Live Stream

[ytplayer id=’22727′]

| Latest Version 8.0.1 |

State News

ಬಂಜಾರ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳ ಸಿನಿಮಾಗಳ ಉತ್ಸವಕ್ಕೆ ಕ್ರಮಕೈಗೊಳ್ಳಬೇಕು 

ಬಂಜಾರ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳ ಸಿನಿಮಾಗಳ ಉತ್ಸವಕ್ಕೆ ಕ್ರಮಕೈಗೊಳ್ಳಬೇಕು 

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ:13.08.2025 ರಂದು ಸಂಜೆ 05.00 ಗಂಟೆಗೆ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್‌ ಮಳಾವ್‌ -06, ಸಜ್ಜನರ ಸಲ್ಲಾಪ -06, ಮೀನಾರೋ ಪಾಮಣೋ-ತಿಂಗಳ ಅತಿಥಿ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ಉದ್ಘಾಟನೆ ಮಾಡಿದರು, ಶ್ರೀ ಕೃಷ್ಣೇಗೌಡ  ಅಧ್ಯಕ್ಷರು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಶ್ರೀ ಪಿ. ಉಮೇಶ್‌ ನಾಯ್ಕ್‌  ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರು ಹಾಗೂ ನಿರ್ಮಾಪಕರು, ಶ್ರೀ ಹೆಮಂತ್‌ ಕುಮಾರ್‌ ಭಾರತೀಯ ಬಂಜಾರ  ಪ್ರಥಮ ಚಲನಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು, ಮುಖ್ಯ ಅತಿಥಿಗಳಾಗಿ ಶ್ರೀ ರವಿ ಲಮಾಣಿ

ಬಂಜಾರ  ಮೌನಾಭಿನಯ ಕಲಾವಿದರು, ಶ್ರೀ ಕುಮಾರ ನಾಯ್ಕ್‌, ಬಂಜಾರ ಚಲನಚಿತ್ರ ನಿರ್ದೇಶಕರು,ದಾವಣಗೆರೆ, ಬಂಜಾರ ಅಕಾಡೆಮಿ ಸದಸ್ಯರಾದ ಶ್ರೀ ಆರ್.ಬಿ. ನಾಯಕ್‌,  ಡಾ. ಉತ್ತಮ್‌ ಕೆ.ಹೆಚ್‌ ಉಪಸ್ಥಿತರಿದ್ದರು ಹಾಗೂ ಬಂಜಾರ ಸಮುದಾಯದ ಎಲ್ಲಾ ತಾಂತ್ರಿಕ ವರ್ಗ, ನಿರ್ದೇಶಕರು, ಕಥೆಗಾರರು, ನಟರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ “ಕಳತಾವೂರ್ ಮಳಾವ್ -೦೬”(ಸಜ್ಜನರ ಸಲ್ಲಾಪ- ಬಂಜಾರ ಸಿನಿಮಾ ವಿಶೇಷ) ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಅವರು

  • ರಾಜ್ಯ ಸರ್ಕಾರವು ಬಂಜಾರ ಸಂಸ್ಕೃತಿ ಮತ್ತು ಭಾಷೆಯ ಸಿನಿಮಾಗಳಿಗೆ ಪ್ರತ್ಯೇಕವಾಗಿ ಸಹಾಯಧನ ನೀಡಲು ಮುಂದಾಗಬೇಕು.
  • ಬಂಜಾರ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳ ಸಿನಿಮಾಗಳ ಉತ್ಸವಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬಂಜಾರ ಭಾಷೆಯ ಚಲನಚಿತ್ರ ಕಲಾವಿದರಿಗಾಗಿ ರಾಜ್ಯ ಸರ್ಕಾರವು ಒಂದು ಪ್ರಶಸ್ತಿಯನ್ನು ಸ್ಥಾಪಿಸಿ ಬಂಜಾರ ಸಿನಿಮಾ ಕಲಾವಿದರನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಬಂಜಾರ ಸಿನಿಮಾ ತಯಾರಿಯ ಕಥೆ, ನಿರ್ದೇಶನ, ಸಂಕಲನ, ವಸ್ತ್ರ ವಿನ್ಯಾಸ, ಪ್ರಸಾದನ, ನಟನೆಗೆ ಬಂಜಾರ ಅಕಾಡೆಮಿ ಮುಂದಿನ ದಿನಗಳಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದೆ. ಪ್ರಥಮ ಭಾರತಿಯ ಬಂಜಾರ ಸಿನಿಮಾ ನಿರ್ಮಿಸಿರುವ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಆಹ್ವಾನಿಸಿ ತಿಂಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದು ಯುವಜನತೆಗೆ ಸಿನಿಮಾ ಕ್ಷೇತ್ರಗಳಿಗೆ ಹೊಸದಾಗಿ ಬರುವವರಿಗೆ ಈ ಸಾಧಕರ ಅನುಭವ ಒಂದು ಪ್ರೇರಣೆ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿದ್ದೇವೆ.

