Live Stream

[ytplayer id=’22727′]

| Latest Version 8.0.1 |

Cultural

ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು

ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು
ಭಗವಾನ್ ಕೃಷ್ಣನು ಧರ್ಮಸಂಸ್ಥಾಪನೆಯ ಆರಾಧ್ಯ ದೇವತೆಯಾಗಿದ್ದಾನೆ. ಶ್ರೀಕೃಷ್ಣನು ವಿಷ್ಣುವಿನ ಎಂಟನೇ ಅವತಾರ. ಅವನು ಹದಿನಾರು ಕಲೆಗಳನ್ನು ಒಳಗೊಂಡಿರುವುದರಿಂದ ಅವನನ್ನು ಪೂರ್ಣಾವತಾರವೆಂದೂ ಕರೆಯಲಾಗುತ್ತದೆ.
೧. ಸಂಬಂಧಿಸಿದ ನದಿ : ಶ್ರೀಕೃಷ್ಣನೊಂದಿಗೆ ಯಮುನಾ ನದಿಯ ಅವಿನಾಭಾವ ಸಂಬಂಧವಿದೆ. ಯಮುನೆಯಲ್ಲಿ ಹೆಚ್ಚು ಕೃಷ್ಣತತ್ವವಿದೆ. ಅವಳ ಬಣ್ಣವು ಶ್ರೀಕೃಷ್ಣನಂತೆಯೇ ನುಸುಗಪ್ಪಾಗಿದೆ. ಯಮುನೆಯನ್ನು ‘ಕಾಲಿಂದಿ’ ಎಂದೂ ಕರೆಯುತ್ತಾರೆ.
೨. ಕುಂಡಲಿನಿಯಲ್ಲಿ ಸಂಬಂಧಿಸಿದ ಚಕ್ರಗಳು : ಕುಂಡಲಿನಿಯ ಅನಾಹತ ಚಕ್ರವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ.
೩. ಸಂಬಂಧಿಸಿದ ದಿನಗಳು : ಬುಧವಾರ ವಿಠ್ಠಲನ ದಿನವಾಗಿದೆ. ಕಲಿಯುಗದಲ್ಲಿ ಶ್ರೀಕೃಷ್ಣನ ಅವತಾರವೆಂದರೆ ಶ್ರೀ ವಿಠ್ಠಲ. ಶ್ರಾವಣದ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ಅಂದರೆ ಗೋಕುಲಷ್ಟಮಿಯ ದಿನವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಮಾರ್ಗಶಿರ್ಷ ಶುಕ್ಲ ಪಕ್ಷ ಏಕಾದಶಿಯಂದು ಬರುವ ‘ಗೀತಾ ಜಯಂತಿ’ ಕೃಷ್ಣನು ಅರ್ಜುನನಿಗೆ ಶ್ರೀಮದ್‌ಭಗವದ್ಗೀತೆಯ ಉಪದೇಶ ಮಾಡಿದ ದಿನ.
೪. ಭಗವಾನ್ ಕೃಷ್ಣನ ತತ್ವದ ಬಣ್ಣವು ಯೋಗ ಮಾರ್ಗಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ : ಭಕ್ತಿಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ನೀಲಿಯಾಗಿರುತ್ತದೆ. ಜ್ಞಾನಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ಹಳದಿಯಾಗಿರುತ್ತದೆ. ಕರ್ಮಮಾರ್ಗದ ಪ್ರಕಾರ ಶ್ರೀಕೃಷ್ಣನ ತತ್ವದ ಬಣ್ಣ ಹಳದಿ-ಕೇಸರಿ ಬಣ್ಣದ್ದಾಗಿದೆ.
೫. ಪ್ರಿಯವಾದ ನೈವೈದ್ಯ : ಬೆಣ್ಣೆ, ಮೊಸರವಲಕ್ಕಿ ಮತ್ತು ಶಿರಾ ಶ್ರೀಕೃಷ್ಣನಿಗೆ ಪ್ರಿಯವಾದ ತಿನಿಸುಗಳು. ಉತ್ತರ ಭಾರತದ ವಿವಿಧ ದೇವಾಲಯಗಳಲ್ಲಿ ೫೬ ಭೋಗಗಳನ್ನು (ವಿವಿಧ ಸಿಹಿತಿಂಡಿಗಳು) ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.
೬. ಆಯುಧಗಳು : ಸುದರ್ಶನ್ ಚಕ್ರ ಮತ್ತು ಪಾಂಚಜನ್ಯ ಎಂಬ ಶಂಖ ಅವನ ಆಯುಧಗಳಾಗಿವೆ.
