ನಾಟಕ ವಿಮರ್ಶೆ
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಏರ್ಪಡಿಸಿರುವ ಪೌರಾಣಿಕ ನಾಟಕೋತ್ಸವದಲ್ಲಿ ಭಾನುವಾರ ಡಿ.ಸಿ.ಪುಟ್ಟರಾಜು ನಿರ್ದೇಶನದಲ್ಲಿ ಹೇಮಾವತಿ ಸ್ವಯಂವರ ನಾಟಕ ಪ್ರದರ್ಶಿತವಾಯಿತು. ಇದು ಹಾಸನದಲ್ಲಿ ಹೊಸ ಪ್ರಯೋಗವೆಂದು ಪ್ರೇಕ್ಷಕರು ಕುತೂಹಲದಿಂದಲೇ ನಾಟಕ ವೀಕ್ಷಿಸಿದರು. ನಾನು ಕೂಡ ಕಡೆಯವರೆಗೂ ಕುಳಿತು ನಾಟಕ ವೀಕ್ಷಿಸಿದೆ. ನಾಟಕದಲ್ಲಿ ಮಹಾಭಾರತದಲ್ಲಿ ಇಲ್ಲದ ಪ್ರಸಂಗಗಳು ಇದ್ದು ಇದೊಂದು ಕಾಲ್ಪನಿಕ ನಾಟಕವಾಗಿತ್ತು. ಪಿತೃ ತರ್ಪಣ ಹಬ್ಬಕ್ಕೆ ಆಹ್ವಾನಿಸಲು ಧರ್ಮರಾಯನ ಅಣತಿಯಂತೆ ಭೀಮ ಹಸ್ತಿನಾವತಿಗೆ ಅರ್ಜುನ ದ್ವಾರಕೆಗೆ ಪ್ರಯಣಿಸುವ ಪ್ರಸಂಗ ಮತ್ತು ಕಾಶಿರಾಜ ತನ್ನ ಮಗಳು ಹೇಮಾವತಿಯ ಸ್ವಯಂವರ ಏರ್ಪಡಿಸಿ ಅಲ್ಲಿ ಭೀಮನಿಗೆ ಹೇಮಾವತಿ ಹಾರ ಹಾಕುವ ಪ್ರಸಂಗ ನಾಟಕದ ಕೇಂದ್ರಬಿ0ದುಗಳು. ನಾಟಕದ ನಿರ್ದೇಶಕರು ಪುಟ್ಟರಾಜು ತಿಳಿಸಿದಂತೆ ಈ ನಾಟಕವು ಕೆ.ಆರ್. ಪೇಟೆ ತಾಲ್ಲೂಕು ಮುರುಕನಹಳ್ಳಿ ಸಂಜೀವಯ್ಯನವರಿAದ ರಚಿಸಲ್ಪಟ್ಟು ಹಲವಾರು ವರ್ಷಗಳಿಂದ ತುಮಕೂರು ಆ ಕಡೆ ತುಂಬಾ ಪ್ರದರ್ಶನ ಕಂಡಿದೆಯ0ತೆ. ಸ್ವತ: ನಾನೇ ಹಲವಾರು ತಂಡಗಳಿಗೆ ಈ ನಾಟಕ ಕಲಿಸಿದ್ದೇನೆ ಎಂದರು. ಧರ್ಮರಾಯನು ಪಿತೃತರ್ಪಣ ಹಬ್ಬ ಪ್ರಾರಂಭಿಸಿದನು ಎಂಬ ನಂಬಿಕೆಯಲ್ಲಿ ಹೊಸ ಕಥೆ ರೂಪು ತೆಳೆದಿರಬಹುದು. ಕರ್ಲೆ ಗೊವಿಂದೇಗೌಡ್ರು ಇದಕ್ಕೊಂದು ಉಪಕಥೆ ಹೇಳಿದರು. ಹಿಂದೆ ಯಾವುದೋ ಒಂದು ಹಳ್ಳಿಯಲ್ಲಿ ಪಿತೃಪಕ್ಷ ಹಬ್ಬಕ್ಕೆ ನಾಟಕ ಕಲಿಯಲು ಮೇಷ್ಟçನ್ನು ಕರೆಸಿದರಂತೆ. ಕುರುಕ್ಷೇತ್ರ, ರಾಮಾಯಣ ನಾಟಕ ಆಡಿ ಆಡಿ ಎಲ್ಲಾ ಪಾತ್ರಗಳ ಆಳ ಅಗಲ ಬಲ್ಲವರಾಗಿದ್ದ ಕಲಾವಿದರು ಯಾವುದಾದರೂ ಹೊಸ ನಾಟಕ ಕಲಿಸಿ ಮೇಷ್ಟೆ ಎಂದರ0ತೆ. ಆಯ್ತತ್ರಪ್ಪ, ಒಂದು ತಿಂಗಳು ಟೈಂ ಕೊಡಿ ನಾನು ಹೊಸ ನಾಟಕ ರ್ಕೊಂಡು ಬರ್ತಿನಿ. ಆದರೆ ನೀವು ಕಲಾವಿದರು ಆ ಪಾತ್ರ ಏಕೆ, ಈ ಪಾತ್ರ ಚಿಕ್ಕದು, ನನಗೆ ದುರ್ಯೋಧನ ಪಾತ್ರವೇ ಬೇಕು, ಕೃಷ್ಣ ನನಗೆ ಮೀಸಲಿರಲಿ ಎಂದೆಲ್ಲಾ ಕೇಳಬಾರದು. ನಾನು ಕೊಟ್ಟ ಪಾತ್ರವನ್ನು ಅಭಿನಯಿಸಬೇಕು ಎಂದು ಈ ಚಂಡಾಸುರ ಕಥೆ ಹೇಳಿದರಂತೆ.
