Live Stream

[ytplayer id=’22727′]

| Latest Version 8.0.1 |

Trade & Commerce

ನಟಿ ಅಮೃತ ಪ್ರೇಮ್ ಅವರಿಂದ ದ ಜ್ಯುವೆಲರಿ ಷೋ ಗೆ ಚಾಲನೆ; ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟ

ನಟಿ ಅಮೃತ ಪ್ರೇಮ್ ಅವರಿಂದ ದ ಜ್ಯುವೆಲರಿ ಷೋ ಗೆ ಚಾಲನೆ; ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟ

ಬೆಂಗಳೂರು ಆಗಸ್ಟ್ 15: ದೇಶದ 50 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿರುವ “ದ ಜ್ಯುವೆಲರಿ ಷೋ” ಪ್ರದರ್ಶನ ಮತ್ತು ಮಾರಾಟ ಉತ್ಸವಕ್ಕೆ ನಟಿ ಅಮೃತ ಪ್ರೇಮ್ ಚಾಲನೆ ನೀಡಿದರು.  ಶೆರಟಾನ್ ಗ್ರ್ಯಾಂಡ್ ಹೊಟೇಲ್‌ನಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಆಗಸ್ಟ್ 15 ರಿಂದ 17 ರವರೆಗೆ) ಆಯೋಜಿಸಲಾಗಿದೆ.

ಈ ಮೇಳವನ್ನು ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿದ್ದಾರೆ.

 ದ ಜ್ಯುವೆಲರಿ ಷೋಗೆ ಚಾಲನೆ ನೀಡಿದ ನಟಿ ಅಮೃತಾ ಪ್ರೇಮ್ ಮಾತನಾಡಿ ಗ್ರಾಹಕರ  ಅಭಿರುಚಿ ಮತ್ತು ಬಜೆಟ್‌ಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಬೆಂಗಳೂರಿನ ಜನತೆಗೆ ದೊರೆಯಲಿವೆ. ಈ ಬಾರಿಯ ಮೇಳದಲ್ಲಿ ಎಲ್ಲಾ ಆಭರಣ ಪ್ರಿಯರು ಪ್ರದರ್ಶನದಲ್ಲಿ ಇಟಿರುವಂತಹ ಆಭರಣವನ್ನು ಕಂಡು ರೋಮಾಂಚನಗೊಳ್ಳುತ್ತಾರೆ ಎಂದರು. 

ಅಯೋಜಕರಾದ ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಮಾತನಾಡಿ  ಈ ಮೇಳವು ಎಲ್ಲಾ ರೀತಿಯ ಗ್ರಾಹಕರಿಗೆ ಖಂಡಿತವಾಗಿಯೂ ತೃಪ್ತಿದಾಯಕವಾಗಿರುತ್ತದೆ. ಈ ಪ್ರದರ್ಶನ ಕೇವಲ 3 ದಿನಗಳಾಗಿದ್ದುಸರ್ವರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದುನಂಬಿಕಸ್ಥ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜನರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದೆ. ಭಾರತದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ. ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಟಕ್ಕೆ ಇಟ್ಟಿರುತ್ತಾರೆ. ಎಲ್ಲಾ ಚಿನ್ನದ ಆಭರಣಗಳು BIS ಹಾಲ್ ಮಾರ್ಕ್ ಹೊಂದಿರುತ್ತವೆ.ವವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ GIA/IGI ಪ್ರಮಾಣಿತ ಆಗಿವೆ. ಆಭರಣ ಮಳಿಗೆಗಳ ಸದಸ್ಯರುಚಿನ್ನಾಭರಣ ಮತ್ತು ವಜ್ರಾಭರಣದ ಬಗ್ಗೆ ಎಲ್ಲಾ ತರಹದ  ಮಾಹಿತಿಯನ್ನು ನೀಡುತ್ತಾರೆ.

ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕ್ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು.

ಪ್ರಮುಖ ಆಭರಣ ತಯಾರಕರು: ಬೆಂಗಳೂರಿನ  ಬಿ ಎನ್ ಆರ್ಗಜರಾಜ್ಎಂ ಆರ್ ಕೆ ಜೀವಾರ್ಪ್ರಕಾಶ್ ಜ್ಯುವೆರ‍್ಸ್ಸಿಂಹ ಜ್ಯುವೆರ‍್ಸ್ಶ್ರೀ ಗಣೇಶ್ ಡೈಮೆಂಡ್ಸ್ಎಂ ಪಿ ಜ್ಯುವೆರ‍್ಸ್ನವರತನ್ನವರತನ್ ಸನ್ಸ್ಪಂಚಕೇಸರಿ ಬಡೇರಾಡೈಮ್ಸ್ನಿರ್ಮಲ್ ಜ್ಯುವೆರ‍್ಸ್ಆರ್ಟ್ ಇಂಡಿಯಾವರಶ್ರೀರಾಜಿ ಜ್ಯುವೆಲರಿಸಂಕೇಶ್ ಸುರಾನಸಪ್ತೋಷಿವಿತ್ರಾಗ್ ಜ್ಯುವೆರ‍್ಸ್ಟ್ರೈ ಡೈಯಾವಂಡರ್ ಡೈಮೆಂಡ್ಸ್ಇಮ್ಮಡಿ ಸಿಲ್ವರ್ಐರಾ ಬೈ ನವರತನ್ರೂಪಂ ಸಿಲ್ವರ್ಸಾಂಚೀಸ್ಎಸ್ಮಾ ಸಿಲ್ವರ್ಸ್ಟೆöÊಲ್ ಔರಾಮದನ್ ಜೆಮ್ಸ್ಪ್ಯಾ಼ಷನ್ ಜ್ಯುವೆಲರಿಅರಹಮ್(ಕೋಲ್ಕತ)ಔರಾ ಬೈ ಸುರಾನಶ್ರೀ ಪಾರಾಮನಿಶ್ರೀಹರಿ ಡೈಯಾಜೆಮ್ಶ್ರೀಯಾನ್ಸ್ಸ್(ನವದೆಹಲಿ)ಸುವರ್ಣರಾಜ್,(ಮುಂಬೈ)ಸೋನಾ(ಸೂರತ್)ಸುನಿಲ್ ಜ್ಯುವೆರ‍್ಸ್,  ಆಂಭೀಷನ್ಸ್ ಜ್ಯುವೆಲರಿವೈಭವ್ ದಡ್ಡಬನೇಥಿ ಎಕ್ಸ್ಪೋರ್ಟ್ಸ(ಜೈಪುರ್)ಡಿವೈನ್ ಜ್ಯುವೆಲ್ಸ್ಪೂರ್ಣಿಮ ಜ್ಯುವೆಲರಿಓರಾ ಜ್ಯುವೆಲ್ಸ್(ಹೈದರಬಾದ್) ಸ್ರಸ್ಠನಿತ್ಯಾಸ್(ವಿಶಾಖಪಟ್ಟಣಂ)ಬಾಲಾಜಿ.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";