ಬೆಂಗಳೂರು: ಬೃಹತ್ ಬೆಂಗಳೂರಿಗರಿಗೆ ಸಧ್ಯ ಆಟೋ ದರ ಏರಿಸಿರುವ ಶಾಕ್ ನೀಡಿದಂತಾಗಿದೆ. ಆಗಸ್ಟ್ 1 ರಿಂದಲೇ ಹೊಸ ದರ ಅನ್ವಯವಾಗಲಿದೆ ಎನ್ನಲಾಗಿದ್ದು, ಸದ್ಯ ಕನಿಷ್ಠ ದರ ಈಗ 30 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‍ಗೆ 15 ರೂಪಾಯಿ ದರ ಇರುವುದು. ಮಾರ್ಚ್ ತಿಂಗಳಿನಲ್ಲಿ ಹಲವು ಆಟೋ ಸಂಘಟನೆಗಳವರು ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಹಸಿರು ನಿಶಾನೆ ನೀಡಿದ್ದಾರೆ.
ಹೊಸ ದರ ಈಗ 36 ರೂಪಾಯಿಗೆ ಏರಿಕೆಮಾಡಲು ನಿರ್ಧರಿಸಿದೆ. ಮೊದಲ 2 ಕಿಮೀಗೆ 36 ರೂಪಾಯಿ ಇರಲಿದ್ದು, ನಂತರದ ಪ್ರತಿ ಕಿ.ಮೀಟರ್‍ಗೆ 18 ರೂಪಾಯಿ ಎಂದು ನಿಗದಿ ಮಾಡಲಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಅರ್ಧ ಪಟ್ಟು ಹೆಚ್ಚು ತೆಗೆದುಕೊಳ್ಳಬಹುದಾಗಿದೆ. (ಸಾಮಾನ್ಯ ದರಕ್ಕಿಂತ ಅರ್ಧ ಪಟ್ಟು ಹೆಚ್ಚು) ಮಾಡಬಹುದಾಗಿದೆ. ಕಾಯುವಿಕೆ ದರ ಹೆಸರಿನಲ್ಲಿ ಐದು ನಿಮಿಷ ಉಚಿತ ಇರಲಿದೆ. ನಂತರದ 5 ನಿಮಿಷಗಳ ನಂತರ ಅಂದರೆ, ಪ್ರತಿ 15 ನಿಮಿಷ ಅಥವಾ ಅರ್ಧ ಭಾಗಕ್ಕೆ 10 ರೂ., ಲಗೇಜ್ ದರ ಮೊದಲ 20 ಕೆಜಿ ಯವರೆಗೂ ಉಚಿತ ಎಂದು ನಿರ್ಧರಿಸಿಲಿದೆ.
20 ಕೆಜಿ ಮೇಲ್ಪಟ್ಟ ತೂಕದ ಲಗೇಜ್‍ಗೆ 10 ರೂ. ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆಜಿಗೆ 10 ರೂಪಾಯಿ ನಿಗದಿಪಡಿಸಲಾಗಿದೆ.
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು.