ಮಂಗಳೂರು ತಾಲ್ಲೂಕಿನ ಕುಡುಪುವಿನಲ್ಲಿ ಆದಷ್ಟು ಬೇಗ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು ತಾಲೂಕಿನ ಕುಡುಪುನಲ್ಲಿ 2×20ಎಂ.ವಿ.ಎ., 110/11ಕೆವಿ ವಿದ್ಯುತ್ ಉಪಕೇಂದ್ರದ ಸ್ಥಾಪನೆ ಕಾಮಗಾರಿಗೆ ದಿನಾಂಕ 29.08.2022 ರಂದು ನಡೆದ 89ನೇ ಕವಿಪ್ರನಿನಿಯ ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ. ವಿದ್ಯುತ್ ಉಪಕೇಂದ್ರದ ಸ್ಥಾಪನೆಗೆ ಕುಡುಪು ಜಮೀನು ಸರ್ಕಾರಿ ಗ್ರಾಮದಲ್ಲಿ ಲಭ್ಯವಿಲ್ಲದ್ದರಿಂದ, ಉಪಕೇಂದ್ರದ ನಿರ್ಮಾಣಕ್ಕೆ ಸೂಕ್ತ ಖಾಸಗಿ ಸ್ಥಳವನ್ನು ಗುರುತಿಸಿ ಹಾಗೂ ಅದರ ತಾಂತ್ರಿಕ ಸೂಕ್ತತೆಯನ್ನು ಪರಿಶೀಲಿಸಿ ಸ್ಥಳ ಅಂತಿಮಗೊಳಿಸಲಾಗಿರುತ್ತದೆ.
ಕುಡುವು ಗ್ರಾಮದ ಸರ್ವೆ ನಂ. 16/17, 64/6, 63/3, 133/3A2 & 133/5 ರಲ್ಲಿ 2.58 ಎಕರೆ ಖಾಸಗಿ ಜಮೀನು ಖರೀದಿಗೆ ಜಿಲ್ಲಾಧಿಕಾರಿಯವರು ದಿನಾಂಕ 15.02.2023 ರಂದು ಭೂಮಿಯ ಸೆಂಟ್ 1 ಕ್ಕೆ ರೂ.3,79,705 ರಂತೆ ದರ ನಿಗದಿಪಡಿಸಿರುತ್ತಾರೆ. ಈ ದರಕ್ಕಿಂತ ಕಡಿಮೆ ದರದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಸೂಕ್ತ ಖಾಸಗಿ ಜಮೀನಿನ ಲಭ್ಯತೆ ಬಗ್ಗೆ ಪರಿಶೀಲಿಸಲು ದಿನಾಂಕ 11.08.2023 ರ ಉದಯವಾಣಿ ಮತ್ತು ಹೊಸದಿಗಂತ ಕನ್ನಡ ದಿನಪತ್ರಿಕೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುತ್ತದೆ. ಆದರೆ, ಜಿಲ್ಲಾಧಿಕಾರಿಯವರು ನಿಗಧಿಪಡಿಸಿರುವ ದರಕ್ಕೆ ಯಾವುದೇ ಖಾಸಗಿ ಜಮೀನು ಲಭ್ಯವಿಲ್ಲವಾದ್ದರಿಂದ ಪ್ರಸ್ತಾವನೆಯಲ್ಲಿರುವ ಕುಡುಪು ಗ್ರಾಮದ ಖಾಸಗಿ ಜಮೀನಿನಲ್ಲಿಯೇ 110/11ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ನಿಗಮ ಕಾರ್ಯಾಲಯಕ್ಕೆ ದಿನಾಂಕ 05-10-2023 ರಂದು ಸಲ್ಲಿಸಲಾಗಿರುತ್ತದೆ
ತದನಂತರ ನಿರ್ದೇಶಕರು (ತಾಂತ್ರಿಕ), ಬೆಂಗಳೂರು ರವರು ಮುಖ್ಯ ಇಂಜಿನಿಯರ್(ವಿ), ಪ್ರಸರಣ ವಲಯ, ಹಾಸನ ಹಾಗೂ ಅಧೀಕ್ಷಕ ಇಂಜಿನಿಯರ್(ವಿ) ಪ್ರಸರಣ ವೃತ್ರ, ಮಂಗಳೂರು ಇವರೊಂದಿಗೆ ದಿನಾಂಕ 09.02.2024 ರಂದು ಪ್ರಸ್ತಾವಿತ ಜಮೀನಿಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ನಿಗಮ ಕಾರ್ಯಾಲಯದಿಂದ ಕೆಲವೊಂದು (ಪರ್ಯಾಯ ಜಮೀನು ಲಭ್ಯವಿಲ್ಲದಿರುವ ಬಗ್ಗೆ ನಿಗದಿಗೊಳಿಸಿದ ದರವನ್ನು ಕಡಿಮೆಗೊಳಿಸಲು, ವಿನ್ಯಾಸ ನಕ್ಷೆ ಮತ್ತು ಸಂಪರ್ಕ ರಸ್ತೆಯನ್ನು ನಿಗಮದ ಸ್ವಾಧೀನ ಪಡೆಯಲು ಕ್ರಮ ಇತ್ಯಾದಿ) ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಮರು ಸಲ್ಲಿಸಲು ವಲಯ ಕಚೇರಿಗೆ ದಿನಾಂಕ. 13.05.2024 ರಂದು ತಿಳಿಸಲಾಗಿರುತ್ತದೆ.
