Live Stream

[ytplayer id=’22727′]

| Latest Version 8.0.1 |

Cultural

ರಾಜರಾಜೇಶ್ವರಿನಗರದ ರಾಯರ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವ

ರಾಜರಾಜೇಶ್ವರಿನಗರದ ರಾಯರ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವ
ಬೆಂಗಳೂರು :  ರಾಜರಾಜೇಶ್ವರಿನಗರದ ಬೆಮೆಲ್ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10, 11 ಮತ್ತು 12ರಂದು ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಭಜನಾ ಕಾರ್ಯಕ್ರಮ ಹಾಗೂ ಸಂಜೆ 6-30ಕ್ಕೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ :
ಆಗಸ್ಟ್ 10, ಭಾನುವಾರ : “ಹರಿದಾಸ ವಾಣಿ”. ಗಾಯನ : ಸಂಗೀತ ವಿದುಷಿಯರಾದ ಶ್ರೀಮತಿ ದಿವ್ಯಾ ಗಿರಿಧರ್ ಹಾಗೂ ಶ್ರೀಮತಿ ನಂದಿನಿ ಗುಜಾರ್. ವಿದ್ವಾನ್ ಶ್ರೀ ಜಯರಾಮಾಚಾರ್ (ಕೀಬೋರ್ಡ್), ವಿದ್ವಾನ್ ಶ್ರೀ ರಾಜೇಂದ್ರ ನಾಕೋಡ್ (ತಬಲಾ), ವಿದ್ವಾನ್ ಶ್ರೀ ಶಿವಲಿಂಗ್ ರಾಜಪೂರ್ (ಕೊಳಲು), ವಿದ್ವಾನ್ ಶ್ರೀ ಪದ್ಮನಾಭ ಕಾಮತ್ (ರಿದಂಪ್ಯಾಡ್).
ಆಗಸ್ಟ್ 11, ಸೋಮವಾರ : ಡಾ|| ಜಯಂತಿ ಕುಮರೇಶ್ ಅವರಿಂದ “ವೀಣಾ ವಾದನ”, ವಿದ್ವಾನ್ ಶ್ರೀ ಕುಮರೇಶ್ ಅವರಿಂದ ಪಿಟೀಲು ವಾದನ.
ಆಗಸ್ಟ್ 12, ಮಂಗಳವಾರ : ಬೆಳಗ್ಗೆ 9-30ಕ್ಕೆ ಶ್ರೀಮತಿ ರಮಾ ಪ್ರಸನ್ನ ಮತ್ತು ರಾಹುಲ್ ರಾಮನ್ ರವರಿಂದ “ವೀಣಾವಾದನ”. ಸಂಜೆ 6-30ಕ್ಕೆ ಕು|| ಮೇಧಾ ವಿದ್ಯಾಭೂಷಣ್ ಮತ್ತು ಸಂಗಡಿಗರಿಂದ “ದಾಸವಾಣಿ”. ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ವೀ ಕೇ ನ್ಯೂಸ್
";