Live Stream

[ytplayer id=’22727′]

| Latest Version 8.0.1 |

Bengaluru Urban

ಶ್ರೀ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ

ಶ್ರೀ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ
ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯು ಕಳೆದ 23 ವರ್ಷಗಳಿಂದ ಸಮಾಜದಲ್ಲಿನ ಹಿಂದೂಗಳಿಗೆ ಧರ್ಮಜಾಗೃತಿ ಮತ್ತು ಧರ್ಮಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಹಾಗೆಯೇ ಅದರ ಒಂದು ಭಾಗವಾಗಿ ಬೆಂಗಳೂರಿನ ವಡೆಯರಹಳ್ಳಿಯಲ್ಲಿ ಧರ್ಮಶಿಕ್ಷಣ ವರ್ಗವನ್ನು ಪ್ರಾರಂಭಿಸಿ ಅಲ್ಲಿಯ ಉದ್ಭವ ಶ್ರೀ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ಥಳೀಯ ಧರ್ಮಪ್ರೇಮಿಗಳಿಗೆ ದೇವಸ್ಥಾನದ ಮಹತ್ವ, ದೇವಸ್ಥಾನದ ಪಾವಿತ್ರ್ಯವನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಹಾಗೂ ದೇವಸ್ಥಾನಕ್ಕೆ ಹೋಗುವಾಗ ನಾವೆಲ್ಲರೂ ಯಾವ ಭಾವವನ್ನು ಇಟ್ಟುಕೊಂಡು ಹೋಗಬೇಕು, ಹಾಗೆಯೇ ದೇವಸ್ಥಾನದ ದರ್ಶನವನ್ನು ಯೋಗ್ಯ ರೀತಿಯಲ್ಲಿ ಹೇಗೆ ಪಡೆಯಬೇಕು, ಈ ಎಲ್ಲಾ ವಿಷಯದ ಕುರಿತು ಮಾಹಿತಿ ಮತ್ತು ಸಾಮೂಹಿಕವಾಗಿ ದೇವರ ನಾಮಜಪವನ್ನು ಮಾಡಿಸಲಾಯಿತು. ಮತ್ತು ಅಲ್ಲಿಯ ಜನರು ಮರದ ಬುಡ ಮತ್ತು ಬೀದಿಗಳಲ್ಲಿ ಇಟ್ಟ ದೇವರ ಫೋಟೋಗಳನ್ನು ಸ್ವಚ್ಛ ಮಾಡಿ ಶಾಸ್ತ್ರೀಯ ಪದ್ಧತಿಯಲ್ಲಿ ಅಗ್ನಿಗೆ ಸಮರ್ಪಿಸಲಾಯಿತು.
ಈ ಸಮಯದಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ. ಲಕ್ಷ್ಮಣ್,ಶ್ರೀ. ಶಶಿ ಕುಮಾರ್, ಶ್ರೀ. ಸೋಮಶೇಖರ್ ಚಿಕ್ ಮಠ್, ಶ್ರೀ. ನಂದೀಶ್, ರಾಯಲ್ ಟೌನ್ ಶಿಪ್ ನ ಶ್ರೀ. ದೇವರಾಜ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸೌ ಭವ್ಯ ಗೌಡ, ಶ್ರೀ ನೀಲೇಶ್ವರ ಮುಂತಾದ ಕಾರ್ಯಕರ್ತರು ಸೇರಿ 50ಕ್ಕಿಂತ ಅಧಿಕ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.
ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ
ಸಂಪರ್ಕ : 7204082609
ವೀ ಕೇ ನ್ಯೂಸ್
";