Live Stream

[ytplayer id=’22727′]

| Latest Version 8.0.1 |

State News

ನಿವೃತ್ತ  ನ್ಯಾಯಮೂರ್ತಿ ದಿ. ಸಿ.ಎನ್ ಅಶ್ವಥನಾರಾಯಣ ರಾವ್ ಪ್ರಾಮಾಣಿಕತೆ, ಉತ್ತಮ ಮಾನವೀಯ ಮೌಲ್ಯ ಹೊಂದಿದ್ದರು – ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು

ನಿವೃತ್ತ  ನ್ಯಾಯಮೂರ್ತಿ ದಿ. ಸಿ.ಎನ್ ಅಶ್ವಥನಾರಾಯಣ ರಾವ್ ಪ್ರಾಮಾಣಿಕತೆ, ಉತ್ತಮ ಮಾನವೀಯ ಮೌಲ್ಯ ಹೊಂದಿದ್ದರು – ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು

ನಿವೃತ್ತ  ನ್ಯಾಯಮೂರ್ತಿಗಳಾದ ದಿವಂಗತ ಸಿ.ಎನ್ ಅಶ್ವಥನಾರಾಯಣ ರಾವ್ ಅವರು ಪ್ರ್ರಾಮಾಣಿಕತೆ ಹಾಗೂ ಉತ್ಸಾಹದಿಂದ ಕೆಲಸ ನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯವನ್ನು ಹೊಂದಿದ್ದರು ಎಂದು ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ತಿಳಿಸಿದರು.

ಇಂದು ಕರ್ನಾಟಕ ಉಚ್ಚನ್ಯಾಯಾಲಯದ ಕೋರ್ಟ್ ಹಾಲ್ ನಂಬರ್ 1 ರಲ್ಲಿ ಹಮ್ಮಿಕೊಂಡಿದ್ದ  ನಿವೃತ್ತ  ನ್ಯಾಯಮೂರ್ತಿ ದಿವಂಗತ ಸಿ.ಎನ್ ಅಶ್ವಥನಾರಾಯಣ ರಾವ್ ಅವರ  ಶೋಕಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ನಿವೃತ್ತ  ನ್ಯಾಯಮೂರ್ತಿಗಳಾದ ದಿವಂಗತ ಸಿ.ಎನ್ ಅಶ್ವಥನಾರಾಯಣ ರಾವ್ ಅವರು 2025 ನೇ ಜುಲೈ 19 ರಂದು ದೈವಾಧೀನರಾಗಿದ್ದು, ಅವರು  ಮಾನವೀಯತೆ ವಿಚಾರಗಳನ್ನು ಹೊಂದಿದ್ದರು. ನಮ್ರತೆ, ಸಮಗ್ರತೆ, ನಿಸ್ವಾರ್ಥತೆ, ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳು ತಮ್ಮ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಕೋಲಾರದಲ್ಲಿ ಪೂರೈಸಿ, ಮೈಸೂರಿನ ಹೆಸರಾಂತ ಮಹಾವಿದ್ಯಾಲಯವಾದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿಯಲ್ಲಿ 3ನೇ ರ್ಯಾಂಕ್ ಪಡೆದಿರುತ್ತಾರೆ. 1957ನೇ ಇಸವಿಯಲ್ಲಿ ಶ್ರೀಯುತರು ಅಂದಿನ ಕಾಲದ ಕಾನೂನು ಪದವಿಯಾದ ಬಿ.ಎಲ್ ಪದವಿಯನ್ನು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪಡೆದು, 1962 ರಿಂದ ಕೋಲಾರದಲ್ಲಿಯೇ ತಮ್ಮ ತಂದೆಯವರ ಕಛೇರಿಯಲ್ಲಿ 6 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ನಡೆಸಿದ್ದಾರೆ ಎಂದು ತಿಳಿಸಿದರು.

ಶ್ರೀಯುತರು 1965ನೇ ಇಸವಿಯಲ್ಲಿ ಕರ್ನಾಟಕ ಸಾರ್ವಜನಿಕ ಆಯೋಗದವರು ಆಯೋಜಿಸಿದ್ದ ಮುನ್ಸಿಫ್ ಪರೀಕ್ಷೆಯ 7ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಮುನ್ಸಿಫ್ ಮ್ಯಾಜಿಸ್ಟ್ರೇಟ್‍ರಾಗಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದಾಗಿರುತ್ತದೆ. ಶ್ರೀಯುತರು 1977 ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿಯನ್ನು ಪಡೆದು ಬೆಂಗಳೂರು, ಧಾರವಾಡ, ಮಂಡ್ಯ ಮತ್ತು ಮುಂತಾದ ಸಿವಿಲ್ ನ್ಯಾಯಾಲಯಗಳಲ್ಲಿ ಸೇವೆಯನ್ನು ಸಲ್ಲಿಸಿ, ಶ್ರೀಯುತರು 1983ರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಬೆಂಗಳೂರು, ವಿಜಯಪುರ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿಯಲೂ ಸಹ ಸೇವೆಯನ್ನು ಸಹ ಸಲ್ಲಿಸಿರುತ್ತಾರೆ. ಅದಲ್ಲದೇ ಶ್ರೀಯತರು ಸೂಪರ್ ಟೈಮ್ ಸ್ಕೇಲ್ ಜಿಲ್ಲಾ ನ್ಯಾಯಾಧೀಶರಾಗಿ ನವೆಂಬರ್ 9, 1990ರಲ್ಲಿ ಸೇವೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಅವರು ಮಾತನಾಡಿ, ನಿವೃತ್ತ  ನ್ಯಾಯಮೂರ್ತಿಗಳಾದ ದಿವಂಗತ ಸಿ.ಎನ್ ಅಶ್ವಥನಾರಾಯಣ ರಾವ್ ಅವರು 1980ರ ಇಸವಿಯಲ್ಲಿ ಪ್ರಪ್ರಥಮವಾಗಿ ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ಜೂಡಿಷ್ಯರಿ ಟ್ರೈನಿಂಗ್ ಮತ್ತು ರಿಸರ್ಚ್ ಎಂಬ ವಿಷಯದಲ್ಲಿ ಹಿರಿಯ ಜಿಲ್ಲಾ ನ್ಯಾಯಾಧೀಶರಿಗೆ ಕಾರ್ಯಕ್ರಮಗಳನ್ನು ನಡೆಸಿರುವ ಹೆಗ್ಗಳಿಕೆ ಇವರದ್ದಾಗಿರುತ್ತದೆ.

ಶ್ರೀಯುತರು ನವೆಂಬರ್ 30, 1994 ರಂದು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಇವರ ಅವಧಿಯಲ್ಲಿ ಎಲ್ಲ ವಕೀಲರೊಂದಿಗೆ, ನ್ಯಾಯಾಡಳಿತ ಅಧಿಕಾರಿಗಳೊಂದಿಗೆ ಹಾಗೂ ನ್ಯಾಯಾಲಯದ ಒಳಗೂ ಹೊರಗೂ ಒಳ್ಳೆಯ ಒಡನಾಟ ಹೊಂದಿದ್ದರು. ಅವರ ಕುಟುಂಬದ ಸದಸ್ಯರಿಗೆ ದು:ಖ ಭರಿಸುವ ಶಕ್ತಿ ದೊರೆಯಲಿ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";