ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಒಟ್ಟು 14 ದೇಶಗಳ ಮೇಲೆ ಸುಂಕ ನೀತಿಯನ್ನು ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಕುಸಿತದಿಂದಲೇ ಪ್ರಾರಂಭವಾಗಿದೆ,
ಜಪಾನ್ ಮತ್ತು ದಕ್ಷಿಣ್ ಕೊರಿಯಾ ಸೇರಿದಂತೆ ಪ್ರಮುಖ ವ್ಯಾಪಾರ ಪಾಲುದಾರರಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಶೇ.25 ರಷ್ಟು ಸುಂಕವನ್ನು ಘೋಷಿಸಿದ್ದಾರೆ, ಜೊತೆಗೆ ಭಾರತದೊಂದಿಗೆ ವ್ಯಾಪಾರ ಒಪ್ಪಂದವು ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ,
ಟ್ರಂಪ್ ನ ಈ ಹೊಸ ನೀತಿಯಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ಸೂಚ್ಯಂಕವು ಶೇ.0.13 ರಷ್ಟು ಕುಸಿತ ಕಂಡು 25,427.85 ಕ್ಕೆ ಪ್ರಾರಂಭವಾದರೆ, ಬಿಎಸ್ಇ ಸೆನ್ಸೆಕ್ಸ್ ಕೂಡ ಶೇ.0.07 ರಷ್ಟು ಕುಸಿತ ಕಂಡು 83,387.03 ಕ್ಕೆ ಪ್ರಾರಂಭವಾಗಿದೆ,
Veekay News > State News > ಹೊಸ ಸುಂಕ ನೀತಿ ಪರಿಣಾಮ-ಷೇರು ಮಾರುಕಟ್ಟೆಯಲ್ಲಿ ರಕ್ತಪಾತ!
ಹೊಸ ಸುಂಕ ನೀತಿ ಪರಿಣಾಮ-ಷೇರು ಮಾರುಕಟ್ಟೆಯಲ್ಲಿ ರಕ್ತಪಾತ!
ವೀ ಕೇ ನ್ಯೂಸ್08/07/2025
posted on
