Live Stream

[ytplayer id=’22727′]

| Latest Version 8.0.1 |

Bengaluru Urban

Haphazard parking: ಹೆಬ್ಬಾಳ ಅಮರಜ್ಯೋತಿ ಲೇಔಟ್ ಪಾರ್ಕ್ ಬಳಿ ಯದ್ವಾತದ್ವಾ ವಾಹನಗಳ ನಿಲುಗಡೆ, ಸಾರ್ವಜನಿಕರಿಗೆ ತೊಂದರೆ

Haphazard parking: ಹೆಬ್ಬಾಳ ಅಮರಜ್ಯೋತಿ ಲೇಔಟ್ ಪಾರ್ಕ್ ಬಳಿ ಯದ್ವಾತದ್ವಾ ವಾಹನಗಳ ನಿಲುಗಡೆ, ಸಾರ್ವಜನಿಕರಿಗೆ ತೊಂದರೆ

ಬೆಂಗಳೂರು: ಹೆಬ್ಬಾಳದ ಅಮರ ಜ್ಯೋತಿ ಲೇಔಟ್‌ನ (amarjyothi layout, hebbal) 2ನೇ ಕ್ರಾಸ್‌ನಲ್ಲಿರುವ ಉದ್ಯಾನವನದ ಮುಂಭಾಗ (park) ದ್ವಿಚಕ್ರ ವಾಹನಗಳು ಸೇರಿದಂತೆ ಅನೇಕ ಇತರೆ ವಾಹನಗಳನ್ನು ಮನಸೋಇಚ್ಛೆ ನಿಲ್ಲಿಸುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರಿಂದ ಹಿರಿಯ ನಾಗರಿಕರು ಸೇರಿದಂತೆ ವಾಕಿಂಗ್‌ಗೆ ಬರುವ ಅನೇಕ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ (public grievances).

ಈ ರಸ್ತೆಯಲ್ಲಿ ನಿಲ್ಲಿಸುವ ಅನೇಕ ದ್ವಿಚಕ್ರ ವಾಹನಗಳು ಏಟ್ರಿಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೇರಿದ್ದಾಗಿದ್ದು, ಅವರಿಗೆ ತಮ್ಮ ವಾಹನಗಳನ್ನು ಪಾರ್ಕ್‌ ಮಾಡಲು (Vehicle parking) ಅವರದೇ ಕಾಲೇಜಿನ ಮೈದಾನ ಇರುತ್ತದೆ. ಆದರೆ ಇಲ್ಲಿಯೇ ಬಂಧು ಪಾರ್ಕ್‌ ಮಾಡಿ, ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ.

ಈ ಬಗ್ಗೆ ಅಮರ ಜ್ಯೋತಿ ಲೇಔಟ್ ನಿವಾಸಿಗಳು ಹಾಗೂ ವಾಕಿಂಗ್‌ಗೆ ಬರುವವರು ಅನೇಕ ಬಾರಿ ದೂರುಗಳನ್ನು ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಪರಿಶೀಲಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಸ್ಥಳೀಯ ನಿವಾಸಿ ಜಿ.ಎಸ್. ಮಂಜುನಾಥ್ ಅಯ್ಯರ್ ಅವರು ಮನವಿ ಮಾಡಿಕೊಂಡಿದ್ದಾರೆ.

ವೀ ಕೇ ನ್ಯೂಸ್
";