Live Stream

[ytplayer id=’22727′]

| Latest Version 8.0.1 |

Dharwad

ನಟಿ ಸರೋಜಾದೇವಿ ನಿಧನ – ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ತೀವ್ರ ಸಂತಾಪ.

ನಟಿ ಸರೋಜಾದೇವಿ ನಿಧನ – ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ತೀವ್ರ ಸಂತಾಪ.
ಬೆ0ಗಳೂರು/ಹುಬ್ಬಳ್ಳಿ.  ಕನ್ನಡದ ಗಿಳಿ ಅಭಿನಯ ಸರಸ್ವತಿ, ಸರಳ ಸಜ್ಜನಿಕೆ ಹೆಸರುವಾಸಿಯಾದ ಬಹುಬಾಷಾ ನಟಿ ಶ್ರೀಮತಿ ಬಿ. ಸರೋಜಾದೇವಿ ಇವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಅವರು, ಸುಮಾರು 6 ರಿಂದ 7 ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಹಿರಿಯ ನಟಿ ಬಿ. ಸರೋಜಾದೇವಿ ಅವರು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತುಮಿಳು ಭಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅಭಿನಯ ಸರಸ್ವತಿ ಎಂದು ಪ್ರಖ್ಯಾತಿಯನ್ನು ಪಡೆದಿದ್ದರು. “ಕಿತ್ತೂರು ಚೆನ್ನಮ್ಮ” ಚಲನ ಚಿತ್ರದಲ್ಲಿ ರಾಣಿ ಚೆನ್ನಮ್ಮನಾಗಿ ಸರೋಜಾದೇವಿ ಅವರ ಮನೋಜ್ಞ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟಿದ್ದಂತಿದೆ ಎಂದು ಹೇಳಿರುವ ಶ್ರೀ ಬಸವರಾಜ ಹೊರಟ್ಟಿ, ರಾಣಿ ಕಿತ್ತೂರ ಚೆನ್ನಮ್ಮನನ್ನು ನೋಡಿರದ ತಾವು ಶಾಲಾ ದಿನಗಳಲ್ಲಿ ಬಿ. ಸರೋಜಾದೇವಿ ಅವರನ್ನೇ ಚೆನ್ನಮ್ಮ ರಾಣಿ ಎಂದೇ ಭಾವಿಸಿದ್ದು, ಇಂದಿಗೂ ತಮ್ಮ ಸ್ಮೃತಿ÷ ಪಟಲದಲ್ಲಿದೆ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಕನ್ನಡದಲ್ಲಿ ಡಾ. ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣ ಕುಮಾರ್, ತಮಿಳಿನ ಶಿವಾಜಿ ಗಣೇಶನ್, ಎಂ.ಜಿ ರಾಮಚಂದ್ರನ್, ತೆಲುಗು ನಟ ಎನ್.ಟಿ.ಆರ್, ನಾಗೇಶ್ವರರಾವ್ ಸೇರಿದಂತೆ ಹಲವು ಖ್ಯಾತನಾಮ ಕಲಾವಿದರೊಂದಿಗೆ ನಟಿಸಿದ್ದ ಸರೋಜಾದೇವಿ ಅವರು ಕನ್ನಡದ ಮೊಟ್ಟ ಮೊದಲ ಸೂಪರ್‌ಸ್ಟಾರ್ ಲೇಡಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ರಾಜ್ಯ, ರಾಷ್ಟç ಮತ್ತು ಚಿತ್ರರಂಗದ ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಕನ್ನಡದ ಅಪ್ರತಿಮ ಕಲಾವಿದೆಯಾಗಿದ್ದ ಬಿ. ಸರೋಜಾದೇವಿ ಅವರ ನಿಧನದಿಂದ ಕನ್ನಡದ ಸಾಂಸ್ಕೃತಿಕ ಲೋಕ ಒಂದು ಅನರ್ಘ್ಯ ರತ್ನವನ್ನು ಕಳೆದುಕೊಂಡAತಾಗಿದೆ ಎಂದು ಶ್ರೀ ಬಸವರಾಜ ಹೊರಟ್ಟಿ ಕಂಬಿನಿ ಮಿಡಿದಿದ್ದಾರೆ.
ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
VKNEWS DIGITAL :
- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";