Live Stream

[ytplayer id=’22727′]

| Latest Version 8.0.1 |

Feature ArticleState News

ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು

ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು
  • ” ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು “

” ನಾಗನಲ್ಲಿ ಸುಬ್ರಹ್ಮಣ್ಯ ಸನ್ನಿಧಾನ ”

ಶ್ರೀ ಶೇಷದೇವರು – 5ನೇ ಕಕ್ಷೆ.

ಶ್ರೀ ಸುಬ್ರಹ್ಮಣ್ಯದೇವರು – 8ನೇ ಕಕ್ಷೆ.

ಪುರಾಣ ವಚನದಂತೆ ಶ್ರೀ ಇಂದ್ರ ಸಮನಾದ ಶ್ರೀ ಸುಬ್ರಹ್ಮಣ್ಯ ದೇವತೆಗಳ ಸೇನಾಧಿಪನಾದ.

ಆದ ಆತನಲ್ಲಿ ದೇವ ಯೋನಿ ಜಾತರೆಲ್ಲಾ ಆಸರೆ ಪಡೆದರು.

ಅಲ್ಲಿ ನಾಗಗಳೂ ಶ್ರೀ ಸ್ಕಂಧನ ಸ್ವಾಮಿತ್ವದಲ್ಲಿ ನೆಲೆ ನಿಂತವು.

ಇದರಿಂದ ನಾಗಗಳಿಗೆ ಶ್ರೀ ಸುಬ್ರಹ್ಮಣ್ಯ ವಿಶೇಷವಾದ ಆಸರೆ ನೀಡಿದ್ದರಿಂದ ನಾಗಗಳಲ್ಲಿ ಸುಬ್ರಹ್ಮಣ್ಯನ ಸನ್ನಿಧಾನ ಬಂತು.

” ಶ್ರೀ ಸುಬ್ರಹ್ಮಣ್ಯನಿಗಿಂತ ಎಷ್ಟೋ ಕಡಿಮೆ ಯೋಗ್ಯತೆ ನಾಗಗಳಿರುವುದು.

” ಶ್ರೀ ನಾಗರಾಜ ” ನೆನಿಸಿದ ” ಶ್ರೀ ಶೇಷ ” ನಾಗನೊಬ್ಬ ಮಾತ್ರ ಶ್ರೀ ಸುಬ್ರಹ್ಮಣ್ಯನ ತಂದೆ ಶ್ರೀ ಶಿವನಿಗೆ ಸಮನಾಗಿ ಸುಬ್ರಹ್ಮಣ್ಯನಿಂದಲೂ ಆರಾಧ್ಯನಾಗಿರುವನು.

ಉಳಿದ ನಾಗಗಳೆಲ್ಲ ಶ್ರೀ ಸುಬ್ರಹ್ಮಣ್ಯನ ಆರಾಧಕರು ”

ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಿದ ಸ್ಕಾಂದ ವಚನದಂತೆ ವಾಸುಕಿಯಲ್ಲಿ ಸ್ಕಂದನ ವಿಶೇಷ ಸನ್ನಿಧಾನವಿದೆ.

ಈ ಮಾತಿನಿಂದ ಎಲ್ಲೆಡೆ ಸ್ಕಂದ ಸನ್ನಿಧಾನ ಹೇಳುವಂತಿಲ್ಲ.

ಕುಕ್ಕೆಯಲ್ಲಿ ಮಾತ್ರ ಶ್ರೀ ವಾಸುಕಿಯೊಡನೆ ಶ್ರೀ ಸ್ಕಂದನ ಆರಾಧನೆ.

ಇಲ್ಲಿ ” ಒಡನೆ ” ಎಂದಿದ್ದರಿಂದ Sr ವಾಸುಕೀ ಬೇರೇ ಶ್ರೀ ಸ್ಕಂದನೇ ಬೇರೆ ಎಂದು ತಿಳಿಯಬೇಕು.

ಗುರುವಿನೊಡನೆ ಶಿಷ್ಯನೂ ಮಠದಲ್ಲಿರುವನೆಂದಾಗ ಶಿಷ್ಯನೇ ಗುರುವಾಗನು ತಾನೇ?

ಕುಕ್ಕೆಯಲ್ಲಿ ನೆಲೆನಿಂತ ಶ್ರೀ ಸುಬ್ರಹ್ಮಣ್ಯನ ಕುರಿತು ಶ್ರೀ ಪ್ರಾಣೇಶದಾಸರು…

ರಾಗ : ಮೋಹನ ತಾಳ : ಆದಿ

ಶರಣು ಶರಣು ರತಿನಾಥಾ ।
ಸುರವರ ಅನಿರುದ್ಧನ ತಾತಾ ।
ಕರುಣಾ ಪಯೋನಿಧಿ
ರುಗ್ಮಿಣೀ ಜಾತಾ ।। ಪಲ್ಲವಿ ।।

ತ್ವರದಿಂ ಲಾಲಿಸು ಮಾತಾ ।
ಭರತನೆ ಸನತ್ಕುಮಾರಾ ।
ಸುದರುಶನ
ಪರಮೋದಾರಾ ।।
ಹರನಂದನ ನತ
ಬಂದು ಕುಮಾರಾ ।
ಕರ ಪಿಡಿ ಕೃಷ್ಣ ಕುಮಾರಾ ।। ಚರಣ ।।

ಗುರು ಮೊರೆ
ಇಡಲೈತಂದೂ ।
ದಿವಿ । ಜರರಿಗೆ
ಮನಸಿಗೆ ತಂದೂ ।
ತರುಣಿಯ ಬಿನ್ನಪ
ಶಿವನಲ್ಲಿ ಬಂದು ।
ಶರೀರವ ಕರಗಿಸಿದೆಂದೂ । ಚರಣ ।।

ಮೀನಿನ ಬಸರೊಳು ಪೊಕ್ಕೆ ।
ಆ ಮಾನವರ ಕೈಗೆ ಸಿಕ್ಕೆ ।
ದಾನವನನ್ನು
ಬಿಸುಟಿದೆ ಕುಕ್ಕೆ ।
ಆ ನೊರಣಿಸಲಿಕ್ಕಿದುಶಕ್ಕೆ ।। ಚರಣ ।।

ಭುವನದ ಅಶೋಕ
ಚೂತಾ ।
ನವ ಮಲ್ಲಿಕುತ್ಪಲ
ಧರಿತಾ ।
ಪವನ ಉಡುಗಣಪ
ವಸಂತ ಮಿಳಿತಾ ।
ಸುವಿಶಾಲ ಅದ್ಭುತ ಚರಿತಾ ।। ಚರಣ ।।

ಅಕಳಂಕನಂಗ ಮಾರಾ ।
ಮಕರ ಧ್ವಜ ಶುಕದೇರಾ ।
ಅಕುಟಿಲ ಪ್ರಾಣೇಶ
ವಿಠಲನುದಾರಾ ।
ಸುಕಥೆ ಅರುಪು ಗಂಭೀರಾ ।। ಚರಣ ।।

ಶ್ರೀ ಕಾಮದೇವರು ಶ್ರೀ ವೈಚಾರಿಕ ರುದ್ರದೇವರ ದೆಸೆಯಿಂದ ರಜ ಮತ್ತು ಸತ್ವ ಗುಣದಿಂದ ಜನಿಸಿದರು.

ಇಚ್ಛಾ ರೂಪವಾದ ಮನಸ್ಸಿಗೆ ಅಭಿಮಾನಿಯೂ, ಸ್ತ್ರೀ ಸುಖ – ರತಿ ಕ್ರೀಡಾ ಇತ್ಯಾದಿ ಸುಖಪ್ರದನು.

ಕೇತುಮಾಲಾ ಖಂಡದಲ್ಲಿರುವ ಕೃತಿ ಪತಿ ಪ್ರದ್ಯುಮ್ನ ರೂಪಿ ಶ್ರೀ ಹರಿಯನ್ನು ನಿತ್ಯೋಪಾಸನೆ ಮಾಡುತ್ತಿರುವುದರಿಂದ ಶ್ರೀ ಕಾಮನಿಗೆ ಶ್ರೀ ಪ್ರದ್ಯುಮ್ನ ಎಂದು ಹೆಸರು ಬಂದಿತು.

ಪರಮ ಕಾಂತಿಯುಕ್ತನಾದ ಶ್ರೀ ಪ್ರದ್ಯುಮ್ನ ನಾಮಕ ಶ್ರೀ ಹರಿಯ ವರ ಪ್ರಸಾದದಿಂದ ಮನ್ಮಥನು ಜಗನ್ಮೋಹಕ ಲಾವಣ್ಯವನ್ನು ಪಡೆದನು.

