ಬೆಂಗಳೂರು: ಬೆಂಗಳೂರು ನಗರದಲಿಲ ಚಿನ್ನದ ಬೆಲೆ ವಾರ ಏರಿಕೆ ಕಂಡಿದ್ದು, 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 9,140 ರೂ.ನಿಂದ 9,155 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ ಎಂದು ತಿಳಿದುಬಂದಿದೆ. 24 ಕ್ಯಾರಟ್ ಚಿನ್ನದ ಬೆಲೆ 9,988 ರೂ.ಗೆ ತಲುಪಿದ್ದು, ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಕಡೆ ಬೆಳ್ಳಿ ಬೆಲೆ 100 ಗ್ರಾಮ್‌ಗೆ 11,500 ರೂ. ಇದ್ದರೆ, ಚೆನ್ನೆöÊ ಮತ್ತು ಕೇರಳದಲ್ಲಿ 12,500 ರೂ. ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆಯು ಸ್ಥಿರ ಏರಿಕೆ ಕಂಡಿದೆ, ಆದರೆ ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 91,550 ರೂ. ಮತ್ತು 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 99,880 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 11,500 ರೂ.ನಲ್ಲಿ ಸ್ಥಿರವಾಗಿದೆ.
VK NEWS DIGITAL :