*ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬಾಗಿನ ವಿತರಣೆ ಮತ್ತು ಹಿರಿಯ ಸಾಧಕರಿಗೆ ನೂರ್ಕಾಲ ಸುಖವಾಗಿ ಬಾಳಿ ಪ್ರಶಸ್ತಿ ಪ್ರದಾನ*
*ಹಿರಿಯರಿಗೆ ಗೌರವ ಕೊಡಿ, ತಂದೆ, ತಾಯಿಯ ಪ್ರೀತಿಗಳಿಸಿದರೆ ಪ್ರಪಂಚವೇ ಗೆದ್ದಂತೆ-ನ್ಯಾಯಮೂರ್ತಿ ಆರ್.ದೇವದಾಸ್*
ಗಾಂಧಿಭವನ: ದತ್ತಶ್ರೀ ಸಾಂಸ್ಕೃತಿಕ ವೇದಿಕೆ ಮತ್ತು ಸುಮಂಗಲಿ ಸೇವಾಶ್ರಮ: ವಕೀಲರಾದ ಎ.ರಾಜೇಶ್ ರವರ ಅಭಿಮಾನಿ ಬಳಗ, ಅರುಂಧತಿ ಸೇವಾಶ್ರಮ ಟ್ರಸ್ಟ್ ಹಾಗೂ ಅಧಿಜಾಂಬವರ ಜಾಗೃತಿ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಿರಿಯ ಸಾಧಕರಿಗೆ ನೂರ್ಕಾಲ ಸುಖವಾಗಿ ಬಾಳಿ ಪ್ರಶಸ್ತಿ ಪ್ರಧಾನ ಮತ್ತು ಮಹಿಳೆಯರಿಗೆ ಭಾಗಿನ ಅರ್ಪಣೆ ಕಾರ್ಯಕ್ರಮ.
ಕರ್ನಾಟಕ ಉಚ್ಛ ನ್ಯಾಯಲಯದ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು, ಶಿಕ್ಷಣ ತಜ್ಞರಾದ ಡಾ.ವೂಡೇ ಪಿ.ಕೃಷ್ಣ, ನಿವೃತ್ತ ನ್ಯಾಯಮೂರ್ತಿ ಎಂ.ರಾಮಕೃಷ್ಣರವರು, ಹಿರಿಯ ವಕೀಲರಾದ ಎ.ರಾಜೇಶ್, ಹಿರಿಯ ಸಾಹಿತಿ ರಾಜೇಶ್ವರಿ, ಜಾಂಭವ ಗಂಗಾಧರ್, ಕನ್ನಡ ಪರ ಹೋರಾಟಗಾರರಾದ ನರಸಿಂಹಮೂರ್ತಿರವರು, ಜನಪದ ಗಾಯಕ ಗುರುರಾಜ್ ಹೊಸಕೋಟೆ, ಸಂತವಾಣಿ ಸುಧಾಕರ್ ರವರು ಗೌರಿ ಪೂಜೆ ಮಾಡಿ, ಸಸಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ನ್ಯಾಯಮೂರ್ತಿ ಆರ್.ದೇವದಾಸ್* ರವರು ಎಲ್ಲರು ಹಿರಿಯರನ್ನ ಗೌರವಿಸಬೇಕು ,ತಂದೆ, ತಾಯಿಯ ಪ್ರೀತಿ ಗಳಿಸಿದರೆ ಪ್ರಪಂಚವೆ ಗೆದ್ದಂತೆ.
ನ್ಯಾಯಾಂಗ ಮತ್ತು ಮಾಧ್ಯಮದ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಕೆಲಸವಾಗಬೇಕು.
ನಾನು ಸಮಾಜಕ್ಕೆ ಏನು ಕೊಡುಗೆ ಕೊಟ್ಟೆ ಎಂಬುದು ಮುಖ್ಯ. ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಸಮಾಜದ ಬದಲಾವಣೆ ಪ್ರಯತ್ನ ಮಾಡಿದರೆ ಸಾಕು ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
*ಡಾ.ವೂಡೇ ಪಿ.ಕೃಷ್ಣರವರು* ಮಾತನಾಡಿ ಹಿರಿಯರುಗಳ ಆಶೀರ್ವಾದ, ಹಾರೈಕೆ ಸಿಗುವುದು ಪುಣ್ಯದ ಫಲ ಲಭಿಸಿದಂತೆ. ಶಿಕ್ಷಣದ ಮೂಲಕ ಸಮಾಜ ಕಟ್ಟುವ ಕೆಲಸವಾಗಬೇಕು.
ನಮ್ಮ ಹಿರಿಯರನ್ನ ಗೌರವಿಸಿದರೆ, ನಮ್ಮನ್ನ ಗೌರವಿಸಿದಂತೆ. ಹಿರಿಯರನ್ನ ಗೌರವಿಸಲ್ಲಿಲ ವೆಂದರೆ ನಿಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಮನೆಗೆ ಬರುವ ಅತಿಥಿಗಳನ್ನು ದೇವರ ಸಮಾನವಾಗಿ ನೋಡುತ್ತೇವೆ. ದೇಶದ ಸಂಪ್ರದಾಯ, ಸಂಸ್ಕೃತಿ, ಪರಂಪರೆ ವಿಶ್ವ ಶೇಷ್ಠವಾಗಿದೆ ಎಂದು ಹೇಳಿದರು.
ಸಾಹಿತಿಗಳಾದ ರಂಗಸ್ವಾಮಿ, ದ್ವಾರನಕುಂಟೆ ಪಾತಣ್ಣ, ಹಿರಿಯ ಪತ್ರಕರ್ತರಾದ ರು.ಬಸಪ್ಪ, ಕನ್ನಡ ಪರ ಹೋರಾಟಗಾರ ಕರ್ಜಗಿ, ಹಿರಿಯ ವಕೀಲ ಶಾಂತಪ್ಪ ಎಸ್. ಖಾನಹಳ್ಳಿರವರಿಗೆ ನೂರ್ಕಲ ಸುಖವಾಗಿ ಬಾಳಿ ಎಂಬ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಧಾನಸೌಧ ನೌಕರರಿಂದ ಗಾಯನ ಕಾರ್ಯಕ್ರಮ.