– ದಾಖಲೆ ಮಾರಾಟ ಕಂಡ ವಿಡಾ- 2025ರ ಜುಲೈನಲ್ಲಿ 11,200 ಯೂನಿಟ್ ಗಳನ್ನು ಮಾರಾಟ ಮಾಡಿದ ಸಂಸ್ಥೆ
– ಜಾಗತಿಕವಾಗಿ 37,358 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದ್ದು, ಭಾರಿ ಬೆಳವಣಿಗೆ ದಾಖಲು
ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕರಾದ ಹೀರೋ ಮೋಟೋಕಾರ್ಪ್ ಸಂಸ್ಥೆಯು 2025ರ ಜುಲೈನಲ್ಲಿ ಲ್ಲಿ 449,755 ಯೂನಿಟ್ ಡಿಸ್ ಪ್ಯಾಚ್ ಮಾಡಿ ದಾಖಲೆ ಮಾಡಿದೆ. 2024ರ ಜುಲೈನಲ್ಲಿ 370,274 ಯೂನಿಟ್ ಗಳನ್ನು ಡಿಸ್ ಪ್ಯಾಚ್ ಮಾಡಲಾಗಿದ್ದು, ಅದಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.21ರಷ್ಟು ಬೆಳವಣಿಗೆ ದಾಖಲಿಸಲಾಗಿದೆ.
ಹೀರೋ ಮೋಟೋಕಾರ್ಪ್ ಸಂಸ್ಥೆಯು ವಾಹನ್* ಪ್ರಕಾರ 2025ರ ಜುಲೈನಲ್ಲಿ 339,827ಕ್ಕಿಂತ ಹೆಚ್ಚು ರಿಟೇಲ್ ರಿಜಿಸ್ಟ್ರೇಷನ್ ಗಳನ್ನು ಗಳಿಸಿದೆ. ಈ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಮಾರುಕಟ್ಟೆ ಗಮನವನ್ನು ಸೆಳೆದಿದೆ. ಸಂಸ್ಥೆಯ ರಿಟೇಲ್ ವ್ಯಾಪಾರವು ಸ್ಥಿರವಾಗಿದೆ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಮಾರಾಟ ಪ್ರಮಾಣವು ಏರಿಕೆಯಾಗುವ ನಿರೀಕ್ಷೆಯಿದೆ.
*ವಾಹನ್ ಮಾಹಿತಿ, (ತೆಲಂಗಾಣವನ್ನು ಹೊರತುಪಡಿಸಿ, ಆಗಸ್ಟ್ 1, 2025ರ ಪ್ರಕಾರ)
ಕಳೆದ ಕೆಲವು ತಿಂಗಳಲ್ಲಿ ಕಂಪನಿಯು ಪ್ರಮುಖ ವಿಭಾಗಗಳಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ. ಸ್ಕೂಟರ್ ಗಳಲ್ಲಿ, ಡೆಸ್ಟಿನಿ 125 ಮತ್ತು ಝೂಮ್ 125 ಅತ್ಯುತ್ತಮ ಮಾರಾಟ ದಾಖಲೆ ಮಾಡಿದೆ.
ಮೋಟಾರ್‌ಸೈಕಲ್ ವಿಭಾಗದಲ್ಲಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಎಚ್‌ಎಫ್ ಡೀಲಕ್ಸ್ ಪೋರ್ಟ್‌ಫೋಲಿಯೋವನ್ನು ಎಚ್‌ಎಫ್ ಡೀಲಕ್ಸ್ ಪ್ರೊ ಬಿಡುಗಡೆ ಮಾಡುವ ಮೂಲಕ ವಿಸ್ತರಿಸಿಕೊಂಡಿದೆ. ಹೊಸ ವಿನ್ಯಾಸ, ವಿಭಾಗ ಶ್ರೇಷ್ಠ ವೈಶಿಷ್ಟ್ಯಗಳು ಮತ್ತು ಉನ್ನತ ಇಂಧನ ದಕ್ಷತೆ ಹೊಂದಿರುವ ಈ ಮಾಡೆಲ್ ಎಂಟ್ರಿ-ಲೆವೆಲ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಂತೆ ಮೂಡಿಬಂದಿದೆ.
ಹೀರೋ ಮೋಟೋಕಾರ್ಪ್ ಅಧೀನದ ವಿಡಾ ಸಂಸ್ಥೆಯು 2025ರ ಜುಲೈನಲ್ಲಿ ಒಂದು ಮಹತ್ವದ ಸಾಧನೆ ಮಾಡಿದ್ದು, ಅತ್ಯಧಿಕವಾದ 11,226 ಯೂನಿಟ್ ಗಳನ್ನು ಡೆಲಿವರಿ ಮಾಡಿದೆ ಮತ್ತು ವಾಹನ್ ಪ್ರಕಾರ 10,489 ನೋಂದಣಿಗಳನ್ನು ದಾಖಲಿಸಿರುವ ಸಾಧನೆ ಮಾಡಿದೆ. ಕಂಪನಿಯು ತನ್ನ ಇವಿ ವಾಹನ್ ಮಾರುಕಟ್ಟೆ ಪಾಲನ್ನು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳಿಸಿಕೊಂಡಿದ್ದು, ಶೇ.10.2ಕ್ಕೆ ತಲುಪಿದೆ. ಈ ಅಂಕಿಸಂಖ್ಯೆಯು ಹೀರೋ ಮೋಟೋಕಾರ್ಪ್‌ನ ವಿದ್ಯುತ್ ಸಾರಿಗೆ ಉತ್ಪನ್ನಗಳ ಮೇಲೆ ಗ್ರಾಹಕರು ತೋರಿರುವ ಮೆಚ್ಚುಗೆಯನ್ನು ಸಾರಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ವಿಡಾ ಇವೂಟರ್‌ವಿಎಕ್ಸ್2 “ಬದಲಾಗುತ್ತಿರುವ ಭಾರತದ ಸ್ಕೂಟರ್” ಎಂಬ ಹೆಗ್ಗಳಿಕೆ ಗಳಿಸಿದ್ದು, ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ದ್ವಿಚಕ್ರ ವಾಹನ ವಿಭಾಗದಲ್ಲಿ ಅತ್ಯುತ್ತಮ ಸ್ಥಾನವನ್ನು ಗಳಿಸಿದೆ. ವಿಡಾ ಇವೂಟರ್, ವಿದ್ಯುತ್ ಸ್ಕೂಟರ್ ನ ಹೊಸತನ ಮತ್ತು ವಿಶ್ವಾಸಾರ್ಹತೆಯ ಸಮ್ಮಿಲನದಂತೆ ಮೂಡಿಬಂದಿದ್ದು, ಹೊಸ ರೈಡಿಂಗ್ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ಬ್ಯಾಟರಿ-ಆಸ್-ಎ-ಸರ್ವಿಸ್ (ಬಿಎಎಎಸ್) ಮಾಡೆಲ್ ಅನ್ನು ಹೊಂದಿದ್ದು, ಈ ಮೂಲಕ ಗ್ರಾಹಕರಿಗೆ ಇವಿ ಅಳವಡಿಸುವುದನ್ನು ಸುಲಭ ಮಾಡಿದೆ.
ಅಭಿವೃದ್ಧಿ ಮೇಲೆ ಗಮನ ಹರಿಸಿರುವ ಮತ್ತು ಉದ್ಯಮದ ಟ್ರೆಂಡ್ ಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿಯೂ ಬೆಳವವಣಿಗೆ ಗಳಿಸಿದ್ದು, ಜುಲೈ 2025ರಲ್ಲಿ 37,300 ಯೂನಿಟ್ ಗಳಿಗೂ ಹೆಚ್ಚು ಮಾರಾಟ ಮಾಡಿದೆ. ಕಂಪನಿಯು ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಈ ಬೆಳವಣಿಗೆಯು ಜಾಗತಿಕ ಮಟ್ಟದ ಗ್ರಾಹಕರಿಗೆ ವಿಶ್ವಾಸಾರ್ಹ, ಉತ್ತಮ-ಗುಣಮಟ್ಟದ ಮತ್ತು ತಾಂತ್ರಿಕವಾಗಿ ಸುಧಾರಿತ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಅದರ ಬದ್ಧತೆಯನ್ನು ಸಾರುತ್ತಿದೆ.