Live Stream

[ytplayer id=’22727′]

| Latest Version 8.0.1 |

Bengaluru UrbanPolitics News

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪುರಾತನ ಮತ್ತು ಪ್ರತಿಷ್ಠಿತ ಬಡಾವಣೆಯಾದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ (Rajajinagar Assembly Constituency) ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ (BJP MLA S Suresh Kumar) ಅವರ ನೇತೃತ್ವದಲ್ಲಿ ಶಾಸಕರ ಜನಸಂಪರ್ಕ ಕಛೇರಿಯಲ್ಲಿ 30ನೇ ವಾರದ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಮಾಜಿ ಶಿಕ್ಷಣ ಸಚಿವರೂ ಆದ ಎಸ್. ಸುರೇಶ್ ಕುಮಾರ್ ಅವರು ಕ್ಷೇತ್ರದ ಜನರೊಂದಿಗೆ ಬೆರೆತು, ಸಾರ್ವಜನಿಕ ಸಮಸ್ಯೆಗಳನ್ನು (Public Grievances) ಅಲಿಸಿದರು. ಗ್ರೇಟರ್‌ ಬೆಂಗಳೂರು ಅಧಿಕಾರಿಗಳು, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್. ಸುರೇಶ್ ಕುಮಾರ್ ರವರು ಮಾತನಾಡಿ ಜನರ ಸಮಸ್ಯೆಗಳನ್ನು ನೇರ ಭೇಟಿ ಮಾಡಿ ಅಲಿಸುವುದರಿಂದ ತತಕ್ಷಣ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತಿದೆ. ನಿರಂತರ ಕಾಳಜಿ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಸಾರ್ವಜನಿಕರ ಸಮಸ್ಯೆ ನಿವಾರಣೆ ಮಾಡುವುದು ನಮ್ಮ ಉದ್ದೇಶವಾಗಿದೆ. 30 ವಾರದ ಜನರೊಂದಿಗೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾವಿರಾರು ಸಮಸ್ಯೆಗಳು ಪರಿಹಾರ ಕಂಡಿವೆ.  ಬೆಳೆಯುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳು ನಿರಂತರವಾಗಿ ಕಂಡುಬರುತ್ತಿರುತ್ತವೆ. ಅದಕ್ಕೆ ಸೂಕ್ತ ಪರಿಹಾರ ಮಾಡುವ ಕಾರ್ಯ ನಮ್ಮದು. ಸಾರ್ವಜನಿಕರ ಸಹಕಾರದಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ.  ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ವಿನಾಕರಣ ರಸ್ತೆ ಅಗೆಯಬೇಡಿ ಹಾಗೂ ಸ್ವಚ್ಚತೆ ಕಾಪಾಡಿ ಎಂದು ಮನವಿ ಮಾಡಿಕೊಂಡ ಅವರು ಜನ ತಮ್ಮ ಜವಾಬ್ಬಾರಿ ಅರಿತರೆ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಮಸ್ಯೆಗಳ ಬಗ್ಗೆಯೂ ಅಹವಾಲುಗಳು ಬಂದಿವೆ, ಅವುಗಳನ್ನು ಸಹ ಪರಿಗಣಿಸಿ, ಪರಿಹರಿಸಲು ಸರ್ಕಾರದ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಮಾಜಿ ಉಪ ಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ವಿಜಯಕುಮಾರ್, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್, ಪ್ರತಿಮಾ, ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಬಿಜೆಪಿ ಮುಖಂಡರುಗಳಾದ ಕೇಶವಮೂರ್ತಿ, ಉಮೇಶ್, ಆನಿಲ್ ರಂಗಣ್ಣ, ರಾಕೇಶ್, ಅಮಿತ್ ಜೈನ್, ಕಿರಣ್, ವೇಲುರವರು ಉಪಸ್ಥಿತರಿದ್ದರು.

ಭುವನೇಶ್ವರಿ ನಗರದ ನಿವಾಸಿಗೆ ಸ್ವಾವಲಂಬಿ ಸಾರಥಿ ವಿತರಣೆ:

ಇದೇ ಸಂದರ್ಭದಲ್ಲಿ ತಮ್ಮ ವಿಧಾನಸಭಾ ಮತಕ್ಷೇತ್ರದ ಶ್ರೀ ರಾಮಮಂದಿರ ವಾರ್ಡಿನ ಭುವನೇಶ್ವರಿ ನಗರದ ನಿವಾಸಿಯಾದ ಶ್ರೀ ಅಜಯ್ ಕುಮಾರ್ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2023-24 ನೇ ಸಾಲಿನ “ಸ್ವಾವಲಂಬಿ ಸಾರಥಿ” ಯೋಜನೆಯಡಿ ERTIGA ಕಾರನ್ನು ಶಾಸಕರು ವಿತರಿಸಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";