 ಸಂಬಂಧಿಸಿದ ದೇವಾಲಯಗಳು ಮತ್ತು ಜಾಗೃತ ದೇವಾಲಯಗಳು : ಗೋಕುಲ, ವೃಂದಾವನ, ಮಥುರೆ, ದ್ವಾರಕೆ ಮತ್ತು ಜಗನ್ನಾಥಪುರಿ ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ದೇವಾಲಯಗಳಾಗಿವೆ. ಕೇರಳದ ಗುರುವಾಯೂರ್ ದೇವಸ್ಥಾನ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ ಇವು ಕೃಷ್ಣನ ಜಾಗೃತ ದೇವಾಲಯಗಳು.
ಶ್ರೀಕೃಷ್ಣನ ವಿವಿಧ ಹೆಸರುಗಳು : ಕನ್ಹಯ್ಯ, ಕಾನ್ಹಾ, ಶ್ಯಾಮ್‌ಸುಂದರ, ಮುರಳೀಧರ, ಗಿರಿಧರ, ಕೇಶವ, ಮಾಧವ, ಮೋಹನ, ಮನಮೋಹನ, ಬನ್ಸಿವಾಲಾ, ಮಖಾಂಚೋರ, ರಾಧೇಶ್ಯಾಮ್, ಗೋವಿಂದ, ಗೋಪಾಲ, ಮುರಾರಿ, ಕೃಷ್ಣ, ದೇವಕೀನಂದನ, ಯಶೋದಾನಂದನ, ನಂದನಂದನ, ವಾಸುದೇವ, ದ್ವಾರಕಾಧೀಶ, ತ್ರಿಲೋಕನಾಥ, ಬಾಂಕೇಬಿಹಾರಿ, ಚಕ್ರಧರ, ನಂದಕಿಶೋರ, ಲಡ್ಡುಗೋಪಾಲ ಮುಂತಾದ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ದೇವಕೀ, ಯಶೋದಾ ಮತ್ತು ನಂದರಾಜರ ಮಗನಾಗಿ ಅವನಿಗೆ ಕ್ರಮವಾಗಿ ದೇವಕೀನಂದನ, ಯಶೋದಾನಂದನ ಮತ್ತು ನಂದನಂದನ ಎಂಬ ಹೆಸರುಗಳು ಬಂದವು.
ವಸುದೇವ ಶ್ರೀಕೃಷ್ಣನ ಜನ್ಮ ತಂದೆ. ದೇವಕೀ ಶ್ರೀಕೃಷ್ಣನಿಗೆ ಜನ್ಮ ನೀಡಿದ ತಾಯಿ. ವಸುದೇವನು ಶ್ರೀಕೃಷ್ಣನನ್ನು ಮಥುರೆಯಿಂದ ಗೋಕುಲಕ್ಕೆ ಕರೆದೊಯ್ದಾಗ, ನಂದರಾಜ ಮತ್ತು ಯಶೋದೆ ಶ್ರೀಕೃಷ್ಣನನ್ನು ಪಾಲನೆ ಮಾಡಿದರು. ಆದ್ದರಿಂದ ಯಶೋದಾ ಶ್ರೀಕೃಷ್ಣನ ಸಾಕು ತಾಯಿ ಮತ್ತು ನಂದರಾಜ ಸಾಕು ತಂದೆಯಾದರು. ಆದ್ದರಿಂದ, ಶ್ರೀಕೃಷ್ಣನು ವಸುದೇವ, ದೇವಕಿ, ಯಶೋದಾ ಮತ್ತು ನಂದರಾಜರ ಮಗನೂ ಆಗಿದ್ದನು. ಶ್ರೀಕೃಷ್ಣ ವಸುದೇವನ ಮಗನಾಗಿರುವುದರಿಂದ ಅವನನ್ನು ‘ವಸುದೇವಸುತ’ ಎಂದೂ ಕರೆಯಲಾಗುತ್ತದೆ.
ಕೊಳಲನ್ನು ಮುರಳಿ ಎಂದೂ ಕರೆಯುವುದರಿಂದ ಅವನನ್ನು ‘ಮುರಳೀಧರ’ ಎಂದೂ ಕರೆಯುತ್ತಾರೆ. ಶ್ರೀಕೃಷ್ಣನು ಗೊಲ್ಲನಾಗಿ ಹಸುಗಳನ್ನು ರಕ್ಷಿಸಿದ್ದರಿಂದ ಅವನಿಗೆ ‘ಗೋಪಾಲ’ ಎಂಬ ಹೆಸರು ಬಂದಿತು. ಭಗವಾನ ಶ್ರೀಕೃಷ್ಣನನ್ನು ‘ಗೋವಿಂದ’ ಎಂದು ಕರೆಯಲಾಗುತ್ತದೆ, ಏಕೆಂದರೆ ಅವನು ಪ್ರತಿಯೊಂದು ಪ್ರಾಣಿಯ ಹೃದಯದಲ್ಲಿ ಆನಂದದ ರೂಪದಲ್ಲಿ ವಾಸಿಸುತ್ತಾನೆ. ಶ್ರೀಕೃಷ್ಣನು ಎಲ್ಲರ ಇಂದ್ರಿಯಗಳ ಅಂತಿಮ ಮಾರ್ಗದರ್ಶಿ. ಅದಕ್ಕಾಗಿಯೇ ಅವರನ್ನು ‘ಹೃಷಿಕೇಶ’ ಎಂದು ಕರೆಯಲಾಗುತ್ತದೆ. ‘ಹೃಷಿಕ್’ ಎಂದರೆ ಇಂದ್ರಿಯಗಳು. ಅವುಗಳ ಈಶ (ಒಡೆಯ) ಅಂದರೆ ಅವನೇ ಹೃಷಿಕೇಶ.
ಆಧಾರ : Sanatan.org/kannada
ಸಂಗ್ರಹ :ಶ್ರೀ. ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299 )
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";