ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ನಾಯಕರಾದ ಬಾಲಗಂಗಾಧರ ತಿಲಕ್, ಗಣೇಶ ಚತುರ್ಥಿಯನ್ನು ಖಾಸಗಿ ಧಾರ್ಮಿಕ ಆಚರಣೆಯಿಂದ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರಬಲ ಸಾರ್ವಜನಿಕ ಚಳುವಳಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
19 ನೇ ಶತಮಾನದ ಉತ್ತರಾರ್ಧದಲ್ಲಿ ಅವರ ನವೀನ ವಿಧಾನವು ಹಬ್ಬದ ಮಹತ್ವವನ್ನು ಹೆಚ್ಚಿಸಿದ್ದಲ್ಲದೆ, ರಾಷ್ಟ್ರೀಯತಾವಾದಿ ಭಾವನೆಯನ್ನು ಬೆಳೆಸಲು ಮತ್ತು ಭಾರತೀಯರನ್ನು ಒಗ್ಗೂಡಿಸಲು ಒಂದು ವೇದಿಕೆಯಾಗಿ ಬಳಸಿಕೊಂಡಿತು. ಗಣೇಶ ಹಬ್ಬದಲ್ಲಿ ಹೂವಿನ ವ್ಯಾಪಾರ, ಗಣೇಶ ಮೂರ್ತಿ ತಯಾರಿಕೆ ಮಾರಾಟಗಾರರಿಗೆ ಹಾಗೂ ಹಣ್ಣುಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತದೆ.
ಸಾರ್ವಜನಿಕರ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವವರು ಸಂಗೀತ ಸಂಜೆ, ತಮಟೆ ವಾದ್ಯ, ಪ್ರವಚನ ಹಾಗೂ ದೀಪಾಲಂಕಾರ ಮಾಡುವವರಿಗೆ ಪ್ರೋತ್ಸಹ ಸಿಗಲಿದೆ. ಗಣೇಶ ಹಬ್ಬ ಹಿಂದೂ ಜನರು ಸಂಘಟನೆ ಮಾಡಲು ಉತ್ತಮ ವೇದಿಕೆಯಾಗಿದೆ. ಬೆಂಗಳೂರಿನಲ್ಲಿ ಗಣೇಶಮೂರ್ತಿಗಳ ಭರ್ಜರಿ ಮಾರಾಟವಾಗುತ್ತಿದೆ.
-ಶೇಷ ನಾರಾಯಣ್