ಒಂದು ಬ್ರಹ್ಮ ಕಲ್ಪದಲ್ಲಿ ಕಾಮ ಪದವಿ ಜೀವರು 40 ಮಂದಿ ಇರುತ್ತಾರೆ. ಇವರಲ್ಲಿ ಒಬ್ಬನು ಮಾತ್ರ ಕಾಮ ಪದವಿಯಲ್ಲಿರುತ್ತಾನೆ.

ಇಂದ್ರ ಪದ ಜೀವರಂತೆ ಇವರಿಗೂ ಸಹ 40 ಕಲ್ಪ ಅಪರೋಕ್ಷ ಪೂರ್ವ ಸಾಧನ; ಸಾಧನಾ ನಂತರ 40 ಕಲ್ಪ ಸಾಧನ.

ಕಾಮದೇವನ ಪುತ್ರನೇ ಅನಿರುದ್ಧನು.

ಬಾಣಾಸುರನ ಮಗಳಾದ ಉಷಾಪತಿ ಅನಿರುದ್ಧನು.

10ನೇ ಕಕ್ಷದ ದೇವತೆ.

ಕಾಮದೇವನ ವರ ಪ್ರಸಾದದಿಂದ ” ಪಾಂಚಜನ್ಯ ” ವೆಂಬ ಶ್ರೀ ಹರಿಯ ಶಂಖಕ್ಕೆ ಅಭಿಮಾನಿ, ಬ್ರಹ್ಮಾವೇಶಯುಕ್ತನು.

ಅನಿರುದ್ಧ ರೂಪಿ ಭಗವಂತನ ಉಪಾಸಕನು.

ಅನಿರುದ್ಧನು ಶತ್ರುಘ್ನನ ಅವತಾರನು!!

ಸುಬ್ರಹ್ಮಣ್ಯದಲ್ಲಿ ವಾಸುಕಿ ನೆಲೆಸಿರುವನು.

ನಮ್ಮಲ್ಲಿ ಹರಿಯೊಬ್ಬನನ್ನು ಬಿಟ್ಟರೆ ಇನ್ನೆಲ್ಲರೂ ಹರಿದಾಸರಲ್ಲವೇ?

ಈ ನಿಟ್ಟಿನಲ್ಲಿ ವೈಷ್ಣವ ನಾಗಾರಾಧನೆಯನ್ನು ( ಸರ್ಪೋಪಾಸನೆ ) ಸರಿಯಾಗಿ ತಿಳಿದು ಉಪಾಸನೆ ಮಾಡಿದರೆ, ಸರ್ಪ ದೋಷದ ನಿವೃತ್ತಿಯಾಗಿ ಧನ – ಸಂತಾನ ಪ್ರಾಪ್ತಿ ಮುಂತಾದವುಗಳ ಜೊತೆಗೆ ದುರ್ಲಭವಾದ ತತ್ತ್ವಜ್ಞಾನ ಪ್ರಾಪ್ತವಾಗುವುದು!!

” ವಿಶೇಷ ವಿಚಾರ ”

ಈ ಫೋಟೋದಲ್ಲಿ ಇರುವ ರಜತ ( ಬೆಳ್ಳಿ ) ಮತ್ತು ಸ್ವರ್ಣ ( ಬಂಗಾರ ) ಒಂದು ಹೆಡೆಯ ನಾಗರಹಾವಿನ ಪದಕ ಮತ್ತು ಮೂರ್ತಿಯನ್ನು – ನನ್ನ ತಂದೆಯವರಾದ ಪ್ರಾತಃ ಸ್ಮರಣೆಯ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರು ತಮ್ಮ ಸ್ವ ಹಸ್ತಗಳಿಂದ ತಯಾರಿಸಿ ಪ್ರೀತಿಯಿಂದ ನನಗೆ ಕೊಟ್ಟಿದ್ದು – ಪ್ರತಿನಿತ್ಯ ನನ್ನ ಮನೆಯಲ್ಲಿ ಪೂಜೆಗೊಳ್ಳುತ್ತಿವೆ.

ನಮ್ಮ ಮನೆದೇವರು ಶ್ರೀ ಕುಕ್ಕೆ ಸುಬ್ರಹ್ಮಣ್ಯದೇವರು.

” ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ ಶ್ರೀ ನಾಗ ಚತುರ್ಥೀ ಶುಭಾಶಯಗಳು ”

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";