ಬೆಂಗಳೂರು ನನಗರ ಜಿಲ್ಲೆ, ಸೆ. 6 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರ ವತಿಯಿಂದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ (ಪಿ.ಎಂ.ಇ.ಜಿ.ಪಿ) Prime Minister Employment Generation Programme, PMEGP ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸ್ಥಾಪಿಸಲು ನಿರುದ್ಯೋಗಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು www.kviconline.gov.in ವೆಬ್ಸೈಟ್ PMEGP E-Portal ನಲ್ಲಿ KVIB ಏಜೆನ್ಸಿ ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಭವನ, ನಂ.10, ಜಸ್ಮಾ ಭವನ ರಸ್ತೆ, ಬೆಂಗಳೂರು-530052 ಅಥವಾ ಮೊಬ್ಯೆಲ್ ಸಂಖ್ಯೆ: 94808 25611 ಇವರನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PMEGP Loan: All You Need to Know About the PMEGP Scheme
ನವೋದ್ಯಮಗಳನ್ನು ಪ್ರಾರಂಭಿಸಲು ಅಲ್ಪಸಂಖ್ಯಾತ ಯುವಕ ಯುವತಿಯರಿಂದ ಅರ್ಜಿ ಆಹ್ವಾನ
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ 25-26ನೇ ಸಾಲಿನ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಲು ಅಲ್ಪಸಂಖ್ಯಾತ ಯುವಕ -ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ನೋಂದಾಯಿತ ಪ್ರೈವೇಟ್ ಲಿಮಿಟೆಡ್/ಓಪಿಸಿ/ಎಲ್ಎಲ್ಪಿ/ಪಾಲುದಾರಿಕೆ ಸಂಸ್ಥೆಗಳು (ಖಾಸಗಿ ನಿಯಮಿತ ಕಂಪನಿ (ಕಂಪನಿಗಳ ಕಾಯಿದೆ 2013ರಲ್ಲಿ ವ್ಯಾಖ್ಯಾನಿಸಿದಂತೆ) ಅಥವಾ ಪಾಲುದಾರಿಕೆ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿರಬೇಕು.
ಆರಂಭದ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯವು ರೂ. 100 ಕೋಟಿಗಿಂತ ಕಡಿಮೆಯಿರಬೇಕು. ನವೋದ್ಯಮಗಳು ನೋಂದಣಿ ದಿನಾಂಕದಿಂದ 10 ವರ್ಷಗಳನ್ನು ಮೀರಿರಬಾರದು. ಯೋಜನೆ ಅವಧಿಗೆ ಮಾಲೀಕತ್ವ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದೇಶಕರು/ಪಾಲುದಾರರ ಅನುಕೂಲಕ್ಕಾಗಿ ಬದಲಾಯಿಸಬಾರದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ರಂದು ಕೊನೆಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ eitbt.karnataka.gov.in ಅಥವಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ ನಂ.40, 2ನೇ ಅಡ್ಡರಸ್ತೆ, ನೂರ್ ಮಸೀದಿ ಹತ್ತಿರ, 4ನೇ ಮುಖ್ಯರಸ್ತೆ, ವಸಂತಪ್ಪ ಬ್ಲಾಕ್, ಗಂಗಾನಗರ, ಬೆಂಗಳೂರು-560032. ಅಥವಾ ದೂರವಾಣಿ : 080-2353 9786 ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಉತ್ತರ ವಿಭಾಗದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.