ಬೆಂಗಳೂರು: ವರ್ಷಕ್ಕೆ ₹40 ಲಕ್ಷ ಮೌಲ್ಯದ ವ್ಯವಹಾರ ನಡೆಯುತ್ತಿದ್ದರೆ ಸಾಕು, ಜಿಎಸ್‍ಟಿ ಪಾವತಿಸಬೇಕು ಎಂಬುದನ್ನು ಮುಂದಿಟ್ಟುಕೊಂಡು ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‍ಟಿ ನೋಟಿಸ್‌ಗಳನ್ನು ನೀಡುತ್ತಿದೆ. ನಗದು, ಯುಪಿಐ, ಪಿಓಎಸ್ ಅಥವಾ ಬ್ಯಾಂಕ್ ವಹಿವಾಟು ಎಲ್ಲವೂ ಈ ಲೆಕ್ಕಾಚಾರದಲ್ಲಿ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕರೂ ತಮ್ಮ ಅಂಗಡಿಗಳಲ್ಲಿ ಯುಪಿಐ ಸ್ಕ್ಯಾನರ್ ತೆಗೆದು ನಗದು ಪಾವತಿಗೆ ಆದ್ಯತೆ ನೀಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, “ಜಿಎಸ್‍ಟಿ ಅನ್ನು ತರುವ ಕೆಲಸ ಕೇಂದ್ರ ಸರ್ಕಾರದ್ದು. ಜಿಎಸ್‍ಟಿ ಕೌನ್ಸಿಲ್ ಕೂಡಾ ಅವರ ಅಧೀನದಲ್ಲಿದೆ. ತೆರಿಗೆ ನೀತಿಗಳನ್ನೂ ಅವರು ನಿಗದಿಪಡಿಸುತ್ತಾರೆ,” ಎಂದು ಹೇಳಿದರು.
ಡಿಜಿಟಲ್ ಇಂಡಿಯಾದ ಪಾರದರ್ಶಕತೆಗಾಗಿ ತಯಾರಾದ ಯುಪಿಐ ವ್ಯವಸ್ಥೆಯೇ ಈಗ ಸಣ್ಣ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದೆ ಎಂಬ ಆರೋಪಗಳ ನಡುವೆಯೇ, ಬಿಹಾರದ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿದ್ದೀರಿ ಎಂಬ ಆರೋಪವನ್ನು ಬಿಜೆಪಿ ಮಾಡಿದೆ. ಈ ಆರೋಪಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, “ಇದು ಕೇಂದ್ರದ ತೀರ್ಮಾನ, ರಾಜ್ಯದಲ್ಲ” ಎಂದು ಬಿಟ್ಟುಕೊಟ್ಟಿಲ್ಲ.