ಕರ್ನಾಟಕ ರಾಜ್ಯದಲ್ಲಿ ತುಮಕೂರು ಕಲೆಯ ತವರೂರಿನಂತಿದೆ. ಹಾಗೆಯೇ ತುಮಕೂರು ಜಿಲ್ಲೆಯಲ್ಲಿ ಮೆಳೇಹಳ್ಳಿ ಕಲೆಯ ತವರೂರಾಗಿದೆ. ಇಲ್ಲಿ ನಿರಂತರವಾಗಿ ನಾಡಿನ ಎಲ್ಲ ಮೂಲೆಗಳಿಂದ ಕಲಾತಂಡಗಳು ಬಂದು ಪ್ರಯೋಗ ನೀಡಿ ಹೋಗುತ್ತಿರುವುದು ಬಹಳ ವಿಶೇಷ. ಇಂದು ದೃಶ್ಯರಂಗ ತಂಡ, ಬೆಂಗಳೂರು ಇವರು ಸಂಸ್ಕøತ ಮೂಲದ ಶೂದ್ರಕ ಕವಿಯ ಮೃಚ್ಛಕಟಿಕ ನಾಟಕವನ್ನು ಬನ್ನಂಜೆ ಗೋವಿಂದಾಚಾರ್ಯರ ಅನುವಾದದಲ್ಲಿ ಪ್ರಯೋಗಿಸುತ್ತಿರುವುದು ಸಂತಸದ ವಿಷಯ ಎಂದು ನಿವೃತ್ತ ಶಿಕ್ಷಕ ಪ್ರಸಾದ್ ಅಭಿಪ್ರಾಯಪಟ್ಟರು.
ದಿನಾಂಕ 11-07-2025ನೇ ಶುಕ್ರವಾರ ಸಂಜೆ 6.30ಕ್ಕೆ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಲದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲಯದ ನೆರವಿನೊಂದಿಗೆ ಪ್ರಯೋಗ ಆಯೋಜಿಸಲಾಗಿತ್ತು. ಪ್ರೇಕ್ಷಕ ಗಣ್ಯರಾಗಿ, ನಿರ್ದೇಶಕರಾಗಿ ದಾಕ್ಷಾಯಿಣಿ ಭಟ್, ನಿವೃತ್ತ ಶಿಕ್ಷಕ ನಟರಾಜು, ದೇಸಿ ರಂಗನಿರ್ದೇಶಕ ಮೆಳೇಹಳ್ಳಿ ದೇವರಾಜ್ ಹಾಗೂ ಮುದ್ದುರಂಗಪ್ಪ ಉಪಸ್ಥಿತರಿದ್ದರು.
ಬೌದ್ಧ ಧರ್ಮದ ಪ್ರಭಾವವಿರುವ ಕವಿ, ಹೆಣ್ಣು, ಹೊನ್ನು, ಅಧಿಕಾರಕ್ಕಿಂತ ಪ್ರೀತಿ, ವಿಶ್ವಾಸ, ನಂಬಿಕೆಗಳು ಧೀರ್ಘವಾಗಿ ಉಳಿಸುತ್ತಿವೆ ಮತ್ತು ಮನುಷ್ಯನನ್ನು ಉಳಿಸುತ್ತವೆ. ಆಸೆ ಒಂದು ಆಟದ ಬಂಡಿಯಂತೆ. ಅದನ್ನು ನಿಯಂತ್ರಿಸುವ ಹೊಣೆ ಚಾಲಕನದೇ. ಧರ್ಮದ ಪರವಾದವನಿಗೆ ಜಯ ದೊರಕೇ ದೊರಕುತ್ತದೆ ಎಂಬುದನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರು ಹೆಚ್ಚು ರಂಗಸಜ್ಜಿಕೆ, ಪರಿಕರಗಳನ್ನು ಬಳಸದೇ ನಟರನ್ನೇ ದುಡಿಸಿಕೊಂಡು ಕಟ್ಟಿಕೊಟ್ಟಿದ್ದಾರೆ. ಪ್ರಯೋಗ ಮರುಪ್ರಯೋಗಗೊಳ್ಳಲೆಂದು ಆಶಿಸೋಣ.
ಡಮರುಗ ಉಮೇಶ್