ಬಿಬಿಎಂಪಿಯಲ್ಲಿ ಸುಪರ್ದಿಯಲ್ಲಿ ನೂರಾರು ಶಾಲೆ, ಕಾಲೇಜುಗಳು ಇವೆ ಅದರಲ್ಲಿ ಶೇಕಡ 80ರಷ್ಟು ಹೊರಗುತ್ತಿಗೆ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಬಿಎಂಪಿಯಲ್ಲಿ ಹೊರಗುತ್ತಿಗೆಯಲ್ಲಿ ಅತಿಥಿ ಉಪನ್ಯಾಸಕರುರಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಿಲ್ಲದಿರುವ 35ಶಿಕ್ಷಕರು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಶೇಕಡ ಕಡಿಮೆ ಫಲಿತಾಂಶ ನೀಡಿರುವ 37ಅತಿಥಿ ಶಿಕ್ಷಕರು ಉಪನ್ಯಾಸಕರುಗಳಿಗೆ ಗೌರವಧನ ತಡೆಹಿಡಿದು ಅವರ ನಿಯೋಜನೆಯನ್ನು ರದ್ದುಪಡಿಸಿದ್ದಾರೆ.
72ಅತಿಥಿ ಶಿಕ್ಷಕರು ಕಳೆದ 10ವರ್ಷಗಳಗಿಂತ ಹೆಚ್ಚು ಅವಧಿ ಕಾಲ ಬಿಬಿಎಂಪಿ ಶಾಲೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಹತೆ ಇಲ್ಲವೆಂದು ಹೇಳುತ್ತಿದ್ದಾರೆ ಮತ್ತು ಶೇಕಡ 50ರಷ್ಟು ಕಡಿಮೆ ಫಲಿತಾಂಶ ಬಂದಿರುವ ಕಾರಣ ಒಡ್ಡಿ ಕೆಲಸದಿಂದ ವಿಮುಕ್ತಿಗೊಳಿಸುತ್ತಿದ್ದಾರೆ.
ಅತಿಥಿ ಶಿಕ್ಷಕರು ಈಗಾಗಲೇ 45ವರ್ಷಕ್ಕಿಂತ ಮೇಲ್ಪಟ್ಟುವರಾಗಿದ್ದಾರೆ ಅವರನ್ನ ಏಕಾಎಕಿ ಸೇವೆಯಿಂದ ತೆಗೆದು ಹಾಕುವುದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ಸರ್ಕಾರಿ ಶಾಲೆಯಲ್ಲಿ ಕಡಿಮೆ ಫಲಿತಾಂಶ ಬಂದರು ಅವರನ್ನು ಸೇವೆಯಿಂದ ತೆಗೆದುಹಾಕಿಲ್ಲ ಅದರ ನಮಗೆ ಯಾಕೆ ಈ ಶಿಕ್ಷೆ ಎಂದು ಅತಿಥಿ ಉಪನ್ಯಾಸಕರು ಹೇಳುತ್ತಿದ್ದಾರೆ.
ಬಿಬಿಎಂಪಿ ಶಾಲೆಗೆ ಬರುವ ಮಕ್ಕಳು ಕಡಿಮೆ ಫಲಿತಾಂಶ ಬರಲು ಹಲವು ಕಾರಣಗಳಿಗೆ ಅದರಲ್ಲಿ ಆರ್ಥಿಕ ಪರಿಸ್ಥಿತಿ, ತಂದೆ, ತಾಯಿ ವಿದ್ಯಾವಂತರಲ್ಲದೇ ಇರುವುದು ಮತ್ತು ಮಕ್ಕಳು ಸರಿಯಾದ ಸಮಯಕ್ಕೆ ಶಾಲೆ ಗೈರು ಹಾಜರಿಯಾಗುವುದು ಕಾರಣವಾಗಿದೆ ಅದರೆ ಬಿಬಿಎಂಪಿಯಲ್ಲಿ ಶಿಕ್ಷಕ್ಷರನ್ನ ಹೊಣೆಗಾರರನ್ನ ಮಾಡುವುದು ಎಷ್ಟು ಸಮಂಜಸ. ಕೊಡಲೆ 72ಅತಿಥಿ ಉಪನ್ಯಾಸಕರಿಗೆ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಬೇಕು ಎಂದು ಮುಖ್ಯ ಆಯುಕ್ತರಲ್ಲಿ ಮನವಿ ಮಾಡಲಾಗುತ್ತದೆ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಎನ್.ಎಸ್.ಸೋಮಶೇಖರ್ ರವರು ಹೇಳಿದರು