Live Stream

[ytplayer id=’22727′]

| Latest Version 8.0.1 |

Bengaluru Urban

ರಾಜಕೀಯ ಜೀವನದಲ್ಲಿ ನಾನು ಯಾರಿಗೂ ಮೋಸ ಮಾಡಿಲ್ಲ: ವಿಧಾನಪರಿಷತ್ ಸದಸ್ಯ ಪುಟ್ಟಣ್ಣ

ರಾಜಕೀಯ ಜೀವನದಲ್ಲಿ ನಾನು ಯಾರಿಗೂ ಮೋಸ ಮಾಡಿಲ್ಲ: ವಿಧಾನಪರಿಷತ್ ಸದಸ್ಯ ಪುಟ್ಟಣ್ಣ

ಕರ್ನಾಟಕ ಇಂಜನಿಯರ್ಸ್ ಅಕಾಡೆಮಿಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರ: ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣರವರ ಹುಟ್ಟುಹಬ್ಬವನ್ನು ರಾಜಾಜಿನಗರ ವಿಧಾನಸಭಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿತ್ತು.

ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣರವರು ಕೇಕ್ ಕತ್ತರಿಸಿ , ಸಿಹಿ ವಿತರಿಸಿದರು. ಮಾಜಿಮಹಾಪೌರರು, ಮಹಿಳಾ ಅಭಿವೃದ್ದಿ ನಿಗಮ ಅಧ್ಯಕ್ಷರಾದ ಜಿ.ಪದ್ಮಾವತಿ, ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಟಿ.ಎನ್.ರಾಧಕೃಷ್ಣರವರು, ರಾಮಮಂದಿರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎನ್.ವೆಂಕಟೇಶ್ ರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಪದ್ಮರಾಜ್ ಜಿ.ಕೃಷ್ಣಮೂರ್ತಿ, ಯುವ ಮುಖಂಡ ಶಿಶಿರ್ ಪುಟ್ಟಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಆಪಲ್ ನಾಗರಾಜ್, ಜಿ.ಜನಾರ್ಧನ್,ಸುಧಾಕರ್, ವಿಶ್ವನಾಥ್ ಬಾಬು, ಮಂಜುನಾಥ್ ಸಪಾನಿ, ಪಲ್ಲವಿ ಪ್ರಭುರವರು ದೀಪ ಬೆಳಗಿಸಿ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣರವರು ಮಾತನಾಡಿ ನಿಮ್ಮಲ್ಲರ ಪ್ರೀತಿ ವಿಶ್ವಾಸದ ಋಣ ತೀರಿಸುವ ಕೆಲಸ ಮಾಡುತ್ತೇನೆ.
ನನ್ನ ರಾಜಕೀಯ ಜೀವನದಲ್ಲಿ ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ರಾಜಕೀಯ ಶತ್ರುಗಳಿಗೂ ಸಹಾಯ ಮಾಡಿದ್ದೇನೆ, ಎಲ್ಲರ ಪ್ರೀತಿಗಳಿಸಿದ್ದೇನೆ. ಬಸವರಾಜ್ ಹೊರಟ್ಟಿರವರ ನನಗೆ ಸಲಹೆ ನೀಡಿದ್ದರು ಶಿಕ್ಷಕರ ಸಹಾಯ ಮಾಡು ನಿನ್ನನ ಕಾಪಾಡುತ್ತಾರೆ ಎಂದು ಹೇಳಿದ್ದರು ಅದರಂತೆ ನನಗೆ ಸತತ ವಿಧಾನಪರಿಷತ್ ಆಯ್ಕೆ ಮಾಡಿದರು.

ವಿಧಾನಸಭೆಯಲ್ಲಿ ಸೋಲು ತಲೆಕೆಡಿಸಿಕೊಳ್ಳಬೇಡಿ, 50ಸಾವಿರ ಮತಗಳು ನನಗೆ ಈ ಕ್ಷೇತ್ರ ಕೊಟ್ಟಿದೆ ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ನನ್ನ ಸಹಾಯ ನಿರಂತರವಾಗಿರುತ್ತದೆ. ರಾಜಕಾರಣದಲ್ಲಿ ಸಮಸ್ಯೆ ಏನು ಎಂದು ತಿಳಿದು ಜನರಿಗೆ ಸಹಾಯ ಮಾಡಬೇಕು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನನ್ನ ಜವಾಬ್ದಾರಿ ಹೆಚ್ಚಿದೆ, ನಿಮ್ಮ ಸೇವೆಗೆ ಸದಾ ಇರುತ್ತೇನೆ ಎಂದು ಹೇಳಿದರು.