ಸಿನಿಮಾ ಕ್ಷೇತ್ರವನ್ನು ಬಂಜಾರ ಸಮುದಾಯವು ಸರಿಯಾಗಿ ಬಳಸಿಕೊಳ್ಳದಿದ್ದರೆ ಸಮುದಾಯಕ್ಕೆ ನಷ್ಟ. ಬಂಜಾರ ಅಕಾಡೆಮಿ ಕೆಲಸವೆಂದರೆ ಸಮುದಾಯದ ಕಲಾವಿದರನ್ನು, ಸಾಹಿತಿಗಳು, ಭಾಷಾತಜ್ಞರನ್ನು ಗುರುತಿಸಿ ಪ್ರೋತ್ಸಾಹಿಸುವುದು. ಸಿನಿಮಾವು ಪ್ರಚಲಿತ ಸಮಸ್ಯೆಗಳ ಬಗ್ಗೆ ಹಾಗೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಹಾಗೂ ಬಂಜಾರ ಸಂಸ್ಕೃತಿ, ಕೌಶಲ್ಯವನ್ನು ಹಾಗೂ ಭಾಷೆಯನ್ನು ಚರ್ಚಿಸಲು ಒಳ್ಳೆಯ ಮಾಧ್ಯಮವಾಗಿದೆ, ಹಾಗಾಗಿ ಸಾಮಾಜಿಕ ಬದ್ಧತೆಯಿಟ್ಟುಕೊಂಡು ಸಿನಿಮಾ ಮಾಡಬೇಕಾದ ಅಗತ್ಯವಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಅವರು ಬಂಜಾರ ಕಥೆ ಆಧರಿಸಿದ ಸಿನಿಮಾ ʻಲಚ್ಚಿʼ 22 ದೇಶಗಳಿಗೆ ತಲುಪಿರುವುದು ಬಂಜಾರ ಸಮುದಾಯಕ್ಕೆ ಕೊಟ್ಟ ದೊಡ್ಡ ಹೆಗ್ಗಳಿಕೆಯಾಗಿದೆ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಸಿನಿಮಾದ ಪ್ರಭಾವ:

ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಲ್ಲಿ ಮೊದಲ ಸ್ಥಾನದಲ್ಲಿ ರಂಗಭೂಮಿ ಎರಡನೇ ಸ್ಥಾನದಲ್ಲಿ ಚಲನಚಿತ್ರರಂಗ ಇದೆ. ರಂಗಭೂಮಿಗೆ ಸೀಮಿತ ಕ್ಷೇತ್ರವಿದ್ದರೆ ಚಲನಚಿತ್ರರಂಗಕ್ಕೆ ವಿಶಾಲ ಕ್ಯಾನ್‌ ವ್ಯಾಸ್‌ ಹಾಗೂ ಏಕಕಾಲಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತದೆ. ಚಲನಚಿತ್ರಗಳು ನಮ್ಮ ಮನಸ್ಸಿನಲ್ಲಿ ಆಳವಾದ ಭಾವನೆಗಳನ್ನು ಹುಟ್ಟಿಸುತ್ತವೆ. ಹಾಸ್ಯ, ದುಃಖ, ಪ್ರೇಮ, ಸ್ವಾತಂತ್ರ್ಯ, ಕ್ರಾಂತಿ, ಅರಿವು– ಸುಧಾರಣೆ ಇವೆಲ್ಲವನ್ನೂ ಚಿತ್ರರಂಗ ಸುಲಭವಾಗಿ ತಲುಪಿಸಬಲ್ಲದು. ನಿಜವಾದ ಕಲೆಯು ಬದಲಾವಣೆಗೆ ಪ್ರೇರಣೆ ನೀಡುತ್ತದೆ.

