Live Stream

[ytplayer id=’22727′]

| Latest Version 8.0.1 |

Chikkaballapur

ಪಕ್ಷ ಸಂಘಟಿಸುವ ಪಣ : ಸೀಕಲ್ ರಾಮಚಂದ್ರಗೌಡ

ಪಕ್ಷ ಸಂಘಟಿಸುವ ಪಣ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ರಾಜಕೀದ ಎಲ್ಲ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ ಅವುಗಳನ್ನ ಮೀರಿ, ಪಕ್ಷ ಬಲವರ್ಧನೆಗೆ ಸಂಘಟಣೆ ಮಾಡುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿರುವ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಈ ಜಿಲ್ಲೆಯಲ್ಲಿ 30-40 ವರ್ಷಗಳ ಹಿಂದೆ ಪಕ್ಷ ಇಲ್ಲದ ಸಂದರ್ಭದಲ್ಲಿಯೇ ತನು-ಮನ-ಧನ ಅರ್ಪಿಸಿ ಕೆಲಸ ಮಾಡಿದ ಹಲವು ಹಿರಿಯರಿದ್ದಾರೆ, ಅವರನ್ನೆಲ್ಲಾ ಮತ್ತೆ ಸಂಪರ್ಕಿಸಿ, ಮಾತುಕತೆ ನಡೆಸಿ, ಸಂಘಟನೆಯನ್ನು ಬಲಗೊಳಿಸುವ ಕೆಲಸವನ್ನು ನಾವು ಆರಂಭಿಸಿದ್ದೇವೆ. ಹಲವರು ಯಾವುದೇ ಕಾರಣಗಳಿಂದಾಗಿ ದೂರ ಇದ್ದರೂ, ಈಗ ಮತ್ತೆ ಒಗ್ಗೂಡಿಸುವ ಸಂದರ್ಭ ಬಂದಿದೆ. ಅವರಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಒಗ್ಗೂಡಿಸುತ್ತಿದ್ದೇವೆ. ಹಿಂದಿನ ದಿನಗಳಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರು ಇತ್ತೀಚೆಗೆ ಮೌನವಾಗಿದ್ದರೆ, ಅವರನ್ನು ಸಂಪರ್ಕಿಸಿ ಅವರ ನಂಬಿಕೆ ಮರಳಿ ಪಡೆಯುವ ಯತ್ನ ನಡೆಯುತ್ತಿದೆ. ಮುಖಂಡರು ತಮ್ಮ ಹೋಬಳಿಗಳಲ್ಲಿ ಸಕ್ರಿಯರಾಗಿ ಕಾರ್ಯ ಆರಂಭಿಸಬೇಕೆಂದು ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಸಡಿಲವಾಗಿರುವ ಘಟಕಗಳನ್ನು ಬಲಪಡಿಸಬೇಕು ಎಂಬದೇ ಮೊದಲ ಗುರಿ ಎಂದರು.
ಮಾಜಿ ಶಾಸಕ ಎಂ ರಾಜಣ್ಣ ಪಕ್ಷದ ವಿರುದ್ಧ ಮಾತಾಡಿಲ್ಲ
ಇನ್ನು ಮಾಜಿ ಶಾಸಕ ಎಂ ರಾಜಣ್ಣ ಅವರು ಎಂದಿಗೂ ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ಮಾತನಾಡಿಲ್ಲ. ಅವರ ಬೆಂಬಲಿಗರಲ್ಲಿ ಕೆಲವರಿಗೆ ಅವಕಾಶ ಸಿಗದ ಕಾರಣ ಬೇಸರವಿರಬಹುದು. ಆದರೆ ಇದು ರಾಜಕೀಯದಲ್ಲಿ ಸಹಜ. ಕೆಲವು ನಾಯಕರ ಅಭಿಪ್ರಾಯ ವ್ಯತ್ಯಾಸಗಳು ಇದ್ದರೂ, ಪಕ್ಷ ಕಟ್ಟುವ ಕಾರ್ಯದಲ್ಲಿ ನಾವು ಒಂದಾಗಿ ನಡೆಯುತ್ತಿದ್ದೇವೆ. ನಾನು ಹಾಗೂ ಅವರು ಒಟ್ಟಾಗಿ ಸಂಘಟನೆಯಲ್ಲಿ ಭಾಗಿಯಾಗಿದ್ದೇವೆ. ನಾನು ಯಾರಿಗೂ ವಿರುದ್ಧವಾಗಿ ನಡೆದುಕೊಂಡಿಲ್ಲ. ನನ್ನ ಅಧ್ಯಕ್ಷತೆಯ ಕೆಲಸ ಆರಂಭವಾಗಿದೆಯೆ ಹೊರತು, ನಿರ್ಧಾರಗಳ ಬಗ್ಗೆ ಯಾರನ್ನೂ ಬೇಸರ ಪಡಿಸುವ ಉದ್ದೇಶವಿಲ್ಲ. ಆಸಕ್ತಿ ಇರುವವರಿಗೆ ಅವಕಾಶ ನೀಡಲಾಗುತ್ತದೆ. ಇದು ಸಂಘಟನಾ ಪರ್ವ, ವ್ಯಕ್ತಿಗತ ನಾಯಕರ ಆಧಾರದ ಮೇಲೆ ಪಕ್ಷ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಯಾರಿಗೆ ಶಕ್ತಿ ಇದೆ, ಆಸಕ್ತಿ ಇದೆ, ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದಾರೆ ಅವರಿಗೆ ಅವಕಾಶ ನೀಡಲಾಗುತ್ತದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ನಾವು ಬಲಿಷ್ಠ ಘಟಕ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇವೆ. ಜೊತೆಗೆ ಜಿಲ್ಲೆಯ ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಕಾರ್ಯಚರಣೆ ನಡೆಯಲಿದೆ. ಈ ಭಾಗದಲ್ಲಿ ನನ್ನ ಸಹೋದರ ಕಾರ್ಯಕರ್ತರಾಗಿದ್ದರೆ, ಅವರಿಗೆ ಅವಕಾಶ ದೊರೆತಿದ್ದರೆ ಅದು ಪಕ್ಷದ ಒಳಾಂಗಣ ನಿರ್ಧಾರ. ಯಾರನ್ನಾದರೂ ಬದಲಾಯಿಸಬೇಕೆಂಬುದು ನನ್ನ ಉದ್ದೇಶವಲ್ಲ. ನಾನು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಜಿಲ್ಲೆಯಾದ್ಯಂತ ಏಕತಾ, ಸಂಘಟನೆ, ಶಕ್ತಿ ಪ್ರದರ್ಶನ ಎಂಬ ತತ್ವದೊಂದಿಗೆ ಮುಂದುವರೆಯುತ್ತಿದ್ದೇನೆ. ನಾವು ಎನ್‌ಡಿಎ ಭಾಗವಾಗಿದ್ದೇವೆ. ಬಿಜೆಪಿ, ಜೆಡಿಎಸ್ ನಡುವಿನ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಹೈಕಮಾಂಡ್ ನಿರ್ದರಿಸುತ್ತದೆ. ನಾವು ಹೈಕಮಾಂಡ್ ನಿಲುವಿಗೆ ಭದ್ರವಾಗಿ ಇರುತ್ತೇವೆ. ಬಿಜೆಪಿ ಪಕ್ಷದ ಶಿಸ್ತಿನಲ್ಲಿ ಸಾಗುತ್ತಿದ್ದೇವೆ. ಎಲ್ಲಾ ಹಿರಿಯರಿಗೂ, ಹಳೆಯ-ಹೊಸ ಕಾರ್ಯಕರ್ತರಿಗೂ ಎಲ್ಲರೂ ಬನ್ನಿ, ಕೈಜೋಡಿಸಿ. ಇದು ನಮ್ಮ ಪಕ್ಷದ ಪುನರ್ ನಿರ್ಮಾಣದ ಘಟ್ಟ. ಎಲ್ಲರ ಸಹಕಾರದಿಂದ ಶಿಡ್ಲಘಟ್ಟ ಕ್ಷೇತ್ರ ಬಿಜೆಪಿಗೆ ಬಲವಾಗುವುದು ಖಚಿತ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಮಾಜಿ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಕನಕ ಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಕೊತ್ತನೂರು ಜಗದೀಶ್,ಬಾಲಕೃಷ್ಣ, ರಾಮಕೃಷ್ಣ, ತಲದುಮ್ಮನಹಳ್ಳಿ ಮಧು ನಗರಾಧ್ಯಕ್ಷ, ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";