Live Stream

[ytplayer id=’22727′]

| Latest Version 8.0.1 |

Business News

ಕಟ್ಟಕಡೆಯ ವ್ಯಕ್ತಿಗೂ ಮನೆಭಾಗಿಲಿಗೆ ಆರೋಗ್ಯ ಸಿಗಬೇಕು: ಗೌರಿಶಂಕರ್

ಕಟ್ಟಕಡೆಯ ವ್ಯಕ್ತಿಗೂ ಮನೆಭಾಗಿಲಿಗೆ ಆರೋಗ್ಯ ಸಿಗಬೇಕು: ಗೌರಿಶಂಕರ್

ಬೆಂಗಳೂರು: ಸಮುದಾಯ ಆದಾರಿತ ಹಾಗೂ ಹಳ್ಳಿಗರ ಆರೋಗ್ಯ ಕಾಪಾಡುವ ಉದ್ದೇಶದಿಂದ ಬೆಂಗಳೂರು ಕಬ್ಬನ್ ಪಾರ್ಕ್ ರೋಟರಿ 3191 ಟ್ರಸ್ಟ್ ಬೆಂಗಳೂರು ಗ್ಯಾಸ್ಟೊ ಕೇಂದ್ರಕ್ಕೆ ವೆಲ್ ನೆಸ್ ಆನ್ ವ್ಹೀಲ್ಸ್ ಎಂಬ ಆರೋಗ್ಯ ವಾಹನ ಹಸ್ತಾಂತರ ಮಾಡಲಾಯಿತು.

ಬೆಂಗಳೂರಿನ ಬನಶಂಕರಿ ಸುಚಿತ್ರ ಸುನಿಮಾ ಅಕಾಡೆಮಿ ಮುಂದೆ ಗ್ಯಾಸ್ಟೊ ವಾಹನವನ್ನು ಬೆಂಗಳೂರು ಕಬ್ಬನ್ ಪಾರ್ಕ್ ರೋಟರಿ ಮುಖ್ಯಸ್ಥರಾದ ಗೌರಿ ಶಂಕರ್ ಹಾಗು BRCP ಅಧ್ಯಕ್ಷರಾದ ಸಂಗೀತ ಅಯ್ಯರ್ ರೆಡ್ಡಿ ಅವರು ವಾಹನವನ್ನು ಹಾಸ್ತಾಂತರ ಮಾಡಿ, ನಂತರ ಸಂಗೀತ ಮಾತನಾಡಿ, ಬಡವರ,ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಸಿಗಬೇಕು ಎನ್ನುವ ಉದ್ದೇಶದಿಂದ 3 ಕೋಟಿ ರೂಪಾಯಿ ವೆಚ್ಚದ ಗ್ಯಾಸ್ಟೊ ವಾಹನಕ್ಕೆ ಚಾಲನೆ ನೀಡಲಾಗಿದೆ. ಇದೆಲ್ಲವೂ ಸಂಪೂರ್ಣವಾಗಿ ಉಚಿತವಾಗಿದೆ. 2025-26 ನೇ ಸಾಲಿನಲ್ಲಿ ಅತಿ ದೊಡ್ಡ ಯೋಜನೆಯಾಗಿದೆ ಎಂದರು.

 ಬೆಂಗಳೂರು ರೋಟರಿ ಕಬ್ಬನ್ ಪಾರ್ಕ್3191ನ ಮುಖ್ಯಸ್ಥರಾದ ಗೌರಿ ಶಂಕರ್ ಮಾತನಾಡಿ, ಹಳ್ಳಿಗಾಡಿನಲ್ಲಿ ಪ್ರಸ್ತುತ ಸಾರ್ವಜನಿಕರು ಗ್ಯಾಸ್ಟೊ ಸಮಸ್ಯೆಯಿಂದ ಬಹಳ ಮಂದಿ ಬಳಲುತ್ತಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಡ ಜನರ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ಜಾರಿಗೆ ತರಲಾಗಿದೆ.