ಚಿತ್ರರಂಗದ ಅರಂಭ:

ವಿಶ್ವದ ಮೊದಲ ಚಲನಚಿತ್ರವು 1888ರಲ್ಲಿ ಲೂಯಿಸ್ ಲೆ ಪ್ರಿನ್ಸ್ ಎಂಬವರಿಂದ ನಿರ್ಮಿತವಾದ Roundhay Garden Scene ಎಂಬ ಮೌನಚಿತ್ರ. ಬಳಿಕ 1895 ರಲ್ಲಿ ಲುಮಿಯರ್ ಸಹೋದರರು ಪ್ಯಾರಿಸಿನಲ್ಲಿ ಸಾರ್ವಜನಿಕ ಪ್ರದರ್ಶನ ನಡೆಸಿದ Workers Leaving the Factory ಚಿತ್ರ, ವಿಶ್ವದ ಮೊದಲ “ಪಬ್ಲಿಕ್ ಫಿಲಂ ಶೋ” ಆಗಿ ಖ್ಯಾತಿಯಾಯಿತು.

 ಭಾರತೀಯ ಚಿತ್ರರಂಗ:

ಭಾರತದಲ್ಲಿ ಚಲನಚಿತ್ರಗಳ ಯಾನವು 1913ರಲ್ಲಿ ಆರಂಭವಾಯಿತು. ಅದೇ ವರ್ಷ ದಾದಾಸಾಹೇಬ ಫಾಲ್ಕೆ ಅವರು ರಾಜಾ ಹರಿಶ್ಚಂದ್ರ ಎಂಬ ಮೌನ ಚಿತ್ರವನ್ನು ನಿರ್ಮಿಸಿ ಭಾರತೀಯ ಸಿನಿಮಾರಂಗಕ್ಕೆ ಮೂಲ ಹಾಕಿದರು. ಇಂದು ಭಾರತೀಯ ಚಿತ್ರರಂಗವು ವಿಶ್ವದ ಅತಿದೊಡ್ಡ ಚಿತ್ರ ನಿರ್ಮಾಣ ಕೇಂದ್ರವಾಗಿದೆ.

ಕನ್ನಡ ಚಿತ್ರರಂಗ:

ನಮ್ಮ ಕನ್ನಡ ಚಲನಚಿತ್ರರಂಗವು ತನ್ನ ಆರಂಭವನ್ನು 1934ರಲ್ಲಿ ಸತಿ ಸುಲೋಚನಾ ಎಂಬ ಮೊದಲ ಟಾಕಿ ಚಿತ್ರದ ಮೂಲಕ ಕಂಡಿತು. ಆಮೇಲೆ ರಾಜ್‌ಕುಮಾರ್, ಪುತ್ತಣ್ಣ ಕಣಗಾಲ್, ಗಿರಿಷ್ ಕಾಸರವಳ್ಳಿ, ಯಶ್, ರಿಷಬ್ ಶೆಟ್ಟಿ ಇಂತಹ ಕಲಾವಿದರು ಮತ್ತು ನಿರ್ದೇಶಕರು ನಮ್ಮ ಸಿನಿಮಾ ಲೋಕವನ್ನು ಸಮೃದ್ಧಗೊಳಿಸಿದ್ದಾರೆ.

ಇಂದು ನಾವು ಕಾಂತಾರಕೆಜಿಎಫ್ಗಾಂಧಿ ಟಾಕೀಸ್ ಮುಂತಾದ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿದ್ದೇವೆ.

ಬಂಜಾರ ಚಿತ್ರರಂಗದ ಆದಿ ಹೆಜ್ಜೆಗಳು:

            ನಮ್ಮ ಬಂಜಾರ ಸಮುದಾಯದ ಗಾನ, ನೃತ್ಯ, ಪಾರಂಪರಿಕ ವೇಷಭೂಷಣ, ಇತಿಹಾಸ ಮತ್ತು ಪರಂಪರೆಯ ಬದುಕು ಇವುಗಳ ಮೂಲಕ ವಿಭಿನ್ನತೆಯಿಂದ ಕಂಗೊಳಿಸುತ್ತಿದೆ. ಆದರೆ ಇಷ್ಟು ಪೈಪೋಟಿಯ ಜಗತ್ತಿನಲ್ಲಿ ಜನ ಸಾಮಾನ್ಯರಿಗೆ ತಲುಪಬೇಕಾದ ಅಗ್ಯವಿದೆ.

“Banjara: The Truck Driver” (1996), ಪಂಜಾಬಿ ಭಾಷೆಯಲ್ಲಿದ್ದರೂ, ಅದು ಬಂಜಾರ ಸಮುದಾಯದ ಜೀವನಶೈಲಿ, ಕುಟುಂಬ ಮೌಲ್ಯಗಳನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನವಾಗಿತ್ತು. ಗೂಗಲ್‌ ನಲ್ಲಿ ಇದೇ ಮೊದಲು ಎಂದಿದೆ. ಆದರೆ, ಬಂಜಾರ ಭಾಷೆಯಲ್ಲಿ ಕರ್ನಾಟಕದ ʻಝಾಡಿರೋ ಪಂಖೇರುʼ ಚಲನಚಿತ್ರವು ನನಗೆ ತಿಳಿದಂತೆ ನಾನು ಅಭಿನಯಿಸಿರುವ ಇದು ಭಾರತದ ಮೊದಲ ಬಂಜಾರ ಚಲನಚಿತ್ರವಾಗಿದೆ. ನಿರ್ದೇಶಕ-ನಟ ಶ್ರೀ ಸುನಿಲ್‌ ಕುಮಾರ್‌ ಆಗಿದ್ದಾರೆ. ಚಲನಚಿತ್ರ ಅಕಾಡೆಮಿಯು ಆರಂಭವಾದಾಗ ನಾಗಾಭರಣ ಅವರು ನನ್ನನ್ನು ಒಳಗೊಂಡಂತೆ ವಾರ್ತಾ ಇಲಾಖೆ ಸೇರಿದಂತೆ ಕೆಲವರನ್ನು ಕೈವಾರದಲ್ಲಿ ಸೇರಿಸಿ ಅಕಾಡೆಮಿಗೆ ಬೈಲಾ ಮಾಡಿಸಿದರು. ಚಲನಚಿತ್ರ ಶಿಕ್ಷಣಕ್ಕೆ ಅಧ್ಯತೆ ಕೊಟ್ಟು ನಾವು ಬೈಲಾ ಮಾಡಿ ನಾನು ರಾಮನಗರ ಜಿಲ್ಲೆಯಿಂದ ಮೊದಲ ಸದಸ್ಯನ್ನಾಗಿ ಕೆಲಸ ಮಾಡಿದ ಅನುಭವವಿದೆ.

ಬಂಜಾರ ಚಲನಚಿತ್ರ ಎಂದಾಗ ಬೇರೆಬೇರೆಭಾಷೆಗಳಲ್ಲಿ ಬಂಜಾರ ಕಥೆ, ಕಾದಂಬರಿ, ಬಂಜಾರ ಉಡುಗೆ ತೊಡುಗೆ, ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಇತ್ತೀಚಿಗೆ ಬಂಜಾರರು ಚಲನಚಿತ್ರದ ಕಡೆಗೆ ವಾಲಿದ್ದಾರೆ. ಗಾಯಕಿ ಮಂಗಲಿಬಾಯಿ ಬಂಜಾರ ಭಾಷೆಯಿಂದ ಗುರುತಿಸಿಕೊಂಡ ಕಲಾವಿದೆ. ನಾನು 195 ಕ್ಕೂ ಹೆಚ್ಚಿನ ದಾರವಾಹಿನಿಗಳಲ್ಲಿ 70ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಹೆಸರಾಂತ ನಾಯಕ ನಟರೊಂದಿಗೆ ನಟಿಸಿದ್ದೇನೆ. 65ಕ್ಕೂ ಹೆಚ್ಚಿನ ಸಾಕ್ಷ್ಯಾಚಿತ್ರಗಳ ನಿರ್ದೇಶನ ಮಾಡಿದ್ದೇನೆ. ನಾನು ಕೊಟ್ಟ ಕಥೆಗಳಿಗೆ ರಾಷ್ಟ್ರಮಟ್ಟದ ಪರಿಗಣನೆ ಸಿಕ್ಕಿದೆ. ಅದರೂ ಈ ಕ್ಷೇತ್ರದಲ್ಲಿ ಸಾಧಿಸುವುದು ಹೆಚ್ಚಿದೆ.

ಈ ಸಂದರ್ಭದಲ್ಲಿ ಬಂಜಾರ ಚಲನಚಿತ್ರ ನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕುಮಾರ್ ರಾಠೋಡ್ ಮಾತನಾಡಿ, ಬಂಜಾರ ಸಮುದಾಯದಲ್ಲಿ ಹುಟ್ಟಿರುವ ನನಗೆ ಈ ಸಂಸ್ಕೃತಿಯನ್ನು ಇತರರಿಗೂ ತಿಳಿಸಬೇಕೆಂಬ ಬಯಕೆ ಚಿಕ್ಕಂದಿನಲ್ಲಿಯೇ ಚಿಗುರಿತು, ಆದ್ದರಿಂದ ಬಂಜಾರರ ಆಚಾರ-ವಿಚಾರಗಳನ್ನು ಒಳಗೊಂಡು ಕಸೂತಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂತ್ತು. ಇದಕ್ಕೆ ಹಲವು ತರಹದಲ್ಲಿ ಸಹಕರಿಸಿದವರು ಡಾ.ಎ.ಆರ್.ಗೋವಿಂದಸ್ವಾಮಿ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ. ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಚಿಕ್ಕಂದಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಪರಿಣಾಮವಾಗಿ ಸಾಕ್ಷ್ಯಚಿತ್ರ, ಕಿರುಚಿತ್ರ, ಚಲನಚಿತ್ರ ನಿರ್ದೇಶನದತ್ತ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಜಾರ ನೆಲದ ಸೂಗಡು ಮತ್ತು ಸಂಸ್ಕೃತಿ ಬಂಜಾರ ಸಿನಿಮಾಗಳಲ್ಲಿ ತಂದರೆ ಹೆಚ್ಚಿನ ಜನ ವೀಕ್ಷಿಸುತ್ತಾರೆ ಎಂದರು. ಡಾ. ಎ.ಆರ್.‌ ಗೋವಿಂದಸ್ವಾಮಿ ಮತ್ತು ನಾನು ರಂಗಭೂಮಿಯನ್ನು ಜೊತೆ ಜೊತೆಯಲ್ಲಿ ರವೀಂದ್ರ ಕಲಾಕ್ಷೇತ್ರದಿಂದ ಆರಂಭ ಮಾಡಿ ಸಿನಿಮಾ ಕ್ಷೇತ್ರದಲ್ಲಿ ಜೋತೆಯಲ್ಲಿ ಇದ್ದವರು. ಬಂಜಾರ ಸಂಸ್ಕೃತಿಯಲ್ಲಿರುವಂತಹ ವಿಶಿಷ್ಟ ಕಸೂತಿ, ವಸ್ತ್ರ, ಹಾಡುಗಾರಿಕೆಯನ್ನ, ಜಾನಪದ ದಾಟಿಗಳನ್ನು ಜನರಿಗೆ  ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗಲಿಲ್ಲ ಎಂದರು.

