ವಾಷಿಂಗ್ಟನ್: ಜಾಗತಿಕವಾಗಿ ತಂಪು ಪಾನೀಯಕ್ಕೆ ಹೆಸರುವಾಸಿಯಾಗಿರುವ ಕೋಕಾ-ಕೋಲಾ ಈಗ ತನ್ನ ಉತ್ಪನ್ನಗಳಿಗೆ ಕೃತಕ ಸಕ್ಕರೆಯ ಬದಲು ನೈಜ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ತಮ್ಮ ಸಲಹೆಯ ಮೇರೆಗೆ ಕೋಕಾ-ಕೋಲಾ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದ್ದು, ಇದು ಒಳ್ಳೆಯ ನಡೆ ಎಂದು ಟ್ರಂಪ್ ಕಂಪನಿಯನ್ನು ಶ್ಲಾಘಿಸಿದ್ದಾರೆ,
ಟ್ರುತ್ ಸೋಷಿಯಲ್‍ನಲ್ಲಿ ಬರೆದಿರುವ ಟ್ರಂಪ್ ನಾನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋಕ್ ಪಾನೀಯದಲ್ಲಿ ನಿಜವಾದ ಕಬ್ಬಿನ ಸಕ್ಕರೆಯನ್ನು ಬಳಸುವ ಬಗ್ಗೆ ಕೋಕಾ-ಕೋಲಾ ಕಂಪನಿ ಜೊತೆ ಮಾತನಾಡುತ್ತಿದ್ದೇನೆ, ನನ್ನ ಸಲಹೆಯನ್ನು ಕಂಪನಿ ಕೂಡಾ ಒಪ್ಪಿಕೊಂಡಿದೆ, ಕೋಕಾ-ಕೋಲಾದ ನಿರ್ಧಾರಕ್ಕೆ ನಾನು ಅದರ ಅಧಿಕಾರದಲ್ಲಿರುವ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಇದು ಕಂಪನಿಯ ಒಂದು ಉತ್ತಮ ಕ್ರಮವಾಗಿದೆ, ಮುಂದೆ ಈ ಪಾನೀಯ ಇನ್ನು ಉತ್ತಮವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ,
ಕತೂಹಲಕಾರಿಯಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಕೋಕಾ-ಕೋಲಾ ಮೇಲಿನ ಒಲವು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಇದೆ, ಈ ವರ್ಷ ಜನವರಿ 15 ರಂದು ಟ್ರಂಪ್ ತಮ್ಮ ಅಧಿಕಾರ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಡಯಟ್ ಕೋಕ್ ನ ಸಂಶೋಧನೆ ಶ್ಲಾಘಿಸಿದ್ದರು, ಇಬ್ಬರು ಕೋಕ್ ಮೇಲಿನ ಒಲವನ್ನು ವ್ಯಕ್ತಪಡಿಸಿದ್ದರು,
ಇಷ್ಟು ಮಾತ್ರವಲ್ಲದೇ ಮಸ್ಕ್ ಕೋಕಾ-ಕೋಲಾ ಸಿಇಒ ಜೇಮ್ಸ್ ಕ್ವಿನ್ಸಿ ಅವರೊಂದಿಗೆ ಟ್ರಂಪ್ ಅವರು ಇರುವ ಫೋಟೋವನ್ನು ಹಂಚಿಕೊಂಡಿದ್ದರು, ಅವರು ಟ್ರಂಪ್ ಅವರಿಗೆ ಸ್ಮರಣಾರ್ಥವಾಗಿ ಡಯಟ್ ಕೋಕ್ ನ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದರು,
Veekay News > National News > ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!
ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!
ವೀ ಕೇ ನ್ಯೂಸ್17/07/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply