ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಗೆ ಬಾಲಗಂಗಾಧರ ತಿಲಕ್ ರವರು ಆರಂಭಿಸಿದ ಸಾರ್ವಜನಿಕ ಗಣೇಶ ಉತ್ಸವ ತುಂಬಾ ಪರಿಣಾಮವನ್ನುಂಟು ಮಾಡಿತು.ದೇಶದಲ್ಲಿ ಆಧ್ಯಾತ್ಮಿಕ ಶಕ್ತಿಯ ಜೊತೆಗೆ ರಾಷ್ಟ್ರೀಯ ಚಳುವಳಿಯ ಶಕ್ತಿ ಉಂಟಾಗಿ ರಾಷ್ಟ್ರೀಯ ಹೋರಾಟದ ಮೂಲಕ ಸ್ವಾತಂತ್ರ್ಯ ಚಳುವಳಿಗೆ ಸ್ಪಷ್ಟ ರೂಪವನ್ನು ನೀಡಿದವು. ಭಾರತೀಯರ ರಾಷ್ಟ್ರೀಯ ಏಕತೆಗು ಗಣೇಶ ಉತ್ಸವ ಕೊಡುಗೆ ನೀಡಿದೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ,ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್ ,ಜೈ ಹಿಂದ್ ಪ್ರತಿಷ್ಠಾನ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಉತ್ಸವ ರಾಷ್ಟ್ರೀಯ ಏಕತೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಾಲಗಂಗಾಧರ ತಿಲಕರವರು 1893ರಲ್ಲಿ ಮೊಟ್ಟಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಆರಂಭಿಸುವ ಮೂಲಕ ಇಡೀ ದೇಶದ ಮೂಲೆ ಮೂಲೆಗಳಲ್ಲಿ ಕೋಟಿ ಕೋಟಿ ಭಾರತೀಯರಲಿ ರಾಷ್ಟ್ರೀಯ ಏಕತೆಯ ಜೊತೆಗೆ ಸಮುದಾಯದ ಸಂಘಟನೆ ,ಆಧ್ಯಾತ್ಮಿಕ ಚಿಂತನೆ, ಆಧ್ಯಾತ್ಮಿಕ ಶಕ್ತಿಯ ನಂಬಿಕೆಯ ಪರಿಣಾಮವಾಗಿ ಇಂದು ಕೋಟ್ಯಾಂತರ ಸಾರ್ವಜನಿಕ ಉತ್ಸವದ ಮಂಡಳಿಗಳು ಕಾರ್ಯವನ್ನು ನಿರ್ವಹಿಸುತ್ತಿದೆ. ಜಾತಿ ,ಮತ ,ಧರ್ಮವನ್ನು ಮೀರಿ ರಾಷ್ಟ್ರೀಯ ಏಕತೆಯನ್ನು ಬೆಳೆಸುತ್ತಿರುವ ಸಾರ್ವಜನಿಕ ಉತ್ಸವ ಇಂದು ವ್ಯಾಪಕವಾಗಿ ಹರಡಿರುವುದಕ್ಕೆ ತಿಲಕ್ ರವರೆ ಕಾರಣವೆಂದರು.ಅವರ ದೇಶ ಸೇವೆ ಸ್ವದೇಶಿ ಚಿಂತನೆ ,ರಾಷ್ಟ್ರ ಭಕ್ತಿ, ರಾಷ್ಟ್ರಪ್ರೇಮ, ನಮ್ಮೆಲ್ಲರಿಗೂ ಸದಾ ಕಾಲ ಆದರ್ಶವಾಗಬೇಕು. ಬಾಲಗಂಗಾಧರ ತಿಲಕರವರು ತೀವ್ರ ಹೋರಾಟದ ಪರಿಣಾಮವಾಗಿ ಸ್ವರಾಜ್ಯ ನನ್ನ ಆ ಜನ್ಮ ಸಿದ್ಧ ಹಕ್ಕು ಅದನ್ನು ಪಡೆದೆ ತೀರುತ್ತೇನೆ ಎಂದು ವೀರ ಘರ್ಜನೆಯ ಮೂಲಕ ಸ್ವದೇಶಿಯ ಜಾಗೃತಿಯ ಕಾರ್ಯಕ್ರಮವನ್ನು ರೂಪಿಸಿದರು. ದೇಶದ ಜನರಲ್ಲಿ ಒಂದುಗೂಡುವಿಕೆಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಗಣೇಶ ಉತ್ಸವ, ಶಿವಾಜಿ ಜಯಂತಿಯನ್ನು ಆಚರಿಸುವ ಮೂಲಕ ರಾಷ್ಟ್ರೀಯ ಜಾಗೃತಿಯನ್ನು ಉಂಟು ಮಾಡಿದ ಮಹಾನ್ ನಾಯಕರು. ಇಂದು ಭಾರತದ ಯುವಶಕ್ತಿ ಆಧ್ಯಾತ್ಮಿಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಮೂಡಿಸಿಕೊಳ್ಳಲು ಹಾಗೂ ಒಂದು ರೀತಿ ಸಂಘಟಿತರಾಗಲು ಗಣೇಶ ಉತ್ಸವಗಳು ಸಹಕಾರಿಯಾಗಿವೆ. ಗಣೇಶ ಉತ್ಸವಗಳು ಹಳ್ಳಿ ಹಳ್ಳಿಗಳಲ್ಲಿ, ಮನೆಮನೆಗಳಲ್ಲಿ ಭಾವೈಕ್ಯತೆಯನ್ನು ಏಕತೆಯನ್ನು ಮೂಡಿಸುವ ಜೊತೆಗೆ ಭಕ್ತಿ ಪ್ರಧಾನವಾದ ಮನಸ್ಸನ್ನು ನಿರ್ಮಿಸುತ್ತದೆ. ನಾವೆಲ್ಲರೂ ಒಂದು ಎಂಬ ಭಾವವನ್ನು ಮೂಡಿಸಿ ಸಂಘಟನೆಗೆ ಸಹಕಾರಿಯಾಗಿದೆ. ಆ ಮೂಲಕ ಸಾಮಾಜಿಕ ಕಾರ್ಯಗಳು, ಸಮಾಜಮುಖಿ ಚಿಂತನೆಗಳು, ಆಧ್ಯಾತ್ಮ ಕಾರ್ಯಕ್ರಮಗಳು, ಕಲೆ ,ಸಾಹಿತ್ಯ, ಸಂಗೀತ ,ನೃತ್ಯ ,ಸಮಗ್ರವಾದ ಕಾರ್ಯಕ್ರಮಗಳು ರೂಪಿಸಿ ಪ್ರತಿಭಾನ್ವಿತರಿಗೆ ಅವಕಾಶವನ್ನು ನೀಡುವ ಜೊತೆಗೆ ಸದಾ ಕಾಲ ಸಮಾಜ ಸುಖವಾಗಿರಲು ಕಾರಣವಾಗಿದೆ ಎಂದು ಋಗ್ವೇದಿ ತಿಳಿಸಿದರು.
ಗಣೇಶ ಉತ್ಸವ ರಾಷ್ಟ್ರೀಯ ಏ ಕತೆಯ ಕಾರ್ಯಕ್ರಮವನ್ನು ಹಿರಿಯರಾದ ಮಂಜುನಾಥ್ ರವರು ಉದ್ಘಾಟಿಸಿ ಜೈ ಹಿಂದ್ ಕಟ್ಟೆಯಲ್ಲಿ ನೂರಾರು ಕಾರ್ಯಕ್ರಮಗಳು ರೂಪಿತವಾಗುತ್ತಿರುವುದು ಪ್ರಚಲಿತ ವಿದ್ಯಮಾನಗಳ ಚಿಂತನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಘಟನೆಗಳು ಕ್ರಿಯಾತ್ಮಕವಾದ ಹಾಗೂ ಪ್ರಚಲಿತ ಅರ್ಥಗರ್ಭಿತವಾದ ಸರಳ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿಯನ್ನು ಮೂಡಿಸಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಋಗ್ವೇದಿ ಯೂತ್ ಕ್ಲಬ್ ನ ಅಧ್ಯಕ್ಷರಾದ ಶರಣ್ಯ, ಸಾನಿಕ, ಸಿಂಚನ, ಶ್ರಾವ್ಯ , ಮಹೇಶ್,ಸುಮಂತ್ ,ಸುಹಾಸ್, ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಮಾಲಾ, ರವಿ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.