Live Stream

[ytplayer id=’22727′]

| Latest Version 8.0.1 |

Chamarajanagar

ಮಾನವನ ಜೀವನ, ಬದುಕು, ಸಾರ್ಥಕತೆಯ ಮೌಲ್ಯಗಳ ಸಂದೇಶ ಸಾರಿದ ಶ್ರೀ ಕೃಷ್ಣ ಭಾರತದ ಆಧಾರ ಸ್ತಂಭ

ಮಾನವನ ಜೀವನ, ಬದುಕು, ಸಾರ್ಥಕತೆಯ ಮೌಲ್ಯಗಳ ಸಂದೇಶ ಸಾರಿದ  ಶ್ರೀ ಕೃಷ್ಣ ಭಾರತದ ಆಧಾರ ಸ್ತಂಭ

ಚಾಮರಾಜನಗರ: ಭಾರತದ ಸನಾತನ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ನೀಡಿ ಸಹಸ್ರ ಸಹಸ್ರ ವರ್ಷಗಳ ಕಾಲ ಮಾನವನ ಜೀವನ, ಬದುಕು, ಸಾರ್ಥಕತೆಯ ಮೌಲ್ಯಗಳ ಸಂದೇಶವನ್ನು ಸಾರಿದ ಭಗವಂತನಾದ ಶ್ರೀ ಕೃಷ್ಣ ಭಾರತದ ಆಧಾರ ಸ್ತಂಭವೆಂದು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಶ್ರೀಕೃಷ್ಣ ಪ್ರತಿಷ್ಠಾನ ರಥದ ಬೀದಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಚಾಮರಾಜನಗರ ಜಿಲ್ಲೆಯಲ್ಲಿ ಶ್ರೀ ಕೃಷ್ಣಪ್ರಜ್ಞೆಯನ್ನು 2010 ರಿಂದ ಮೊಸರು ಮಡಿಕೆ ಒ ಡೆಯುವ ಉತ್ಸವ, ಬಲರಾಮ ಜಯಂತಿ ,ರಾಧಾ ಜಯಂತಿ, ಶ್ರೀ ಕೃಷ್ಣ ಜಯಂತಿ ಆಚರಿಸುವ ಮೂಲಕ ಆಧ್ಯಾತ್ಮಿಕ ಜಾಗೃತಿ ಹಾಗೂ ಮಾನವನ ಕಲ್ಯಾಣಕ್ಕೆ ಹಾಗೂ ಪ್ರತಿಭಾವಿಕಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಆಗಸ್ಟ್ 31ರ ಭಾನುವಾರ.
ರಥದ ಬೀದಿಯಲ್ಲಿ ಬೃಹತ್ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ಆಯೋಜಿಸಲಾಗಿದೆ. ತಮಿಳುನಾಡು ,ಕರ್ನಾಟಕದ ವಿವಿಧ ಕಡೆಯಿಂದ ಮೊಸರು ಮಡಿಕೆ ಒಡೆಯುವ ಉತ್ಸವದ ತಂಡಗಳು ಆಗಮಿಸಲಿವೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಶ್ರೀ ಕೃಷ್ಣ ಕವನ ಸ್ಪರ್ಧೆ, ಶ್ರೀಕೃಷ್ಣ ಕೆಸರುಗದ್ದೆ ಓಟ ಶ್ರೀ ಕೃಷ್ಣ ಕಬಡ್ಡಿ ಸ್ಪರ್ಧೆ, ಶ್ರೀ ಕೃಷ್ಣ ಹೂ ಕಟ್ಟುವ ಸ್ಪರ್ಧೆ, ಹಮ್ಮಿಕೊಳ್ಳುವ ಜೊತೆಗೆ ದೇಶಿಯ ಆಟಗಳ ಜಾಗೃತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

20ಅಡಿ ಎತ್ತರದ ಕಂಬಕ್ಕೆ ಕಟ್ಟಿರುವ ಮಡಿಕೆ ಯಲ್ಲಿ ಬೆಣ್ಣೆ ಹಾಗೂ ಮೊಸರು ಒಡೆಯುವ ತಂಡಗಳು 15 ಯುವಕರ ಸಂಖ್ಯೆಗೆ ಅನುಗುಣವಾಗಿ ಗುಂಪನ್ನು ರಚಿಸಿಕೊಂಡು ಆಗಮಿಸಬೇಕು. ಮಾರ್ಗದರ್ಶನಕ್ಕಾಗಿ 9902317670 ಸಂಪರ್ಕಿಸಬೇಕೆಂದು ತಿಳಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರದೀಪ್ ಕುಮಾರ್ ದೀಕ್ಷಿತ್, ಯುವ ಮುಖಂಡರಾದ ಚಂದ್ರಶೇಖರ್ ,ಬೆಂಗಳೂರಿನ ಸತೀಶ್, ಬಿಕೆ ಆರಾಧ್ಯ, ರಾಮಪ್ರಸಾದ್, ಸತೀಶ್, ವಿನೋದ್, ಹರದನಹಳ್ಳಿ ಉಮೇಶ್ ಮತ್ತು ವಾಸು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";