ಭಾರತೀಯ ಬಂಜಾರ ಪ್ರಥಮ ಚಲನಚಿತ್ರ ನಿರ್ದೇಶಕ ಹೇಮಂತ್‌ಕುಮಾರ್ ಮಾತನಾಡಿ, ನಾನು ಭಾರತದ ಮೊದಲ ಬಂಜಾರ ಸಿನಿಮಾ ಮಾಡಿದೆ ಅದು ನನ್ನ ತಂದೆ  ಮಾಜಿ ಸಚಿವ ಹೆಗ್ಗಪ್ಪ ಲಮಾಣಿ ಅವರ ಕಥೆ ಅದರಿಸಿದ್ದು ʻಝಾಡಿರೋ ಪಂಖೇರುʼ (ಕಾಡಿನ ಹಕ್ಕಿ) ಇದರಲ್ಲೂ ಡಾ.ಎ.ಆರ್.‌ ಗೋವಿಂದಸ್ವಾಮಿ, ಡಾ. ಬಿ.ಟಿ. ಲಲಿತನಾಯಕ್‌, ಮುಖ್ಯಮಂತ್ರಿ ಚಂದ್ರು ಅಭಿನಯಿಸಿದರು ನನ್ನನ್ನು ಮೊದಲಿಗೆ ಬಂಜಾರ ವೇದಿಕೆಗೆ ಕರೆದು ಗುರುತಿಸಿದಕ್ಕೆ ಅಕಾಡೆಮಿಗೆ ಧನ್ಯವಾದ ಎಂದರು.

ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರು ಹಾಗೂ ನಿರ್ಮಾಪಕರು ಶ್ರೀ ಪಿ. ಉಮೇಶ್‌ ನಾಯ್ಕ್‌  ಅವರು ಮಾತನಾಡಿ, ನಾನು ನಟ ಮಾನು ಅವರ ಪ್ರೇರಣೆಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದೆ “ತಾಂಡೇರ್‌ ತಾರಾ, ಕೊಂಚವರಂ” ಮಾಡಿದೆ ಕೊಂಚಾವರಂಗೆ ರಾಜ್ಯ ಪ್ರಶಸ್ತಿ ಬಂದಿದೆ. ಇದಕ್ಕೆ ಪ್ರೇರಣೆ ಡಾ.ಎ.ಆರ್.ಗೋವಿಂದಸ್ವಾಮಿ ಅವರು ಬರೆದ ಮ್ಕಕಳ ಮಾರಾಟದ ನಾಟಕ ಹಾಗೂ ನಾಗಲಕ್ಷ್ಮಿಯವರ ಕಥೆ ಪ್ರೇರಣೆಯಿಂದ ಪ್ರಶಸ್ತಿ ಬಂತು ಎಂದರು.

ಖ್ಯಾತ ಜಾನಪದ ಗಾಯಕ ಆರ್.ಬಿ.ನಾಯಕ್ ಮಾತನಾಡಿ, ಬಂಜಾರ ಸಮುದಾಯದಲ್ಲಿ ಹುಟ್ಟಿರುವ ನನಗೆ ಈ ಸಂಸ್ಕೃತಿಯ ವೈಶಿಷ್ಟ್ಯತೆಗಳನ್ನು ಹಾಡುತ್ತಾ ಸಾಗಿದ್ದು ಅತ್ಯುತ್ತಮ ಜಾನಪದ ಗಾಯಕನ್ನಾಗಿಸಿತು. ಬಂಜಾರ ಮತ್ತು ಕನ್ನಡ ಭಾಷೆಯಲ್ಲಿ ಇನ್ನಷ್ಟು ಜಾನಪದ ಹಾಡುಗಳನ್ನು ಸ್ವತಃ ರಚಿಸಿ ಹಾಡಲು ಮುಂದಾಗುವೆ ಎಂದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";