಡಿನ ರಂಗಕರ್ಮಿಗಳಿಗೆ ಶ್ರೀ ಪಿ ಬಿ ದುತ್ತರಗಿ ರಂಗ ಸನ್ಮಾನ, ದುತ್ತರಗಿ ರಂಗ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ರಾಜ್ಯದ 30 ಜಿಲ್ಲೆಯ ರಂಗಕರ್ಮಿಗಳಿಗೆ ನಾಟಕಗಾರರಿಗೆ ರಂಗಗೀತೆಯ ಗಾಯಕರಿಗೆ. ನಾಟಕದ ಸಂಗೀತ ನಿರ್ದೇಶಕರಿಗೆ
ನಾಟಕ ರಚನೆಕಾರರಿಗೆ ನಿರ್ದೇಶಕರಿಗೆ ನಾಟಕದಲ್ಲಿ ಪಾತ್ರ ವಹಿಸುವ ಪಾತ್ರಧಾರಿಗಳಿಗೆ ರಂಗ ಸಜ್ಜಿಕೆಯ ಕಲಾವಿದರಿಗೆ
ರಂಗ ನಿರ್ದೇಶಕರಿಗೆ ಮಹಿಳಾ ರಂಗಕರ್ಮಿಗಳಿಗೆ ಪಾತ್ರಧಾರಿಗಳಿಗೆ ಈ ದುತ್ತರಗಿ ರಂಗ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು..
ಆಸಕ್ತರು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಸಪ್ಟಂಬರ್ 30ರೊಳಗಾಗಿ ಪ್ರಶಸ್ತಿಗಾಗಿ ಮಾಹಿತಿಯನ್ನು ಕಳಿಸಬಹುದಾಗಿದೆ.
ಎಂದು ಟ್ರಸ್ಟಿನ ಉಪಾಧ್ಯಕ್ಷರಾದ ಬಸವರಾಜ್ ಗವಿಮಠ ಕಾರ್ಯದರ್ಶಿಗಳಾದ ಎ ಜಿ ಮಲ್ಲಿಕಾರ್ಜುನ ಮಠ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಯ್ಯ ಕೋಮಾರಿ ಸಂಚಾಲಕರಾದ ಮಹೇಶ್ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಾಹಿತಿಯನ್ನು 9845338160 , 9113565189 ನಂಬರಿಗೆ ವಾಟ್ಸಪ್ ಮಾಡಲು ವಿನಂತಿಸಿದ್ದಾರೆ
Veekay News > Districts > Belagavi > ಶ್ರೀ ಪಿ ಬಿ ದುತ್ತರಗಿ ರಂಗ ಸನ್ಮಾನ ಪ್ರಶಸ್ತಿಗೆ ಆಹ್ವಾನ
ವೀ ಕೇ ನ್ಯೂಸ್12/09/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply