ಜನಸಾಮಾನ್ಯರ ಮನಸ್ಸು ಗೆದ್ದಿದ್ದು ಅಸಾಮಾನ್ಯ ಲೇಖಕ ಎನ್. ನರಸಿಂಹಯ್ಯ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನರಸಿಂಹಯ್ಯನವರಿಗೆ ವಿಶೇಷ ಸ್ಥಾನವಿದೆ. ಕನ್ನಡ ಸಾಹಿತ್ಯ ಓದಿನತ್ತ (Kannada novels) ಸಾಮಾನ್ಯ ಜನರನ್ನು ಆಕರ್ಷಿಸಿ, ಕನ್ನಡ ಓದುಗ ಲೋಕವನ್ನು ವಿಸ್ತರಿಸಿದ ಎನ್. ನರಸಿಂಹಯ್ಯನವರು (father of detective novels in Kannada) ಎಲ್ಲಾ ಕಾಲಕ್ಕೂ ಸಲ್ಲುವ ಲೇಖಕ ಎಂದು ನಾಡೋಜ ಡಾ. ಹಂಪನಾ ಅವರು ಸಪ್ನ ಬುಕ್ ಹೌಸ್ ಪ್ರಕಟಿಸಿರುವ (Sapna Book House) ನರಸಿಂಹಯ್ಯನವರ ೧೦ ಪುಸ್ತಕಗಳ ಲೋಕಾರ್ಪಣೆ ಮತ್ತು ನರಸಿಂಹಯ್ಯ ಶತಮಾನೋತ್ಸವ ಸಮಾರಂಭದಲ್ಲಿ (Centenary) ಗ್ರಂಥ ಲೋಕಾರ್ಪಣೆ ಮಾಡಿ ನುಡಿದರು. ಸಮಾಜದಲ್ಲಿ ನಡೆಯುವ ಕ್ರೌರ್ಯ, ಹಿಂಸೆಯನ್ನು, ಚಿತ್ರಿಸಿ ಅದಕ್ಕೆ ಕಾರಣವನ್ನು ತಿಳಿಸಿ, ಅದನ್ನು ಅಂತ್ಯಗೊಳಿಸುವ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ ಎಂದರು.
60-70 ರ ದಶಕದಲ್ಲಿ ಹುಚ್ಚು ಹತ್ತಿಸಿಕೊಂಡು ಓದುವಂತೆ ಮಾಡಿ ಪತ್ತೇದಾರಿ ನರಸಿಂಹಯ್ಯನವರು ನನ್ನಂತಹವರು ಲೇಖಕರಾಗಿ ರೂಪಗೊಳ್ಳಲು ಪ್ರಚೋದನೆಯಗಳಾಗಿದ್ದರು ಎಂದು ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ ತಿಳಿಸಿದರು. ನಾಲ್ಕನೆಯ ತರಗತಿ ಮಾತ್ರ ಓದಿದ್ದ ನರಸಿಂಹಯ್ಯ ಸರಳ ಶೈಲಿಯಲ್ಲಿ ರೋಚಕವಾಗಿ ಬರೆದರು. ಈ ಮೂಲಕ ಓದುಗರನ್ನು ಹಿಡಿದಿಡುತ್ತಿದ್ದ ರೀತಿ ಅನುಕರಣೆ ಮಾಡುವಂತಹುದು ಮತ್ತು ದೇಶಿಯತೆನ್ನು ಪತ್ತೇದಾರಿ ಕಾದಂಬರಿಗಳಲ್ಲಿ ತಂದರು. ಇಷ್ಟೆಲ್ಲ ಸಾಧಿಸಿದ ನರಸಿಂಹಯ್ಯನವರು ಬರವಣಿಗೆಯ ಮೂಲಕವೇ ಬದುಕಬಹುದೆಂದು ತೋರಿಸಿಕೊಟ್ಟರು.
ಪತ್ತೇದಾರಿ ಕಾದಂಬರಿ ಎಂದರೆ ತಟ್ಟನೆ ನೆನಪಾಗುವ ಹೆಸರು ನರಸಿಂಹಯ್ಯನವರು, ಕನ್ನಡ ಸಾಹಿತ್ಯದ ಓದುಗ ಲೋಕವನ್ನು ಸೃಷ್ಟಿಸಿದ ಅ.ನ.ಕೃ ಅವರ ನಂತರ ಅಕ್ಷರ ಕಲಿತವರಿಗೆ, ಕಲಿಯುತ್ತಿರುವವರಿಗೆ ಓದುವ ಕಿಚ್ಚನ್ನು ಹಚ್ಚಿಸಿ ಕನ್ನಡ ಓದುಗರ ಸಂಖ್ಯೆಯನ್ನು ಹಿಗ್ಗಿಸಿದವರು ನರಸಿಂಹಯ್ಯನವರು. ಲೇಖಕರು ತಮ್ಮ ಪುಸ್ತಕ ಮುದ್ರೆಣಗೊಂಡರೆ ಸಾಕು ಎನ್ನುವ ಸ್ಥಿತಿಯಲ್ಲಿ ನರಸಿಂಹಯ್ಯನವರ ಭಯಂಕರ ಭೈರಾಗಿ 100 ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಇಷ್ಟು ಮಹತ್ವದ ಪತ್ತೇದಾರಿ ಸಾಹಿತ್ಯವನ್ನು ಕನ್ನಡ ವಿಮರ್ಶಕರು ಮತ್ತು ಸರ್ಕಾರ ಕಡೆಗಣಿಸಿದ್ದು ವಿಷಾದನೀಯ ಎಂದರು.
ನರಸಿಂಹಯ್ಯ ಕುಟುಂಬದ 4 ತಲೆಮಾರುಗಳು ಉಪಸ್ಥಿತಿ:
ಕಾಯಕ್ರಮದಲ್ಲಿ ಇನ್ನೊಬ್ಬ ಮುಖ್ಯ ಅತಿಥಿ ಡಾ. ಉದ್ದಂಡಯ್ಯ ಅವರು ನರಸಿಂಹಯ್ಯ ನವರ ಅಧ್ಯಯನಶೀಲತೆಯನ್ನು ನೆನೆದು ನರಸಿಂಹಯ್ಯನವರ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರ ಹೆಸರನ್ನು ಬೆಂಗಳೂರಿನಲ್ಲಿ ಯಾವುದಾದರೂ ರಸ್ತೆಗೆ ಇಡುವಂತೆ ಸರಕಾರವನ್ನು ಒತ್ತಾಯಿಸಿದರು.
ನರಸಿಂಯ್ಯನವರ 10 ಪುಸ್ತಕಗಳ ಬಿಡುಗಡೆ ಮತ್ತು ಶತಮಾನೋತ್ಸವ ಸಮಾರಂಭಕ್ಕೆ ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿದೇಶಕ ನಿತಿನ್ ಶಾ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ದೊಡ್ಡೆಗೌಡ ನಿರೂಪಣೆ ಮಾಡಿ ಸಭೆಗೆ ವಂದಿಸಿದರು. ಸಮಾರಂಭದಲ್ಲಿ ನರಸಿಂಹಯ್ಯನವರ ಪುತ್ರ ಉಪಸ್ಥಿತರಿದ್ದರು. ಮತ್ತು ಕಾಯಕ್ರಮದಲ್ಲಿ ನರಸಿಂಹಯ್ಯನವರ ಕುಟುಂಬದ 4 ತಲೆಮಾರುಗಳು ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.