ಅತ್ಯಾಧುನಿಕ ಮೊಬೈಲ್ ವಾಹನ ನಿರ್ಮಾಣ:

ಅತ್ಯಾಧುನಿಕವಾಗಿ ವಾಹನ ನಿರ್ಮಾಣ ಮಾಡಲಾಗಿದೆ. ವಾಹನದಲ್ಲಿ ಜನರೇಟರ್, UPS,AC,ಚಿಕ್ಕ ಆಪರೇಷನ್ ಕೊಠಡಿ ಇದೆ.ಜಪಾನ್ ಕಂಪನಿಯ ಮಷಿನ್ ಇದ್ದು, ಗ್ಯಾಸ್ಟೊ ಸಮಸ್ಯೆ ಸಂಪೂರ್ಣವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ವಾಹನವನ್ನು Infosys ಕೊಡುಗೆಯಾಗಿದೆ, 50 ಲಕ್ಷದಸ್ಟು ವೈದ್ಯಕೀಯ ಉಪಕರಣ BRCP ನೀಡಲಾಗಿದೆ.ಅದರ ಜೊತೆಗೆ ಕರ್ನಾಟಕ ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಸಹಾಯ ಮಾಡಲಾಗಿದೆ.

 ಹಿಂದೆ ಹಳ್ಳಿಗಳಿಗೆ ಹೋಗಿ ಕ್ಯಾಂಪ್ ಮಾಡಲು ಆಗುತ್ತಿರಲಿಲ್ಲ, ಈಗ ಸುಲಭವಾಗಿ ವಾಹನ ಮನೆ ಬಳಿಯೇ ಹೋಗಿ ಚಿಕಿತ್ಸೆ ನೀಡುವಂತಾಗಿದೆ.

ಬಿಜಿಸಿಯ ಡಾ.ಯೋಗಾನಂದ ರೆಡ್ಡಿ ಅವರು ವಾಹನದ ಉಸ್ತುವಾರಿ ವಹಿಸಿದ್ದಾರೆ, ಇಲ್ಲಿ ಕ್ಯಾನ್ಸರ್ ಬಾರದಂತೆ ತಡೆದು ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಎಂಡೋಸ್ಕೋಪಿ,ಖಲನರಿ ಸ್ಕೋಪಿ ಮಾಡಿದರೆ ಖಾಸಗಿಯವರು 10-12 ಸಾವಿರ ಬಿಲ್ ಮಾಡುತ್ತಾರೆ,ಆದರೆ ಇಲ್ಲಿ ಉಚಿತವಾಗಿದೆ. ಮೊದಲು ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ವಾಹನ ಸಂಚರಿಸಿ ಆರೋಗ್ಯ ತಪಾಸಣೆ ಮಾಡುತ್ತಾರೆ. ನಂತರ ಕರ್ನಾಟಕದ ಎಲ್ಲೆಡೆ ಹಂತ ಹಂತವಾಗಿ ಮಾಡಲು ಮುಂದಾಗುತ್ತಾರೆ. ಕರ್ನಾಟಕ ಸರ್ಕಾರಕ್ಕೆ ಪ್ರತಿ 3 ತಿಂಗಳಿಗೆ ಒಮ್ಮೆ  ಸಂಸ್ಥೆಯಿಂದ ವರದಿ ನೀಡುತ್ತಾರೆ,ಅದರ ಆದರ ಮೇಲೆ ಎಲ್ಲೆ ಸಮಸ್ಯೆ ಹೆಚ್ಚಿದೆ ಎಂದು ತಿಳಿದು  ಕ್ರಮಕ್ಕೆ ಮುಂದಾಗಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆಯ ಆರೈಕೆ ಮಹತ್ವ ಬಗ್ಗೆ ಡಾ.ಯೋಗಾನಂದ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ BGC ಮತ್ತು BRCP ಯೋಜನೆ ಬಗ್ಗೆ ಪರಸ್ಪರ ಒಡಂಬಡಿಕೆ ಮಾಡಿಕೊಂಡರು. ಯೋಜನೆಯ ಸಮನ್ವಯ ಅಧಿಕಾರಿ ರಾಯ್, ಡಾ.ಸಾಯಿ ರಾಜ್ ರೆಡ್ಡಿ, ಕಾರ್ಯದರ್ಶಿ ರೇಖಾ, ಬೆಂಗಳೂರು ರೋಟರಿ ಕಬ್ಬನ್ ಪಾರ್ಕ್3191 ಟ್ರಸ್ಟ್ ನ ಪದಾಧಿಕಾರಿಗಳು,ರೊಟೇರಿಯನ್ಸ್ , ಉಪಸ್ಥಿತರಿದ್ದರು.

 

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";