ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಸಹಯೋಗದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ರಾಜಾಧ್ಯಕ್ಷ ಮಧುನಾಯ್ಕ ಲಂಬಾಣಿ ಸಂಘವು ಪ್ರತಿ ಭಾನುವಾರ ಆನ್ಲೈನ್ ನಲ್ಲಿ ಚಿತ್ರಗೀತೆ ಜಾನಪದ ಗೀತೆ, ಭಾವಗೀತೆ ಸ್ಪರ್ಧೆ ಏರ್ಪಡಿಸಿ 34 ಮಂದಿ ಗಾಯಕ ಗಾಯಕಿಯರನ್ನು ಮೊದಲ ಹಂತದಲ್ಲಿ ಚಿಕ್ಕಮಗಳೂರಿಗೆ ಆಯ್ಕೆ ಮಾಡಿ ಅವರಿಂದ ವೇದಿಕೆಯಲ್ಲಿ ಹಾಡಿಸಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಿದೆ.
ದಾಂಡೆಲಿಯಲ್ಲಿ 2ನೇ ಹಂತದ ಸ್ಫರ್ದೆ ನಡೆಸಿ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಗಾಯಕ ಗಾಯಕಿಯರನ್ನು ಮುಂದಿನ ವರ್ಷ ಜನವರಿಯಲ್ಲಿ ಬೆಳಗಾವಿಯಲ್ಲಿ ಅಲ್ಲಿಯ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆಯುವ ರಾಜ್ಯಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಸಂಘವು 2020ರಲ್ಲಿ ಸ್ಥಾಪನೆಗೊಂಡು ನಿರಂತರ ಸಾಹಿತ್ಯ ಸಾಂಸ್ಕøತಿಕ ನಡೆಸುತ್ತಿದೆ. ಜೊತೆಗೆ ಕೃಷಿ ತರಭೇತಿ ರೈತರಿಗೆ ಸಿಗುವ ಸೌಲಭ್ಯಗಳು, ಜೀವನೋತ್ಸಹ ಕಾರ್ಯಕ್ರಮದಲ್ಲಿ ವೈದ್ಯರಿಂದ ಆರೋಗ್ಯ ಸಲಹೆ, ಒಂದು ಲಕ್ಷ 10ನೇ ತರಗತಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಪರೀಕ್ಷಾಪೂರ್ವ ತಯಾರಿ, ಕೊರೋನ ಸಂದರ್ಭ ಕಲ್ಬುರ್ಗಿಯಲ್ಲಿ ಜಿಲ್ಲೆಯ ಬಡಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, ರಾಜ್ಯದ ರಂಗಕಲಾವಿದರಿಗೆ ರಂಗಗೀತೆ, ಜಾನಪದ ಗಾಯಕರ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ, ಬರಹಗಾರರಿಗೆ 1300 ವಿವಿಧ ಸಾಹಿತ್ಯ ಗೋಷ್ಟಿ, ಚಿತ್ರಕಲಾ ಸ್ಫರ್ಧೆ ಅಲ್ಲದೇ ಪ್ರತಿವರ್ಷ ರಾಜ್ಯಮಟ್ವದ ನುಡಿ ವೈಭವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘದ ಘಟಕಗಳು ಸ್ಥಾಪನೆಯಾಗಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತಿವೆ ಎಂದರು. ಮುಖ್ಯ ಅತಿಥಿಯಾಗಿ ಹಾಗೂ ತೀರ್ಪುಗಾರರಾಗಿ ಬಾಗವಹಿಸಿ ಮಾತನಾಡಿದ ಸಾಹಿತಿ ಗೊರೂರು ಅನಂತರಾಜು ಓರ್ವ ಕವಿ ಸಾಹಿತಿ ಬರೆದ ಕಾವ್ಯವನ್ನು ಶೋತೃಗಳ ಮನಮುಟ್ಟುವಂತೆ ಹಾಡುವ ಗಾಯಕ ಗಾಯಕಿಯರು ಕವಿ ಮತ್ತು ಶೋತೃ ನಡುವಿನ ರಾಯಬಾರಿಗಳು. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಹಾಡು ಸಂಗೀತವು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಆರೋಗ್ಯಕರ ಮನೋಚಿಕಿತ್ಸೆಯ ದಿವ್ಯಔಷಧಿ. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಗಾಯಕ ಗಾಯಕಿಯರು ಒಬ್ಬರಿಗಿಂತ ಒಬ್ಬರು ಮೇಲಾಗಿ ತಮ್ಮ ಗಾಯನ ಪ್ರತಿಭೆ ತೋರಿದ್ದಾರೆ ಎಂದು ಶ್ಲಾಘಿಸಿದರು.
ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರು ಡಾ. ವಿದ್ಯಾ ಕೆ ಅದ್ಯಕ್ಷತೆ ವಹಿಸಿದ್ದರು. ರಾಜ್ಯಾದ್ಯಂತ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕ ಗಾಯಕಿಯರಲ್ಲಿ 34 ಉತ್ತಮ ಗಾಯಕರನ್ನು ತಾಳ್ಮೆಯಿಂದ ಆಯ್ಕೆ ಮಾಡಿದ್ದ ಸ್ವತ: ಗಾಯಕರು ಚಿಕ್ಕಮಗಳೂರು ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ಅವರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಕುರುವಂಜಿ ಕೆ.ಪಿ.ವೆಂಕಟೇಶ್ ಮಾಜಿ ರಾಜ್ಯಾಧ್ಯಕ್ಷರು ಸಫಾಯಿ ಕರ್ಮಚಾರಿ ನಿಗಮ ಮಂಡಳಿ, ಬಿ. ಎಲ್. ಪ್ರವೀಣ್ ಬೆಟ್ಟಗೇರಿ, ಜಯಣ್ಣ , ಎಂ ಎಸ್ ನಾಗರಾಜ್ ಗೌರವಾಧ್ಯಕ್ಷರು, ಎಚ್ ಎಂ ಜಗದೀಶ್, ಉಪಾಧ್ಯಕ್ಷರು, ಹಸೖನಾರ್ ಬೆಳಗೊಳ, ಜಿಲ್ಲಾ ಕೋಶಾಧ್ಯಕ್ಷರು, ರಾಕೇಶ್ ಸಿಂಗ್ ನಿರ್ದೇಶಕರು, ಚಿಕ್ಕಮಗಳೂರು ತಾ. ಘಟಕ ಅಧ್ಯಕ್ಷರು ವಿಜಯಕುಮಾರ್ ಹೆಚ್.ಸಿ. ಮೂಡಿಗೆರೆ ತಾ. ಘಟಕ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ, ವಿನೋದ್ ಗೌ. ಸಲಹೆಗಾರರು, ಇಂಪಾ ನಾಗರಾಜ್ ಗೌ. ಕಾಯ೯ದರ್ಶಿ, ನವೀನ್ ಬಿ.ಆರ್. ರವಿ ಕುನ್ನಳ್ಳಿ ಗೌ. ಸಲಹೆಗಾರರು, ಮಧುಚಂದ್ರ, ಮಜಾಭಾರತ ಕಲಾವಿದರು, ರಮೇಶ ಯಾದವ್ ಕಾಮಿಡಿ ಕಿಲಾಡಿಗಳು ಕಲಾವಿದರು ಇದ್ದರು.
ಸುಮಂಗಲಿ ದೇಸಾಯಿ ಜೋಯಿಡಾ, ಹೊಸಪೇಟೆಯ ಲಕ್ಷ್ಮಿ, ಜೂಟೂರು ರಾಘವೇಂದ್ರ, ವಿಜಯಕುಮಾರ್, ಜಿ.ನೀಲಗಂಗಮ್ಮ, ಆರ್. ಪ್ರಿಯಾಂಕ, ರೀನಾ ನಂದನ್, ವಾಲ್ಯ ನಾಯ್ಕ. ಎಲ್ ವಿಜಯನಗರ, ಚಿಕ್ಕಮಗಳೂರಿನ ವಿಜಯ್ ಕುಮಾರ್ ಸಿ.ಆರ್, ರಾಕೇಶ್ ಸಿಂಗ್, ಡಾ. ವಿದ್ಯಾ ಕೆ.ಪಿ. ದಾವಣಗೆರೆಯ ಪಿ. ಮಲ್ಲಿಕಾರ್ಜುನ ಬಿ.ಎನ್. ನಾಗೇಶ್, ಉಮೇಶ್ ಕುಮಾರ್ ಎಚ್ ಎನ್. ರಾಮನಾಥ ಜೆ ನಾಯಕ ಅಂಕೋಲಾ, ಹನುಮಂತ ನಾಯಕ್ ಸಿ ಸಾಗರಕಟ್ಟೆ ತಾಂಡ, ಗೌರಿ ಅರಸು ಮಂಡ್ಯ, ವೀಣಾ ನಟರಾಜ ಅಜ್ಜಂಪುರ, ಸ್ನೇಹ ತೀರ್ಥಳ್ಳಿ, ಎಲ್ ನಾಗೇಶ್ ತುಂಬಿನಕೇರಿ ದೊಡ್ಡ ತಾಂಡ, ಟಿ.ದೀಪಾ ವಿಜಯನಗರ, ಪ್ರಸಾದ್ ಕುಲಕರ್ಣಿ ದಾಂಡೇಲಿ, ಶಶಿಧರ್ ಹಿರೇಮಠ್ ಸೊಂಡೂರು, ಶ್ರೀದೇವಿ ತೇರದಾಳ ಮಹಾಲಿಂಗಪುರ, ವಿಜಯಶಾಂತಿ. ಕೆ ಕಮಲಾಪುರ, ಡಾ. ಅಶೋಕ್ ಬಾಬು ಎ. ಆರ್, ಚಿಕ್ಕಬಳ್ಳಾಪುರ, ಹೆಚ್. ಶ್ರೀನಿವಾಸ, ತಿಮ್ಮನಾಯ್ಕ ಸಿ.ಮುದ್ಲಾಪುರ, ಭಾಗ್ಯ ಎಸ್.ಶಿವಮೊಗ್ಗ, ಕವಿತಾ ಬಾಯಿ ಪೈ ಭದ್ರಾವತಿ, ಸುರೇಶ್ ರಾವ್ ತುಮಕೂರು, ಮಹಾನಂದ ಮಠಪತಿ ಕೊಲ್ಲೂರು ಗಾಯಕ ಗಾಯಕಿಯರು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ಹಾಡಿ ಇವರಿಗೆ ಕರುನಾಡು ಕೋಗಿಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.