ನಿಗಮದ ಸೂಚನೆಯಂತೆ ವಿವರಣೆಗಳೊಂದಿಗೆ ಮುಖ್ಯ ಇಂಜಿನಿಯರ್(ವಿ) ಹಾಸನರವರಿಂದ 23.08.2024 ರಂದು ನಿಗಮ ಕಾರ್ಯಾಲಯಕ್ಕೆ ಪ್ರಸ್ತಾವನೆಯು ಸ್ವೀಕೃತಗೊಂಡಿರುತ್ತದೆ. ದಿನಾಂಕ 26.12.2024 ದಕ್ಷಿಣ ಕನ್ನಡ ರಂದು ಜಿಲ್ಲಾಧಿಕಾರಿಯವರು ದಾಖಲಾತಿಗಳನ್ನು ಕವಿಪ್ರನಿನಿಯ ನಿಗಮ ಕಾರ್ಯಾಲಯಕ್ಕೆ ಸಲ್ಲಿಸಿರುತ್ತಾರೆ.
ಮುಖ್ಯ ಇಂಜಿನಿಯರ್(ವಿ) ಪ್ರಸರಣ ವಲಯ, ಹಾಸನ ರವರು ತಹಶೀಲ್ದಾರರು ನೀಡಿರುವ ವರದಿ, ಖರೀದಿ ಒಡಂಬಡಿಕೆ, ರಸ್ತೆಯ ಅಗಲ ಮತ್ತು ಮುಖ್ಯ ರಸ್ತೆಗೆ ಇರುವ ದೂರಗಳನ್ನೊಳಗೊಂಡ ನಕ್ಷೆ ಇತ್ಯಾದಿ ವಿವರಗಳ ವರದಿಯನ್ನೊಳಗೊಂಡಂತೆ, ಭೂಸ್ವಾಧೀನ ಪ್ರಸ್ತಾವನೆಯು ನಿಗಮ ಕಾರ್ಯಾಲಕ್ಕೆ ಅನುಮೋದನೆಗಾಗಿ. ದಿನಾಂಕ: 14-03-2025 ರಂದು ಸ್ವೀಕತಗೊಂಡಿರುತ್ತದೆ
ನಿಗಮ ಕಾರ್ಯಾಲಯದ ನಿರ್ದೇಶನದಂತೆ, ಕುಡುಪುವಿನಲ್ಲಿ ಪ್ರಸ್ತಾವಿತ ವಿದ್ಯುತ್ ಕೇಂದ್ರ ಸ್ಥಾಪನೆಗೆ ಗುರುತಿಸಿರುವ ಸ್ಥಳವನ್ನು ದಿನಾಂಕ 20.06.2025 ರಂದು ಸ್ಥಳ ಪರಿಶೀಲನೆ ಮಾಡಲಾಗಿದ್ದು, ಪರಿಶೀಲನಾ ವರದಿಯನ್ವಯ ಕುಡುವುವಿನಲ್ಲಿ 2×10 ಎಂ.ವಿ.ಎ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಸಲುವಾಗಿ ಗುರುತಿಸಲಾದ ಜಾಗದಲ್ಲಿ ಉಪಕೇಂದ್ರ ಸ್ಥಾಪಿಸಬಹುದೆಂದು ಅಭಿಪ್ರಾಯಿಸಲಾಗಿದೆ.
ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಅವರು ಮಂಗಳೂರು ತಾಲೂಕಿನ ಕುಡುಪುವಿನಲ್ಲಿ 110ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುರುತಿಸಿಲಾದ ಜಮೀನಿಗೆ ಸೆಂಟ್ಸ್ ಒಂದಕ್ಕೆ ರೂ.3,79,705/- ರಂತೆ 2.58 ಎಕರೆಗೆ ರೂ. 9,79,63,890 ಗಳನ್ನು ದಿನಾಂಕ:15-02-2023ರ ಪತ್ರದಲ್ಲಿ ದರ ನಿಗಧಿಪಡಿಸಿರುತ್ತಾರೆ.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕು, ಕುಡುವುವಿನಲ್ಲಿ 2×10 ಎಂ.ವಿ.ಎ. 110/11 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಸಲುವಾಗಿ , 16/17, 64/6, 63/3,1 33/1A2 (ಪಿ)2 ಮತ್ತು 133/5 (ಪಿ) ಗಳಲ್ಲಿನ ಒಟ್ಟು ವಿಸ್ತೀರ್ಣ 2.58 ಎಕರೆ ಖಾಸಗಿ ಭೂ ಪರಿವರ್ತಿತ ಜಮೀನಿಗೆ ಜಿಲ್ಲಾಧಿಕಾರಿ, ದಕ್ಷಿಣಕನ್ನಡ ಜಿಲ್ಲೆರವರು ದಿನಾಂಕ 15.02.2023 ರಂದು ನಿಗಧಿಪಡಿಸಿದ ದರದನ್ನಯ ಸದರಿ ಜಮೀನನ್ನು ನಿಗಮದ ಹೆಸರಿಗೆ ನೋಂದಾಯಿಸಲು ತಗಲುವ ಶಾಸನಬದ್ಧ ವೆಚ್ಚ ಭರಿಸಲು ಅನುಮೋದನೆ ಸಂಬಂಧ ಪ್ರಸ್ತಾವನೆಯು ನಿಗಮ ಕಾರ್ಯಾಲಯದಲ್ಲಿ ಪರಿಶೀಲನಾ ಹಂತದಲ್ಲಿರುತ್ತದೆ. ಸದರಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ದಿನಾಂಕ:03.07.2025 ರಂದು ನಡೆದ ಕವಿಪ್ರನಿನಿಯ (ಸೆಸ್ಕ್ ಮತ್ತು ಮೆಸ್ಕಾಂ) 2 ನೇ ತಾಂತ್ರಿಕ ಸಮನ್ವಯ ಸಭೆಯಲ್ಲಿ ಪ್ರಸ್ತಾವಿತ ಕಾಮಗಾರಿಯನ್ನು ಮರು ಅಂಗೀಕರಿಸಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.