- ರಾಯಚೂರು : ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನದ ಪವಿತ್ರ ಶ್ರೀವಾರಿ ವಸ್ತçವನ್ನು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿಗೆ ಅರ್ಪೀಸಿದರು.
ಶನಿವಾರ ತಿರುಮಲ ತಿರುಪತಿ ದೇವಸ್ಥಾನದ ಟಿಟಿಡಿ ಎಇಒ ರಾಮಕೃಷ್ಣ ಮಂತ್ರಾಲಯಕ್ಕೆ ತಂದಿದ್ದ ಪವಿತ್ರ ಶ್ರೀವಾರಿ ವಸ್ತçವನ್ನು ಮಂತ್ರಾಲಯದ ರಾಯರ ಮಠದ ಅಧಿಕಾರಿಗಳು ಮತ್ತು ಪಂಡಿತರು ಸಕಲ ವಾದ್ಯಗಳ ಮೂಲಕ ಸಾಂಪ್ರದಾಯಿಕವಾಗಿ ಅವರನ್ನು ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.
ಟಿಟಿಡಿ ಅಧಿಕಾರಿಗಳು ಶ್ರೀವಾರಿ ವಸ್ತçಗಳೊಂದಿಗೆ ಮದ್ವ ಕಾರಿಡಾರ್ ಮೂಲಕ ಶ್ರೀ ಮಠಕ್ಕೆ ತೆರಳಿ ಮೊದಲು ಶ್ರೀ ಮಂಚಲಮ್ಮ ದೇವಿಗೆ ಸೀರೆ ಅರ್ಪಿಸಿದರು. ನಂತರ ಟಿಟಿಡಿ ಎಇಒ ರಾಮಕೃಷ್ಣ ಅವರು ಶ್ರೀವಾರಿ ವಸ್ತçವನ್ನು ಮಂತ್ರಾಲಯದ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.
ಶ್ರೀವಾರಿ ವಸ್ತçವನ್ನು ಸ್ವಾಮೀಜಿಯವರು ರಾಯರ ಮೂಲ ಬೃಂದಾವನಕ್ಕೆ ಅರ್ಪಿಸಿದರು. ನಂತರ, ಟಿಟಿಡಿ ಅಧಿಕಾರಿಗಳು ಶೇಷವಸ್ತç ಮತ್ತು ಪ್ರಸಾದವನ್ನು ಸ್ವಾಮೀಜಿಯವರಿಗೆ ಅರ್ಪಿಸಿದರು. ಪ್ರತಿಯಾಗಿ, ಸ್ವಾಮೀಜಿಯವರು ಟಿಟಿಡಿ ಎಇಒ ರಾಮಕೃಷ್ಣ ಮತ್ತು ಅವರ ಕುಟುಂಬವನ್ನು ಶೇಷವಸ್ತç, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯೊAದಿಗೆ ಆಶೀರ್ವದಿಸಿದರು.
Veekay News > State News > ರಾಘವೇಂದ್ರ ಸ್ವಾಮಿಗಳ ಆರಾಧನೆ: ತಿರುಪತಿ ಪವಿತ್ರ ಶ್ರೀವಾರಿ ವಸ್ತ್ರ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿಗೆ ಅರ್ಪಣೆ
ರಾಘವೇಂದ್ರ ಸ್ವಾಮಿಗಳ ಆರಾಧನೆ: ತಿರುಪತಿ ಪವಿತ್ರ ಶ್ರೀವಾರಿ ವಸ್ತ್ರ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿಗೆ ಅರ್ಪಣೆ
ವೀ ಕೇ ನ್ಯೂಸ್09/08/2025
posted on