ಜಿ.ಪದ್ಮಾವತಿರವರು ಮಾತನಾಡಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣರವರು ರಾಜಕೀಯ ಕ್ಷೇತ್ರದಲ್ಲಿ ಕಿಂಗ್ ಮೇಕರ್. ಹುಟ್ಟುವುದು ಖಚಿತ ಅದರೆ ಅರ್ಥಪೂರ್ಣವಾಗಿ ಜೀವನವನ್ನು ಪುಟ್ಟಣ್ಣರವರು ಸಾಗಿದ್ದಾರೆ. ಶಿಕ್ಷಕರ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ 5ಬಾರಿ ವಿಜಯಶಾಲಿಯಾಗಿದ್ದಾರೆ. ಬುದ್ದಿವಂತರಾದ ಶಿಕ್ಷಕ ಮನವನ್ನು ಪುಟ್ಟಣ್ಣ ಗೆದ್ದಿದ್ದಾರೆ. ಶಾಲಾ ಮಕ್ಕಳ ಮತ್ತು ಶಿಕ್ಷಕರ ಸಮಸ್ಯೆ ಕುರಿತು ವಿಧಾನಪರಿಷತ್ ನಲ್ಲಿ ಸರ್ಕಾರ ಮನ ಮುಟ್ಟುವಂತೆ ಪುಟ್ಟಣ್ಣರವರು ಮಾತನಾಡಿದ್ದಾರೆ ರಾಜಕಾರಣದಲ್ಲಿ ಉಜ್ವಲ ಭವಿಷ್ಯ , ಉತ್ತಮ ಸ್ಥಾನಮಾನ ಸಿಗಲಿ ಪುಟ್ಟಣ್ಣರವರಿಗೆ ಸಿಗಲಿ ಎಂಬ ಶುಭ ಹಾರೈಸುತ್ತೇನೆ.

ಟಿ.ಎನ್.ರಾಧಕೃಷ್ಣರವರು ಮಾತನಾಡಿ ಪುಟ್ಟಣ್ಣರವರು ಹೋರಾಟಗಾರರು ಉತ್ತಮ ಸಂಘಟಕರು .5ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಶಿಕ್ಷಣಕ್ಕೆ ಮತ್ತು ಶಿಕ್ಷಕರ ಕುರಿತು ಅವಿರತ ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ಎನ್.ವೆಂಕಟೇಶ್ ರವರು ಪುಟ್ಟಣ್ಣರವರು ಸಚಿವರಾಗಲಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಹೊಸ ದಿಕ್ಕಿನತ್ತ ಸಾಗಲಿ. ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ರಾಜಾಜಿನಗರದಲ್ಲಿ ಪ್ರತಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗಿದೆ ಎಂದು ಹೇಳಿದರು.

ಜಿ.ಕೃಷ್ಣಮೂರ್ತಿರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷ ಶಾಸಕರ ಬೇಕು, ಸರ್ಕಾರ ನಮ್ಮದು ಅದರೆ ನಮ್ಮ ಶಾಸಕರು ಇಲ್ಲ. ಪುಟ್ಟಣ್ಣರವರು ಉತ್ತಮ ಹೋರಾಟಗಾರರು ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವರಾಗಲಿ ಎಂದು ಶುಭ ಕೋರುತ್ತೇನೆ ಎಂದು ಹೇಳಿದರು. ಆಪಲ್ ನಾಗರಾಜ್ ರವರು ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಬೇಕು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣರವರಿಗೆ ಸಚಿವರಾಗಲಿ ಎಂದು ಶುಭ ಹಾರೈಕೆ ಎಂದು ಹೇಳಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";