ಕೊಪ್ಪಳ, ಜುಲೈ 21 –
ಸಂಡೂರು ಉಪಚುನಾವಣೆ ಬಳಿಕ ಉದ್ಭವಿಸಿದ್ದ ಅಂತರಕಲಹದ ವಾತಾವರಣ ಇದೀಗ ಶಮನಗೊಂಡಿದ್ದು, ಬಿಜೆಪಿಯ ಹಿರಿಯ ನಾಯಕರು ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಮತ್ತೆ ಒಂದಾದ ದೃಷ್ಯ ಕೊಪ್ಪಳ ಜಿಲ್ಲೆಯ ಮರಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಣಸಿಕ್ಕಿದೆ.
ಭಾನುವಾರ ನಡೆದ ಬಿಜೆಪಿ ಅವಲೋಕನಾ ಸಭೆಯಲ್ಲಿ ಇಬ್ಬರೂ ನಾಯಕರೂ ಒಂದೇ ವೇದಿಕೆಯಲ್ಲಿ ಭಾಗವಹಿಸಿ, ತಮ್ಮ ನಡುವಿನ ವೈಮನಸ್ಸಿಗೆ ತೆರೆ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದರು. ಸಭೆ ಮೋದಿಯವರ 11 ವರ್ಷಗಳ ಸಾಧನೆಗೆ ಸಮರ್ಪಿತವಾಗಿತ್ತು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವ ನೀಡಿದರು.
ವಿಜಯೇಂದ್ರ ಅವರು ಎರಡೂ ನಾಯಕರ ಕೈ ಹಿಡಿದು, ಪಕ್ಷದ ಏಕತೆಗೂ, ಸಹಕಾರಕ್ಕೂ ಪ್ರೇರಣೆ ನೀಡಿದರು. ಈ ವೇಳೆ ರೆಡ್ಡಿ ಮತ್ತು ಶ್ರೀರಾಮುಲು ಅಕ್ಕಪಕ್ಕದಲ್ಲಿ ಕುಳಿತು ಮಾತನಾಡಿದರು.
ನಮ್ಮದು ಸ್ನೇಹದ ಜಗಳ” – ಜನಾರ್ದನ ರೆಡ್ಡಿ
ರೆಡ್ಡಿ ಮಾತನಾಡುತ್ತಾ, “ನಮ್ಮ ನಡುವೆ ಮಧ್ಯಸ್ಥಿಕೆ ಬೇಕು ಎಂದು ಯಾರುಕಾದರೂ ಯೋಚಿಸುತ್ತಿದ್ದರೆ ಅದು ಮೂರ್ಖತನ. ನಮ್ಮದು ಸ್ನೇಹದ ಜಗಳ. ಇದರಿಂದ ಲಾಭ ಪಡೆಯಲು ಯತ್ನಿಸಿದವರಿಗೆ ಏನೂ ಸಿಗಲ್ಲ,” ಎಂದು ಸ್ಪಷ್ಟಪಡಿಸಿದರು.
“ಕಾಂಗ್ರೆಸ್ ಮಾದರಿಯ ಕುಲಕುಟುಮ ಕಾಲವಲ್ಲ” – ಶ್ರೀರಾಮುಲು
ಶ್ರೀರಾಮುಲು ಅವರು, “ಪಕ್ಷದ ವಿಚಾರ ಬಂದಾಗ ನಾವು ಮಾದರಿಯಾಗಬೇಕು. ಎಲ್ಲರೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಜನಾರ್ದನ ರೆಡ್ಡಿಯವರೊಂದಿಗೆ ನನಗೆ ಯಾವುದೇ ವೈಷಮ್ಯವಿಲ್ಲ,” ಎಂದು ಭರವಸೆ ನೀಡಿದರು.
ಪಕ್ಷ ಬೇರಿನಿಂದ ಗಟ್ಟಿ ಮಾಡೋಣ – ವಿಜಯೇಂದ್ರ ಕರೆ
ಸಭೆಯಲ್ಲಿದಂತೆ ವಿಜಯೇಂದ್ರ ಅವರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ, “ಪಕ್ಷವನ್ನು ಗಟ್ಟಿ ಮಾಡುವ ಕೆಲಸ ನೆಲಮಟ್ಟದಿಂದ ಪ್ರಾರಂಭಿಸೋಣ,” ಎಂದು ಕರೆ ನೀಡಿದರು.