ಕಥೆಯ ತಲೆಬುಡ ತಿಳಿಯದೆ ಪಾತ್ರದಾರಿಗಳು ತಲೆ ಅಲ್ಲಾಡಿಸಿ ಒಪ್ಪಿಕೊಂಡರ0ತೆ. ಒಬ್ಬ ವಿಮರ್ಶಕ ನಾಟಕದಲ್ಲಿ ಸತ್ತವನು ಮತ್ತೇ ಎದ್ದು ಬರುತ್ತಾನೆ ಎಂದಮೇಲೆ ನಾಟಕವೇ ಸುಳ್ಳು ಎಂದನ0ತೆ. ಇರಲಿ ಇಲ್ಲಿ ಹೇಮಾವತಿ ಸ್ವಯಂವರದಲ್ಲಿ ಸುಮಾರು 35 ದೃಶ್ಯಗಳು ಆಷಾಡದ ಮಳೆಯಲ್ಲಿ ಹೇಮಾವತಿ ಹೊಳೆಯ ನೀರು ಸರಸರನೆ ಹರಿದಂತೆ ಹಾಡುಗಳಲ್ಲೇ ಸಾಗಿ ಸಂಭಾಷಣೆ ನಗಣ್ಯವಾಗಿದೆ. ಹಸ್ತಿನಾವತಿಗೆ ಬರುವ ಭೀಮನನ್ನು ದುರ್ಯೋಧನನ ರಾಜಸಭೆಯಲ್ಲಿ ಅವಮಾನಿಸುವ ದೃಶ್ಯಕಲ್ಪನೆ ಕುರುಕ್ಷೇತ್ರ ನಾಟಕದ ಶ್ರೀಕೃಷ್ಣ ಸಂಧಾನ ನೆನಪಿಸುತ್ತದೆ. ಅರ್ಜುನನ ಆಹ್ವಾನಕ್ಕೆ ಆಗಮಿಸಿ ಶ್ರೀಕೃಷ್ಣ ಬಲರಾಮರು ಧರ್ಮರಾಯನ ಪಿತೃತರ್ಪಣದಲ್ಲಿ ಪಾಲ್ಗೊಳ್ಳುವುದು ನಮ್ಮ ಹಿರೀಕರು ಎಡೆ ಇಟ್ಟು ಆಚರಿಸುವ ಪಿತೃಪಕ್ಷ ಹಬ್ಬದ ಸಂಪ್ರದಾಯ ನೆನಪಿಸುತ್ತದೆ. ಇನ್ನೂ ಹೇಮಾವತಿ ಸ್ವಯಂವರದಲ್ಲಿ ದುರ್ಯೋಧನ ದುಶ್ಯಾಸನ ಶಕುನಿ ವಿಧುರ ಒಂದು ಕಡೆಯಿಂದ ಭೀಮ ಅರ್ಜುನರು ಪಾಂಡವರ ಕಡೆಯಿಂದ ಜರಾಸಂಧ ಶಿಶುಪಾಲ ದಂತವಕ್ರ, ಶ್ರೀಕೃಷ್ಣ ಬಲರಾಮರು ಭಾಗವಹಿಸಿ ಕಾಶಿರಾಜನ ಆಸ್ಥಾನಕ್ಕೆ ಮಗ ಹೇಮಕಾಂತನು ತಂಗಿ ಹೇಮಾವತಿಯನ್ನು ಕರೆತರುವ ಸನ್ನಿವೇಶದಲ್ಲಿ ಬಹುತೇಕ ನಾಟಕದ ಮುಖ್ಯ ಪಾತ್ರಗಳು ಬಂದು ರೋಷಾವೇಶದ ಆರ್ಭಟವೇ ಮೆರೆಯುತ್ತದೆ.
