Live Stream

[ytplayer id=’22727′]

| Latest Version 8.0.1 |

Cultural

ತಮೊಹಾ ಆರ್ಟ್ಸ್ ಫೌಂಡೇಶನ್ – 9ನೇ ವಾರ್ಷಿಕೋತ್ಸವ

ತಮೊಹಾ ಆರ್ಟ್ಸ್ ಫೌಂಡೇಶನ್ – 9ನೇ ವಾರ್ಷಿಕೋತ್ಸವ
ಬೆಂಗಳೂರು :ತಮೊಹಾ ಆರ್ಟ್ಸ್ ಫೌಂಡೇಶನ್ ತನ್ನ 9ನೇ ವಾರ್ಷಿಕೋತ್ಸವವನ್ನು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ  ಇದೇ ಭಾನುವಾರ, 24 ಆಗಸ್ಟ್ 2025, ಸಂಜೆ 6.00 ಗಂಟೆಗೆ ಭವ್ಯವಾಗಿ ಆಚರಿಸುತ್ತಿದೆ.
ಈ ವರ್ಷ ವಿದ್ಯಾರ್ಥಿಗಳಿಂದ ವಿಶೇಷವಾಗಿ “ದಶರೂಪ ವೈಭವಂ – ಶ್ರೀಮಹಾವಿಷ್ಣುವಿನ ದಶಾವತಾರಗಳ ಕಥಾನಕ” ಎಂಬ ನೃತ್ಯನಾಟಕವನ್ನು 80 ಕಲಾವಿದರು ವೇದಿಕೆಯ ಮೇಲೆ ಪ್ರದರ್ಶಿಸಲಿದ್ದಾರೆ.
ಈ ಸಾಂಸ್ಕೃತಿಕ ಸಮಾರಂಭಕ್ಕೆ ಡಾ. ದರ್ಶಿನಿ ಮಂಜುನಾಥ್ (ಕಲಾ ನಿರ್ದೇಶಕಿ, ನೃತ್ಯ ದಿಶಾ ಟ್ರಸ್ಟ್) ಹಾಗೂ ಗುರು ಶಶಿಕಲಾ ವೆಂಕಟೇಶ್ (ಕಲಾ ನಿರ್ದೇಶಕಿ, ನೃತ್ಯಸುಧಾ ಕಲಾ ಶಾಲೆ) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಭರತನಾಟ್ಯ ರೂಪದಲ್ಲಿ ಶ್ರೀಮಹಾವಿಷ್ಣುವಿನ ದಿವ್ಯ ಕಥಾನಕವನ್ನು ಅನಾವರಣಗೊಳಿಸುವ ಈ ಉತ್ಸವ ಭಕ್ತಿ, ಸಂಪ್ರದಾಯ ಮತ್ತು ಕಲಾತ್ಮಕತೆಯ ಅಸಾಧಾರಣ ಸವಿಯನ್ನು ಪ್ರೇಕ್ಷಕರಿಗೆ ನೀಡಲಿದೆ ಎಂದು ತಮೋಹಾ ಆರ್ಟ್ಸ್ ಫೌಂಡೇಶನ್ ನಿರ್ದೇಶಕಿ ವಿದುಷಿ ಶ್ರೀಮತಿ ಗಾಯತ್ರಿ ಮಯ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";