Live Stream

[ytplayer id=’22727′]

| Latest Version 8.0.1 |

State News

ಸರ್ಕಾರಿ ಆಸ್ಪತ್ರೆಗಳಲ್ಲಿ ಫೈರ್ ಸೇಪ್ಟಿಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಕ್ರಮ

ಸರ್ಕಾರಿ ಆಸ್ಪತ್ರೆಗಳಲ್ಲಿ ಫೈರ್ ಸೇಪ್ಟಿಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಕ್ರಮ

ಸರ್ಕಾರಿ ಆಸ್ಪತ್ರೆಗಳಲ್ಲಿ ಫೈರ್ ಸೇಪ್ಟಿಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್  ಸದಸ್ಯ  ಡಾ. ಧನಂಜಯ ಸರ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,  ರಾಜ್ಯದಲ್ಲಿ 2161 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 365 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 205 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 147 ತಾಲ್ಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 12 ಜಿಲ್ಲಾ ಆಸ್ಪತ್ರೆಗಳು ಹಾಗೂ ಬೆಂಗಳೂರು ನಗರದಲ್ಲಿ 3 ಪ್ರಮುಖ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಈವರೆಗೆ ಕೆಪಿಎಂಇ ಕಾಯ್ದೆಯಡಿ ಆನ್‌ಲೈನ್ ಮುಖಾಂತರ ನೋಂದಣಿಗೊಂಡಿರುವ ಖಾಸಗಿ ಆಸ್ಪತ್ರೆಗಳ ಸಂಖ್ಯೆ: 5,850 ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. .

ನ್ಯಾಷನಲ್ ಬಿಲ್ಡಿಂಗ್ ಕೋಡ್ (NBC) ಪ್ರಕಾರ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ಫೈರ್ ಸೇಷ್ಟಿ ನಿಯಮವಿರುತ್ತದೆ. ಯಾವುದೇ ಬೇರೆ ಬೇರೆ ಮಾನದಂಡ ಇರುವುದಿಲ್ಲ. ರಾಜ್ಯದಲ್ಲಿನ ಒಟ್ಟು 2,878 ಸರ್ಕಾರಿ ಆಸ್ಪತ್ರೆಗಳಲ್ಲಿ 14 ಸರ್ಕಾರಿ ಆಸ್ಪತ್ರೆಗಳು ಹಾಗೂ 5,850 ಖಾಸಗಿ ಆಸ್ಪತ್ರೆಗಳಲ್ಲಿ 315 ಖಾಸಗಿ ಆಸ್ಪತ್ರೆಗಳು ಫೈರ್ ಸೇವಿ ಪರ್ಮಿಷನ್‌ಗೆ ಇರುವ ಮಾನದಂಡಗಳನ್ನು ಪೂರ್ಣಗೊಳಿಸಿವೆ.

Table of 07 of para-04 of The National Building Code  (NBC) ಪ್ರಕಾರ  ಕಟ್ಟಡದ ಎತ್ತರಕ್ಕೆ ಅನುಗುಣವಾಗಿ ನೀರಿನ ಶೇಖರಣೆ ಬಗ್ಗೆ ನಮೂದಿಸಲಾಗಿದ್ದು ಅದರಂತೆ ಕಡ್ಡಾಯವಾಗಿ ನೀರಿನ ಶೇಖರಣೆ ಮಾಡಬೇಕಾಗಿರುತ್ತದೆ. ಅಲ್ಲದೇ ಜನರ ಪ್ರಾಣ ರಕ್ಷಣೆ ಮಾಡುವುದು ಪ್ರಮುಖವಾಗಿರುತ್ತದೆ

ಸರ್ಕಾರದ ಆದೇಶ ಸಂಖ್ಯೆ  ಹೆಚ್.ಡಿ. 334 ಎಸ್.ಎಫ್.ಬಿ 2023 ದಿನಾಂಕ:30-03-2024 ಹಾಗೂ ದಿನಾಂಕ: 15-07- 2024 ರಲ್ಲಿ ಕಟ್ಟಡಗಳ ಎತ್ತರಕ್ಕನುಗುಣವಾಗಿ ವಿಧಿಸಿರುವಂತೆ ಸರ್ಕಾರಿ ಶುಲ್ಕವನ್ನು ಪಾವತಿಸಿಕೊಂಡು ಅಗ್ನಿ ಸಲಹಾ ಪ್ರಮಾಣ ಪತ್ರ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";