ಹೇಮಾವತಿ ಭೀಮನನ್ನು ವರಿಸಿ ಅವರಿಬ್ಬರು ಅರಮನೆಯಲ್ಲಿ ಮಲಗಿರಲು ಜರಾಸಂಧ ಶಿಶುಪಾಲರು ಹೇಮಾವತಿಯನ್ನು ಹೊತ್ತೊಯ್ಯುವ ಪ್ರಯತ್ನವನ್ನು ಭೀಮನಿಂದಲೂ ತಡೆಯಲಾಗದೆ ಹೇಮಕಾಂತ ಓಡಿಸುತ್ತಾನೆ. ದುರ್ಯೋಧನನಿಗೆ ಮಾತು ಕೊಟ್ಟು ಚಂಡಾಸುರ ಹೇಮಾವತಿಯನ್ನು ಅಪಹರಿಸುವುದು ಸೀತಾಪಹರಣ ನೆನಪಿಸುತ್ತದೆ. ಚಂಡಾಸುರನ ಮಗಳು ಕಳಶಮುಖಿಯ ರಕ್ಷಣೆಯಲ್ಲಿ ಹೇಮಾವತಿಯನ್ನು ಇರಿಸಿ ಆಂಜನೇಯ ಅವಳೊಂದಿಗೆ ಹೋರಾಡುವ ದೃಶ್ಯದಲ್ಲಿ ಮೀಸೆ ತೆಗೆಯದ ಕಲಾವಿದರು ಹಾಸ್ಯ ಪ್ರದರ್ಶಿಸುವಲ್ಲಿ ದೃಶ್ಯ ಗಾಂಭಿರ್ಯಕ್ಕೆ ಧಕ್ಕೆಯಾಗುತ್ತದೆ. ಚಂಡಾಸುರನ ಮಕ್ಕಳು ಸತ್ತ ಸುದ್ಧಿ ಕೇಳಿ ಕೆರಳಿದ ಶಿವಭಕ್ತ ಚಂಡಾಸುರ ವರಕೊಟ್ಟ ಶಿವನನ್ನೆ ಹೀಗೆಳೆದು ಕಡೆಗೆ ಶ್ರೀಕೃಷ್ಣ ಶಿವನ ಸಮ್ಮುಖದಲ್ಲೇ ಅಂಜನೇಯನಿ0ದ ಚಂಡಾಸುರನ ವಧೆಯಾಗುವಲ್ಲಿಗೆ ನಾಟಕ ಅಂತ್ಯವಾಗುತ್ತದೆ.
ನಾಟಕದಲ್ಲಿ ದೈತ್ಯ ಪಾತ್ರಗಳಾಗಿ ದುರ್ಯೋಧನ (ಹೇಮಂತ್ಕುಮಾರ್), ಚಂಡಾಸುರ (ನಿರಂಜನ್) ಭೀಮ (ಸತೀಶ್ ಕಬ್ಬತ್ತಿ) ಜರಾಸಂಧ (ಭಾನುಪ್ರಕಾಶ್) ದಂತವಕ್ರ (ತಿಮ್ಮಣ್ಣ) ಶಿಶುಪಾಲ (ಶಂಕರ್ ಎಂ.ಜಿ) ದುಶ್ಯಾಸನ (ಕುಮಾರ್ ಕೆಂಚಟ್ಟಹಳ್ಳಿ) ಕನಕಾಕ್ಷ (ರಾಜಶೇಖರ್) ಆರ್ಭಟವೇ ಜೋರಾಗಿ ಗದೆಗಳು ತಿರುಗುತ್ತವೆ. ಧರ್ಮರಾಯನು (ರಮೇಶ್) ಕತ್ತಿ ಹಿಡಿಯುತ್ತಾನೆ. ಶ್ರೀಕೃಷ್ಣನ ಪಾತ್ರದಲ್ಲಿ ನಿಂಗರಾಜ್, ಆಂಜನೇಯ-ವೈಭವ್ ವೆಂಕಟೇಶ್, ಹೇಮಕಾಂತ-ಗಣೇಶ್ ಟೈಲರ್, ಧರ್ಮರಾಯ-ರಮೇಶ್, ಅರ್ಜುನ-ಅಶೋಕ ಟೈಲರ್, ಕರ್ಣ-ಸೋಮೇಗೌಡ, ಶಕುನಿ-ಮಂಜುನಾಥ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಾರದನ ಪಾತ್ರಕ್ಕೆ ಹಾಡುಗಳೇ ಪ್ರಧಾನವಾಗಿ (ಆನಂದ)ಮೂರ್ತಿ ಮುನ್ನೆಡೆಸುತ್ತಾರೆ. ಈಶ್ವರನ ಪಾತ್ರದಾರಿ ರವಿ ಕೆ. ಭಾವೋದ್ರೇಕಕ್ಕೆ ಒಳಗಾಗಿ ಕುಸಿದು ಬೀಳುತ್ತಾರೆ. ನಾಟಕದ ಪೋಷಕ ಪಾತ್ರಗಳು ಭೀಷ್ಮ (ನಂಜಪ್ಪ) ವಿಧುರ (ಮೂರ್ತಿ). ಸ್ತಿç ಪಾತ್ರಗಳನ್ನು ಇಬ್ಬರೇ ಕಲಾವಿದೆಯರು ಲಕ್ಷಿö್ಮ ಶ್ರೀಧರ್, ಭಾರತಿ ನಿಭಾಯಿಸುತ್ತಾರೆ. ಸೂತ್ರದಾರಿ ಪಾತ್ರದಲ್ಲಿ 7 ವರ್ಷದ ಬಾಲೆ ಪಿ.ಕೋಮಲ (ನಿರ್ದೇಶಕರ ಮಗಳು) ವಯಸ್ಸಿನ ಕಾರಣ ಪ್ರೇಕ್ಷಕರ ಮೆಚ್ಚಗೆಗೆ ಪಾತ್ರಳು. ಪಾತ್ರದಾರಿಗಳಲ್ಲಿ ರಂಗತಾಲೀಮಿನ ಕೊರತೆಯು ಸಂಭಾಷಣೆಗಳಲ್ಲಿ ತೊಡಕು ಗೋಚರಿಸುತ್ತದೆ. ಪಳಗಿದ ಕಲಾವಿದರು ಸರಿ.
ಹರ್ಮೋನಿಯಂ ಮಾಸ್ಟರ್ ಹಾಡು ಕಲಿಸುತ್ತಾರೆ ಓಕೆ. ಆದರೆ ಪ್ರಾಕ್ಟೀಸ್ನಲ್ಲಿ ಪರಸ್ಪರ ಸಂಭಾಷಣೆಗೆ ಪಾತ್ರದಾರಿಗಳು ಒಟ್ಟಾಗಿ ಬಾಗಿಯಾಗದೆ ದೃಶ್ಯಕಲ್ಪನೆ ತಿಳಿಯದೆ ಇದ್ದಲ್ಲಿ ರಂಗದ ಮೇಲೆ ಗಲಿಬಿಲಿಯಾಗುವುದು ಸಹಜವೇ. ಇನ್ನೂ ಹೇಮಾವತಿ ಮಲಗಿರಲು ಆಕೆಯ ಮುಂದೆಯೇ ಕಾಶಿರಾಜ (ರವಿ ಕೆ.ಎಸ್.) ರಾಣಿಯರ ಸರಸ ಸಲ್ಲಾಪದ ಹಾಡು ನೃತ್ಯ ಬೇಕಿರಲಿಲ್ಲ. ಪಾತ್ರದಾರಿಗಳಿಗೆ ಕೆಲವು ಪಾತ್ರಗಳು ಒಪ್ಪುವಂತಿರಲಿಲ್ಲ. ಹೀಗೆ ಹಲವು ಲೋಪದೋಷಗಳ ನಡುವೆಯೂ ಹೊಸ ಪ್ರಯೋಗವನ್ನು ರ್ವಾಗಿಲ್ಲ ಎಂದರು ಪ್ರೇಕ್ಷಕರು.
ಆರು ದಿನಗಳ ನಾಟಕೋತ್ಸವದಲ್ಲಿ ಮೂರು ಕುರುಕ್ಷೇತ್ರ ಎರಡು ರಾಮಾಯಣಗಳು ಇದ್ದು ಮೊದಲ ದಿನ ನಾನು ನೋಡಿದ ರಾಮಾಯಣದ ರಾಮಾಂಜನೇಯ ಸಮಾಗಮದಲ್ಲಿ ಅಂಜನೇಯ ಪಾತ್ರದಲ್ಲಿ ಪಿರುಮೇನಹಳ್ಳಿ ಮಲ್ಲೇಶಗೌಡರ ಹಾಡು, ಸೋಮವಾರ ಪ್ರದರ್ಶಿತ ಕುರುಕ್ಷೇತ್ರ ನಾಟಕದ ಗಂಗಾತೀರ ದೃಶ್ಯದಲ್ಲಿ ಕರ್ಣನ ಪಾತ್ರದಲ್ಲಿ ಅಶೋಕ ತೇಜೂರು, ಕುಂತಿ -ಲಕ್ಷಿö್ಮ ಶ್ರೀಧರ್ ಇವರ ನಡುವಣ ಸಂಭಾಷಣೆ ಮತ್ತು ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾದವು.
ಗೊರೂರು ಅನಂತರಾಜು, ಹಾಸನ.
ಮೊ:9449462879
VK News Digital – Today’s Headlines