ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 8 ರಿಂದ 14ರ ವರೆಗೆ ಹಮ್ಮಿಕೊಂಡಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳವರ 354ನೇ ಆರಾಧನಾ ಸಪ್ತರಾತ್ರೋತ್ಸವದ ಸಮಾರೋಪ ಸಮಾರಂಭವು ಆಗಸ್ಟ್ 14ರಂದು ಸಂಪನ್ನಗೊಂಡಿತು.
ಆರಾಧನಾ ಪ್ರಾರಂಭದ ಮುನ್ನ ಮೂರು ದಿನಗಳ ಕಾಲ “ಶ್ರೀಮದ್ ರಾಮಾಯಣ” ಪ್ರವಚನ ನಡೆಸಿಕೊಟ್ಟ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು ಆಗಸ್ಟ್ 8ರಂದು ಆರಾಧನಾ ಸಪ್ತರಾತ್ರೋತ್ಸವದ ಉದ್ಘಾಟನೆಯನ್ನು ಮಾಡಿದರು.
ಆರಾಧನೆ ಸಮಯದಲ್ಲಿ ಜರುಗಿದ ಕಾರ್ಯಕ್ರಮಗಳು : ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಉತ್ತರಾರಾಧನೆಯಂದು ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗಸ್ಟ್ 8 ರಿಂದ 14ರ ವರೆಗೆ ಕ್ರಮವಾಗಿ : ಶ್ರೀ ಜಯತೀರ್ಥ ತಾಸಗಾಂವ್ ಮತ್ತು ಸಂಗಡಿಗರಿಂದ “ದಾಸವಾಣಿ”, ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ವಾದನ”, ಶ್ರೀಮತಿ ದೀಪಾ ಕಾಸರವಳ್ಳಿ ಮತ್ತು ಸಂಗಡಿಗರಿಂದ “ದಾಸ ತರಂಗಿಣಿ”, ಶ್ರೀಮತಿ ರಮಾಮಣಿ ಗುರುಪ್ರಸಾದ್ ಮತ್ತು ಸಂಗಡಿಗರಿಂದ “ದಾಸ ಝೇಂಕಾರ”, ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ “ದಾಸಲಹರಿ” ಹಾಗೂ ಆಗಸ್ಟ್ 14ರಂದು ಪ್ರಭಾತ್ ಆರ್ಟ್ ಇಂಟರ್ನ್ಯಾಷನಲ್ ಶ್ರೀಮತಿ ಶಕುಂತಲಾ ರಾಘವೇಂದ್ರ ಪ್ರಭಾತ್ ಇವರ ನಿರ್ದೇಶನದಲ್ಲಿ “ಭಕ್ತಿ” ಯೆಂಬ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟ ವಿದ್ಯಾರ್ಥಿಗಳು : ಶೀತಲ್, ಶಿಲ್ಪಾ, ಸುರಭಿ, ಕಾಶಿಕಾ, ಮಹತಿ, ಸಂಹಿತಾ, ಹರ್ಷಲಾ, ಐಶ್ವರ್ಯ , ಮೃದುಲಾ, ದೀಕ್ಷಾ, ಅನನ್ಯಾ, ಪಾಯಲ್, ತನ್ಯಾ, ಸುನಿಷ್ಟಿ,, ಸ್ವಪ್ನಂತಿ, ವೇಧಿಕಾ, ಪ್ರತ್ಯುಷಾ, ಶಾಶ್ವತಿ, ಶರಣ್ಯ, ಸಮನ್ವಿತಾ, ಬೃಹತಿ, ಮಾನ್ಯಾ, ಶ್ರೀಯಾ, ಸನಿಹಾ, ವೈಷ್ಣವಿ, ಸುಪರ್ಣ ಮತ್ತು ಸಿರಿ ಇವರುಗಳ ವಿಶೇಷ ನೃತ್ಯದೊಂದಿಗೆ ಸಪ್ತಾಹ ಸಮಾರಂಭವು ಸಂಪನ್ನಗೊಂಡಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.